ಭೀಮಾನದಿಯಲ್ಲಿ ಮತ್ತೆ ಟಿಪ್ಪರ್-ಹಿಟಾಚಿ ಸದ್ದು !
ಮರಳು ಸಂಗ್ರಹಕ್ಕೆ ಕಚೇರಿ ಮೈದಾನವೂ ಸಾಲುತ್ತಿಲ್ಲನಾಮಕೇವಾಸ್ತೆ ಮರಳು ಸಾಗಣೆ ಪರೀಕ್ಷಾ ಕೇಂದ್ರ
Team Udayavani, Jan 5, 2020, 10:50 AM IST
ಅಫಜಲಪುರ: ತಾಲೂಕಿನ ಜೀವನದಿಯಾಗಿರುವ ಭೀಮಾ ನದಿಯಲ್ಲಿ ಮತ್ತೆ ಅಕ್ರಮ ಮರಳು ದಂಧೆ ಶುರುವಾಗಿದೆ.
ಟಿಪ್ಪರ್-ಹಿಟಾಚಿ ಸದ್ದು: ತಾಲೂಕಿನಲ್ಲಿ ಹರಿಯುವ ಭೀಮಾ ನದಿಯಲ್ಲಿ ಅಕ್ರಮ ಮರಳು ದಂಧೆ ಆರಂಭವಾಗುತ್ತಲೇ, ನದಿಗೆ ಹಿಟಾಚಿ, ಟಿಪ್ಪರ್ ವಾಹನಗಳು ಲಗ್ಗೆ ಇಟ್ಟಿದ್ದು, ಹಗಲು-ರಾತ್ರಿ ಎನ್ನದೆ ಮರಳು ಧಂದೆ ನಡೆಯುತ್ತಿದೆ. ಇದರಿಂದ ಭೀಮಾ ನದಿ ಒಡಲು ಖಾಲಿಯಾಗುವ ಹಂತಕ್ಕೆ ತಲುಪಿದೆ.
ಸರ್ಕಾರಿ ಕಚೇರಿಗಳು ಸಾಲುತ್ತಿಲ್ಲ: ಭೀಮಾ ನದಿಯಿಂದ ಹೊರ ತೆಗೆದ ಅಕ್ರಮ ಮರಳನ್ನು ಮನಸೋ ಇಚ್ಚೆ ಸಾಗಿಸುವುದಲ್ಲದೇ, ಸರ್ಕಾರಿ ಕಚೇರಿಗಳ ಮೈದಾನವನ್ನು ಬಳಸಿಕೊಳ್ಳಲಾಗುತ್ತಿದೆ. ಈ ಕಚೇರಿಗಳ ಮೈದಾನಗಳು ಸಂಗ್ರಹಕ್ಕೆ ಸಾಲುತ್ತಿಲ್ಲ ಎಂದರೆ ಅಕ್ರಮ ಮರಳು ದಂಧೆ ಎಷ್ಟು ದೊಡ್ಡ ಮಟ್ಟದಲ್ಲಿ ಇರುಬಹುದು ಎನ್ನುವುದನ್ನು ಅಂದಾಜಿಸಬಹುದು.
ನಿತ್ಯ ಟಿಪ್ಪರ್, ಟ್ರ್ಯಾಕ್ಟರ್‌ಗಳ ಮೂಲಕ ಎಡೆಬಿಡದೆ ಮರಳು ಸಾಗಾಟ ನಡೆದಿದೆ. ಅದರಲ್ಲೂ ತಾಲೂಕಿನಿಂದ ಹೊರರಾಜ್ಯಗಳಿಗೆ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದೆ.
ನಾಮಕೇವಾಸ್ತೆ ಪರೀಕ್ಷಾ ಕೇಂದ್ರ: ಅಕ್ರಮ ಮರಳು ಸಾಗಾಟ ನಿಯಂತ್ರಿಸುವ ಸಲುವಾಗಿ ತಾಲೂಕಿನ ಮಲ್ಲಾಬಾದ, ಚವಡಾಪುರ ಬಳಿ ರಾಷ್ಟ್ರೀಯ ಹೆದ್ದಾರಿಗಳಿಗೆ ಹೊಂದಿಕೊಂಡು ತಪಾಸಣೆ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ ಅವು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಬಾಗಿಲು ಮುಚ್ಚಿರುವ ತಪಾಸಣೆ ಕೇಂದ್ರಗಳ ಸುತ್ತ ಜಾಲಿ ಕಂಟಿ ಬೆಳೆದಿದೆ. ಅದರ ಸುತ್ತ ಸಾರ್ವಜನಿಕರು ಮಲಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಮಲ್ಲಾಬಾದ ಬಳಿ ಇರುವ ತಪಾಸಣೆ ಕೇಂದ್ರದ ಮೇಲ್ಛಾವಣಿ ಕುಸಿದಿದೆ. ಇದನ್ನು ಯಾರೂ ಗಮನಿಸುತ್ತಿಲ್ಲ. ಎರಡು ಕೇಂದ್ರಗಳ ಬಳಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಇವು ನಾಮಕೇವಾಸ್ತೆ ಎನ್ನುವಂತಾಗಿದೆ. ಯಾವ ವಾಹನಗಳನ್ನು ಈ ಕೇಂದ್ರಗಳಲ್ಲಿ ಜಪ್ತಿ ಮಾಡುತ್ತಿಲ್ಲ.
ಮರಳು ದಂಧೆಗೆ ಕಡಿವಾಣ ಹಾಕಲು ಇಲಾಖೆಗಳು ವಿಫಲ: ಅಕ್ರಮ ಮರಳು ದಂಧೆಗೆ ಒಂದರ್ಥದಲ್ಲಿ ಇಲಾಖೆಗಳು ಸಹಕಾರ ನೀಡಿದಂತೆ ಕಾಣುತ್ತಿದೆ. ಮರಳು ಸಾಗಾಟ ಮಾಡಲು ರಾಯಲ್ಟಿ ನೀಡಲಾಗುತ್ತದೆ. ಆದರೆ ಯಾವ ಪಾಯಿಂಟ್‌ನಿಂದ ಮರಳು ಸಾಗಿಸಬೇಕೆಂದು ತೋರಿಸುವುದಿಲ್ಲ. ಹೀಗಾಗಿ ದಂಧೆಕೋರರು ಮನಸೋ ಇಚ್ಚೆ ಮರಳು ಸಾಗಾಟ ಮಾಡುತ್ತಿದ್ದಾರೆ.
ಅಕ್ರಮ ಮರಳು ಸಾಗಾಟ ಗಮನಕ್ಕೆ ಬಂದರೆ, ಕೂಡಲೇ ದಾಳಿ ನಡೆಸಿ ಅಕ್ರಮ ಮರಳು ವಶಕ್ಕೆ ಪಡೆದು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಯಲ್ಲಪ್ಪ ಸುಬೇದಾರ,
ತಹಶೀಲ್ದಾರ್
ಡಿ.27ರಂದು ರಾತ್ರಿ ರೇವೂರ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು ಟಿಪ್ಪರ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದೇವೆ. ಅಕ್ರಮ ತಡೆಗಟ್ಟಲು ಸತತ ಶ್ರಮ ವಹಿಸುತ್ತಿದ್ದೇವೆ. ಮರಳು ತಪಾಸಣಾ ಕೇಂದ್ರಗಳು ಹಾಳಾಗಿದ್ದರ ಬಗ್ಗೆ ಕೂಡಲೇ ಸಭೆ ಕರೆದು ಸರಿಪಡಿಸಲಾಗುತ್ತದೆ. ಮರಳು ಸಾಗಾಟಕ್ಕೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೂ ಖಡಕ್ ಸೂಚನೆ ನೀಡಲಾಗಿದೆ.
ರಾಮಚಂದ್ರ ಗಡದೆ,
ಸಹಾಯಕ ಆಯುಕ್ತರು, ಕಲಬುರಗಿ
ಅಕ್ರಮ ಮರಳು ಸಾಗಾಟ ತಡೆಗಟ್ಟುವ ಕೆಲಸ ಮಾಡುತ್ತಿದ್ದೇವೆ. ಅಕ್ರಮ ಕಂಡು ಬಂದರೆ ಚಾಲಕ ಮತ್ತು ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ.
ಮಹಾದೇವ ಪಂಚಮುಖೀ, ಸಿಪಿಐ
ಮಲ್ಲಿಕಾರ್ಜುನ ಹೀರೆಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.