ಅಂತರ್ಜಲ ಕುಸಿತ: ಗ್ರಾಮಗಳಲ್ಲಿ ಜಲಕ್ಷಾಮ
ಪ್ಲಾಸ್ಟಿಕ್ ಕೊಡಗಳ ಖರೀದಿ ಜೋರು•ನದಿ ದಡದ ಗ್ರಾಮಗಳಲ್ಲೂ ನೀರಿಗೆ ಬರ
Team Udayavani, Jul 1, 2019, 9:52 AM IST
ಅಫಜಲಪುರ: ಚವಡಾಪುರ ತಾಂಡಾದಲ್ಲಿ ರಾಷ್ಟ್ರಿಯ ಹೆದ್ದಾರಿಗೆ ಹೊಂದಿಕೊಂಡಿರುವ ಸೇವಾಲಾಲ್ ದೇವಸ್ಥಾನ ಬಳಿ ನೀರಿಗಾಗಿ ನಿಂತಿರುವ ತಾಂಡಾ ಜನತೆ.
•ಮಲ್ಲಿಕಾರ್ಜುನ ಹಿರೇಮಠ
ಅಫಜಲಪುರ: ಕಳೆದ ವರ್ಷ ಮಳೆಗಾಲದಲ್ಲಿ ಮುಂಗಾರು ಮತ್ತು ಹಿಂಗಾರು ಕೈಕೊಟ್ಟಿದ್ದರಿಂದ ಅಂತರ್ಜಲ ಮಟ್ಟ ಕುಸಿತವಾಗಿ ಕುಡಿಯುವ ನೀರಿಗಾಗಿ ಜನ ಪರದಾಡುವಂತಾಗಿದೆ.
ತಾಲೂಕಿನ ಚವಡಾಪುರ ಗ್ರಾಮ, ಚವಡಾಪುರ ತಾಂಡಾ ಹಾಗೂ ರೇವೂರ (ಕೆ), ಹೊಸೂರ, ಗೊಬ್ಬೂರ (ಬಿ), ಸ್ಟೇಷನ್ ಗಾಣಗಾಪುರ, ರೇವೂರ (ಬಿ), ದೇವಲ ಗಾಣಗಾಪುರ, ಕೋಗನೂರ, ಬಳೂರ್ಗಿ, ಅಂಕಲಗಾ, ಚಿಂಚೋಳಿ, ಮಾತೋಳಿ, ಹಳೀಯಾಳ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲೀಗ ಜಲಕ್ಷಾಮ ಉಂಟಾಗಿದೆ. ಇದರಿಂದಾಗಿ ಜನರು ಕುಡಿಯುವ ನೀರಿಗಾಗಿ ಪರದಾಡಿ ಸುಸ್ತಾಗಿದ್ದಾರೆ. ಮೈಲುಗಟ್ಟಲೆ ಅಲೆಯಬೇಕು ಹೊಲಗದ್ದೆ: ಅಂತರ್ಜಲ ಮಟ್ಟ ಕುಸಿತದಿಂದ ಗ್ರಾಮಗಳಲ್ಲಿರುವ ನೀರಿನ ಮೂಲಗಳೆಲ್ಲ ಖಾಲಿಯಾಗಿವೆ. ಅಂತರ್ಜಲ ಮಟ್ಟ ಕುಸಿದು ಹನಿ ನೀರೂ ಬಾರದಂತ ಪರಿಸ್ಥತಿ ನಿರ್ಮಾಣವಾಗಿದೆ. ಜನ ಸಾಮಾನ್ಯರು ನೀರಿಗಾಗಿ ಮೈಲಿಗಟ್ಟಲೆ ಅಲೆದಾಡಿ, ಹೊಲ ಗದ್ದೆ ತುಳಿದು ನೀರು ಹೊತ್ತು ತರುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೇಗಿದೆ ಎಂದರೆ ನದಿ ದಡದಲ್ಲಿರುವ ಸೊನ್ನ, ಇಂಚಗೇರಾ, ದೇವಲಗಾಣಗಾಪುರ, ಘತ್ತರಗಾ, ದೇಸಾಯಿ ಕಲ್ಲೂರ, ಸಾಗನೂರ, ಬಂದರವಾಡ, ಹವಳಗಾ, ಕೊಳ್ಳೂರ ಸೇರಿದಂತೆ ಇನ್ನಿತರ ಗ್ರಾಮಗಳಲ್ಲೂ ನೀರಿನ ಸಮಸ್ಯೆ ಕಾಡುತ್ತಿದೆ.
ಟ್ಯಾಂಕರ್ ನೀರು ಸಾಕಾಗುತ್ತಿಲ್ಲ: ನೀರು ಪೂರೈಸಲು ಗ್ರಾ.ಪಂ.ನಿಂದ ಹಿಡಿದು ಸಂಬಂಧ ಪಟ್ಟ ಎಲ್ಲ ಇಲಾಖೆಗಳು ಹರಸಾಹಸ ಪಡುತ್ತಿವೆ. ಖಾಸಗಿಯಾಗಿ ನೀರು ಖರೀದಿಸಿ ಪೂರೈಕೆ ಮಾಡುವುದು, ಟ್ಯಾಂಕರ್ ನೀರು ಒದಗಿಸುವುದು ನಡೆದಿದೆ. ಆದರೆ ಈ ನೀರು ಸಾಕಾಗುತ್ತಿಲ್ಲ. ಅಲ್ಲದೇ ಗ್ರಾಮೀಣ ಭಾಗದಲ್ಲಿ ನೀರು ಸರಬರಾಜು ಮಾಡಲು ಕಡ್ಡಾಯವಾಗಿ ವಿದ್ಯುತ್ ಸೌಕರ್ಯ ಬೇಕು. ಸಮಯಕ್ಕೆ ಸರಿಯಾಗಿ ವಿದ್ಯುತ್ ಸರಬರಾಜು ಇರುವುದಿಲ್ಲ. ಹೀಗಾಗಿ ವಿದ್ಯುತ್ ಬಂದಾಗ ಮಾತ್ರ ನೀರಿನ ಸರಬರಾಜು ಆಗುತ್ತಿದೆ.
ಸಂಬಂಧಪಟ್ಟವರು ಗ್ರಾಮೀಣ ಭಾಗದಲ್ಲಿ ಬೆಳಗಿನ ಜಾವ ವಿದ್ಯುತ್ ಕಡಿತಗೊಳಿಸದಿದ್ದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.
ಪ್ಲಾಸ್ಟಿಕ್ ಕೊಡಗಳ ಖರೀದಿ ಜೋರು: ದೂರದಿಂದ ನೀರು ಹೊತ್ತು ತಂದು ಸಂಗ್ರಹಿಸಿಡುವ ಕೆಲಸ ಜನಸಾಮಾನ್ಯರಿಗೆ ತಲೆ ನೋವಾಗಿದೆ. ನೀರು ಸಂಗ್ರಹಿಸಿಡಲು ಜನತೆ ಪ್ಲಾಸ್ಟಿಕ್ ಕೊಡಗಳ ಮೊರೆ ಹೋಗಿದ್ದಾರೆ. ಅಗತ್ಯಕ್ಕೂ ಮಿರಿ ಪ್ಲಾಸ್ಟಿಕ್ ಕೊಡಗಳನ್ನು ಖರೀದಿಸಿ ನೀರು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ. ಹೀಗಾಗಿ ಕೊಡಗಳ ಮಾರಾಟ ಜೋರಾಗಿ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Financial Status: 42,000 ಕೋಟಿ ರೂ. ಸಾಲದ ಸುಳಿಯಲ್ಲಿ ಎಸ್ಕಾಂಗಳು!
Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!
Derogatary Term: ಸಿ.ಟಿ.ರವಿ ಪ್ರಕರಣಗಳು ಸಿಐಡಿ ತನಿಖೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.