1970ರ ಪ್ರೌಢಶಾಲೆಗಿಲ್ಲ ದುರಸ್ತಿ ಭಾಗ್ಯ

•ಛಾವಣಿ ಕುಸಿಯುವ ಭೀತಿಯಲ್ಲೇ ವಿದ್ಯಾರ್ಥಿಗಳಿಗೆ ಬೋಧನೆ •ಪಾಲಕರಲ್ಲಿ ಹೆಚ್ಚಿದ ಆತಂಕ

Team Udayavani, Jul 22, 2019, 10:57 AM IST

22-July-10

ಯಾದಗಿರಿ: ಗುರುಮಠಕಲ್ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ಕಟ್ಟಡ.

ಯಾದಗಿರಿ: ಕರ್ನಾಟಕ ಏಕೀಕರಣಕ್ಕೂ ಮುನ್ನ ನಿರ್ಮಾಣವಾಗಿರುವ ಸರ್ಕಾರಿ ಪ್ರೌಢಶಾಲೆ ಕಟ್ಟಡದ ಛಾವಣಿ ಸಂಪೂರ್ಣ ಶಿಥಿಲಗೊಂಡಿದ್ದು, ಆತಂಕದಲ್ಲಿಯೇ ಮಕ್ಕಳು ಪಾಠ ಆಲಿಸುವಂತಾಗಿದೆ.

ಗುರುಮಠಕಲ್ ನಗರದಲ್ಲಿ 1970ರಲ್ಲಿ ಮೈಸೂರು ರಾಜ್ಯವಿದ್ದ ಸಂದರ್ಭದಲ್ಲಿ ದಿ. ವೀರೇಂದ್ರ ಪಾಟೀಲ ಅವರಿಂದ ಉದ್ಘಾಟನೆಗೊಂಡಿರುವ ಪ್ರೌಢಶಾಲೆಯ ಕಟ್ಟಡ 18 ಕೊಠಡಿಗಳನ್ನು ಹೊಂದಿದೆ. ಮಳೆಯ ನೀರು ಗೋಡೆಗೆ ಇಳಿದು ಅಲ್ಲಲ್ಲಿ ಗೋಡೆಗಳು ಹಾಳಾಗುತ್ತಿದ್ದು, ಛಾವಣಿ ಈಗ ಶಿಥಿಲಾವಸ್ಥೆಗೆ ತಲುಪಿದ್ದು, ಶಿಕ್ಷಣ ಇಲಾಖೆ ಇತ್ತ ಗಮನ ಹರಿಸಬೇಕಿದೆ.

ಪ್ರಾಚೀನ ಶಾಲೆಯಲ್ಲಿ ಕನ್ನಡ, ತೆಲುಗು, ಹಿಂದಿ ಹಾಗೂ ಇಂಗ್ಲಿಷ್‌ ಮಾಧ್ಯಮ ಬೋಧಿಸಲಾಗುತ್ತಿದ್ದು, ಸುಮಾರು 450ಕ್ಕೂ ಹೆಚ್ಚು ಮಕ್ಕಳು ಇಲ್ಲಿ ನಿತ್ಯ ಜ್ಞಾನಾರ್ಜನೆಗೆ ಆಗಮಿಸುತ್ತಾರೆ. ಶಾಲೆಯ ಎಲ್ಲಾ ಕೊಠಡಿಗಳ ಛಾವಣಿಗೆ ಬಳಸಲಾದ ಸಲಾಕೆಗಳು ಕಾಣುತ್ತಿದ್ದು, ವಿಜ್ಞಾನ ಲ್ಯಾಬ್‌ ಛಾವಣಿಯ ಸಿಮೆಂಟ್ ಅರ್ಧದಷ್ಟು ಕುಸಿದು ಬಿದ್ದಿದೆ. ನಿತ್ಯ ಇಲ್ಲಿಗೆ ಆಗಮಿಸುವ ಮಕ್ಕಳು ಭಯದಲ್ಲಿಯೇ ಕಾಲ ಕಳೆಯುವಂತಾಗಿದೆ ಎನ್ನುತ್ತಾರೆ ಪಾಲಕರು.

ಬೆಳಗ್ಗೆ ಮನೆಯಿಂದ ಶಾಲೆಗೆ ಬರುವ ಮಕ್ಕಳು ಮರಳಿ ಮನೆ ತಲುಪುವ ಭರವಸೆಯಿಲ್ಲದ ಭಯ ಇಲ್ಲಿನ ಮಕ್ಕಳು ಹಾಗೂ ಶಿಕ್ಷಕರಲ್ಲಿ ಆವರಿಸಿದೆ. ಮಳೆಯಿಂದ ಹೊರ ಭಾಗದ ಗೋಡೆಗಳು ಪಾಚಿಗಟ್ಟಿದ್ದು, ಛಾವಣಿಯಿಂದ ಮಳೆ ನೀರು ಒಳಗೆ ಬರುತ್ತಿರುವುದರಿಂದ ಶಿಕ್ಷಕರ ಸಿಬ್ಬಂದಿ ಕೋಣೆಯಲ್ಲಿಯೂ ಕುಳಿತುಕೊಳ್ಳಲು ಆಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಅನಿವಾರ್ಯವಾಗಿ ದಿನ ಕಳೆಯುವಂತಾಗಿದೆ. ಸರ್ಕಾರಿ ಶಾಲೆಗೆ ಬಡವರ ಮಕ್ಕಳೇ ಹೆಚ್ಚಾಗಿ ಬರುತ್ತಾರೆ. ಅದಲ್ಲದೇ ಪ್ರೌಢಶಾಲೆಯೆಂದ ಮೇಲೆ ವಯಸ್ಸಿಗೆ ಬಂದ ಮಕ್ಕಳು ಇರುವುದರಿಂದ ದುರದೃಷ್ಟವಶಾತ್‌ ಏನಾದರೂ ಅವಘಡಗಳು ಸಂಭವಿಸಿದರೆ ಯಾರು ಹೊಣೆ ಎನ್ನುವ ಪ್ರಶ್ನೆ ಉದ್ಭವವಾಗಿದ್ದು, ಇಲ್ಲಿನ ಶಿಕ್ಷಕರಲ್ಲಿಯೂ ಕೂಡ ಭಯ ಆವರಿಸಿದೆ. ಈ ಹಿಂದೆ ಶಾಲೆಯ ಛಾವಣಿ ರಿಪೇರಿಗೆಂದು 12 ಲಕ್ಷ ರೂಪಾಯಿ ಮಂಜೂರಾಗಿದ್ದು, ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ ಎಂದು ತಿಳಿದು ಬಂದಿದ್ದು, ಈವರೆಗೆ ಕಾಮಗಾರಿ ಆರಂಭವಾಗಿಲ್ಲ. ಶಾಲೆಯ ಎಲ್ಲಾ ಕಟ್ಟಡಗಳ ಛಾವಣಿಯನ್ನು ತೆಗೆದು ಹೊಸದಾಗಿ ಹಾಕಬೇಕು. ಅಂದಾಗ ಮಾತ್ರ ಇಲ್ಲಿ ಭಯಮುಕ್ತ ಪಾಠ ಆಲಿಸಬಹುದು ಎನ್ನುತ್ತಾರೆ ಇಲ್ಲಿನ ಮಕ್ಕಳು.

ಟಾಪ್ ನ್ಯೂಸ್

Laxmi Hebbalkar  ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Test Cricket: ವರ್ಷದ ಮೊದಲ ಟೆಸ್ಟ್‌… ಕೆಲವರಿಗೆ ಅಂತಿಮ ಟೆಸ್ಟ್‌?

Test Cricket: ವರ್ಷದ ಮೊದಲ ಟೆಸ್ಟ್‌… ಕೆಲವರಿಗೆ ಅಂತಿಮ ಟೆಸ್ಟ್‌?

Minister ಸೋಮಣ್ಣ, ಸಿ.ಎಸ್‌. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್‌: ಬಂಧನ

Minister ಸೋಮಣ್ಣ, ಸಿ.ಎಸ್‌. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್‌: ಬಂಧನ

Sydney Test: ಕ್ರಿಕೆಟಿಗರನ್ನು ಭೇಟಿಯಾದ ಆಸೀಸ್‌ ಪ್ರಧಾನಿ

Sydney Test: ಕ್ರಿಕೆಟಿಗರನ್ನು ಭೇಟಿಯಾದ ಆಸೀಸ್‌ ಪ್ರಧಾನಿ

World Blitz : ಮಹಿಳಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆರ್‌. ವೈಶಾಲಿಗೆ ಕಂಚು

World Blitz : ಮಹಿಳಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆರ್‌. ವೈಶಾಲಿಗೆ ಕಂಚು

ಟೀಮ್‌ ಇಂಡಿಯಾದ ಜೆರ್ಸಿ ಧರಿಸಿ ಆಸ್ಪತ್ರೆಯಿಂದ ಬಿಡುಗಡೆಗೊಂಡ ವಿನೋದ್‌ ಕಾಂಬ್ಳಿ

ಟೀಮ್‌ ಇಂಡಿಯಾದ ಜೆರ್ಸಿ ಧರಿಸಿ ಆಸ್ಪತ್ರೆಯಿಂದ ಬಿಡುಗಡೆಗೊಂಡ ವಿನೋದ್‌ ಕಾಂಬ್ಳಿ

ಪ್ರೀತಿಯಲ್ಲಿ ಬಿದ್ದ ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್: 2ನೇ ಮದುವೆಗೆ ರೆಡಿ

ಪ್ರೀತಿಯಲ್ಲಿ ಬಿದ್ದ ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್: 2ನೇ ಮದುವೆಗೆ ರೆಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

POlice

Udupi: 9 ಲೀಟರ್ ಗೋವಾ ಮದ್ಯ ವಶಕ್ಕೆ

Laxmi Hebbalkar  ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Minister ಸೋಮಣ್ಣ, ಸಿ.ಎಸ್‌. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್‌: ಬಂಧನ

Minister ಸೋಮಣ್ಣ, ಸಿ.ಎಸ್‌. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್‌: ಬಂಧನ

21

Karkala: ಶಾಲೆಯಿಂದ ಲ್ಯಾಪ್‌ಟಾಪ್‌ ಕಳವು

5

Guttigar: ಯುವಕನಿಗೆ ಜೀವ ಬೆದರಿಕೆ; ದೂರು ದಾಖಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

POlice

Udupi: 9 ಲೀಟರ್ ಗೋವಾ ಮದ್ಯ ವಶಕ್ಕೆ

Laxmi Hebbalkar  ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Test Cricket: ವರ್ಷದ ಮೊದಲ ಟೆಸ್ಟ್‌… ಕೆಲವರಿಗೆ ಅಂತಿಮ ಟೆಸ್ಟ್‌?

Test Cricket: ವರ್ಷದ ಮೊದಲ ಟೆಸ್ಟ್‌… ಕೆಲವರಿಗೆ ಅಂತಿಮ ಟೆಸ್ಟ್‌?

Minister ಸೋಮಣ್ಣ, ಸಿ.ಎಸ್‌. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್‌: ಬಂಧನ

Minister ಸೋಮಣ್ಣ, ಸಿ.ಎಸ್‌. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್‌: ಬಂಧನ

21

Karkala: ಶಾಲೆಯಿಂದ ಲ್ಯಾಪ್‌ಟಾಪ್‌ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.