ಮಕ್ಕ ಳಿಂದ ಭೂಮಿಗೆ 6000 ಬೀಜದುಂಡೆ
Team Udayavani, Jun 5, 2021, 6:25 PM IST
ವರದಿ:ಬಸವರಾಜ ಹೂಗಾರ
ಹುಬ್ಬಳ್ಳಿ: ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸಲು ಇಲ್ಲಿನ ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ ಮಕ್ಕಳಿಂದಲೇ ಸುಮಾರು 6 ಸಾವಿರ ಬೀಜದುಂಡೆಗಳನ್ನು ತಯಾರಿಸಿದ್ದು, ವಿಶ್ವ ಪರಿಸರ ದಿನವಾದ ಜೂ. 5ರಂದು ಅವುಗಳನ್ನು ಮಕ್ಕಳಿಂದ ಭೂಮಿಗೆ ಸಮರ್ಪಣೆ ಮಾಡಿಸಲಾಗುತ್ತಿದೆ.
ಮಕ್ಕಳಲ್ಲಿ ವಿಜ್ಞಾನದ ಕೌತುಕ ಹೆಚ್ಚಿಸುವ, ಮಕ್ಕಳಿಂದಲೇ ವಿವಿಧ ಮಾದರಿಗಳನ್ನು ತಯಾರಿಸುವ, ತರಬೇತಿ ನೀಡುವ ಕಾರ್ಯದಲ್ಲಿ ತೊಡಗಿರುವ ಪ್ರತಿಷ್ಠಾನ, 5ರಿಂದ 9ನೇ ತರಗತಿ ಮಕ್ಕಳಿಗೆ ಬೀಜದುಂಡೆ ತಯಾರಿಸುವ ತರಬೇತಿ ನೀಡಿದೆ. ಅವರು ತಯಾರಿಸಿದ ಬೀಜದುಂಡೆಗಳನ್ನು ಭೂಮಿಗೆ ಸಮರ್ಪಿಸುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಮುಂದಾಗಿದೆ.
ವಿದ್ಯಾರ್ಥಿಗಳಿಗೆ ತರಬೇತಿ: ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದಿಂದ 5ರಿಂದ 10ನೇ ತರಗತಿ ಸುಮಾರು 15 ಸಾವಿರಕ್ಕೂ ಅಧಿಕ ಮಕ್ಕಳು ಆನ್‌ಲೈನ್ ತರಬೇತಿಗೆ ಹೆಸರು ನೋಂದಾಯಿಸಿಕೊಂಡಿದ್ದು, ಲಾಕ್ ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಪರಿಕರಗಳನ್ನು ಜೋಡಿಸಿಕೊಂಡು ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಆನ್ ಲೈನ್ ಬೇಸಿಗೆ ಶಿಬಿರ ನಡೆಸಲಾಗುತ್ತಿದೆ. ಇದರ ಜೊತೆಯಲ್ಲಿಯೇ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಬೀಜದುಂಡೆ ಮಾಡುವ ಕುರಿತು ಮಕ್ಕಳಿಗೆ ವಿಶೇಷ ತರಬೇತಿ ನೀಡಲಾಗಿದೆ. ಮಕ್ಕಳಿಗೆ ಬೀಜದುಂಡೆ ಹೇಗೆ ತಯಾರಿಸಬೇಕು ಎಂಬ ಮಾಹಿತಿ ನೀಡಲಾಗಿತ್ತು. ಈಗಾಗಲೇ ವಿವಿಧ ಜಿಲ್ಲೆಯಲ್ಲಿನ ಸಿಬ್ಬಂದಿ, ಮಣ್ಣು, ಸಾವಯವ ಗೊಬ್ಬರ, ಮರಳು ಬಳಸಿಕೊಂಡು ವಿವಿಧ ಬೀಜಗಳನ್ನು ಹಾಕುವ ಮೂಲಕ ಬೀಜದುಂಡೆ ತಯಾರಿಸುವ ಬಗ್ಗೆ ತರಬೇತಿ ನೀಡಿದ್ದು, ಒಂದು ಮಗು ಸುಮಾರು 5 ಬೀಜದುಂಡೆ ನಿರ್ಮಿಸಬೇಕೆಂದು ಹೇಳಲಾಗಿತ್ತು, ಆದರೆ ಮಕ್ಕಳು ನಮ್ಮ ನಿರೀಕ್ಷೆ ಮೀರಿ ಬೀಜದುಂಡೆಗಳನ್ನು ಸಿದ್ಧಪಡಿಸಿದ್ದಾರೆ.
ಬೀಜದುಂಡೆ ತಯಾರಿಸಿ ಸುಮಾರು 24ರಿಂದ 48 ಗಂಟೆಗಳ ಕಾಲ ನೆರಳಿನಲ್ಲಿ ಒಣಗಿಸಿ, ನಂತರ ಅದನ್ನು ಭೂಮಿಗೆ ಹಾಕಬೇಕು. 9ನೇ ತರಗತಿ ಮಕ್ಕಳಿಗೆ ಬೀಜದುಂಡೆ ಭೂಮಿಗೆ ಹಾಕಲು ತಿಳಿಸಿದ್ದು, ಇನ್ನುಳಿದ ಮಕ್ಕಳು ತಮ್ಮ ಹೊಲಗಳ ಬದುವಿನಲ್ಲಿ, ಹೊರಭಾಗದ ಬಯಲು ಪ್ರದೇಶದಲ್ಲಿ ಬೀಜದುಂಡೆ ಹಾಕಲು ಸೂಚಿಸಲಾಗಿದೆ.
ಈ ವರ್ಷದ ಘೋಷವಾಕ್ಯದನ್ವಯ “ಮರು ರೂಪಿಸು, ಮರು ಸೃಷ್ಟಿಸು ಹಾಗೂ ಮರು ಸ್ಥಾಪಿಸು’ ಎಂಬಂತೆ ಕೋವಿಡ್ ಕರ್ಫ್ಯೂ ಸಮಯದಲ್ಲಿ ಮಕ್ಕಳು ಹಾಗೂ ಪಾಲಕರು ಹೊರಹೋಗಲಾರದ ಸಂದರ್ಭದಲ್ಲಿ ಅಗಸ್ತ್ಯ ತಂಡ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ಆನ್‌ಲೈನ್ ಮೂಲಕ ಬೀಜದುಂಡೆ ತಯಾರಿಸಿವ ಬಗೆ, ಅದರ ಉದ್ದೇಶ ಹಾಗೂ ಅದರಿಂದಾಗುವ ಲಾಭದ ಬಗ್ಗೆ ವಿವರಣೆ ನೀಡಿತ್ತು. ಇನ್ನು ಸುಮಾರು 20,000ಕ್ಕೂ ಹೆಚ್ಚು ಬೀಜದುಂಡೆ ತಯಾರಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.