ಮಲ್ಲಿಕಾರ್ಜುನ ಖರ್ಗೆ ಸೋಲಿಸಲು ಪಣ
ಕೋಲಿ ಎಸ್.ಟಿ.ಗೆ ಸೇರುವ ಕಾಲ ಸನ್ನಿಹಿತ
Team Udayavani, Apr 8, 2019, 11:56 AM IST
ಅಫಜಲಪುರ: ಬನ್ನಟ್ಟಿ ಗ್ರಾಮದಲ್ಲಿ ಲೋಕಸಭೆ ಚುನಾವಣೆ ಪ್ರಯುಕ್ತ ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ ಪರ ಬಾಬುರಾವ ಚಿಂಚನಸೂರ ಮತಯಾಚನೆ ಮಾಡಿದರು.
ಅಫಜಲಪುರ: ಸುಮಾರು 50 ವರ್ಷಗಳಿಂದ ಎಲ್ಲ ಸಮಾಜಗಳ ಮತ ಪಡೆದು ಅಧಿಕಾರ ಅನುಭವಿಸುತ್ತಿರುವ ಮಲ್ಲಿಕಾರ್ಜುನ ಖರ್ಗೆ ಯಾವುದೇ ಅಭಿವೃದ್ಧಿ ಮಾಡಿಲ್ಲ. ಆದ್ದರಿಂದ ಅವರನ್ನು ಸೋಲಿಸಲು ಪಣ ತೊಟ್ಟಿರುವುದಾಗಿ ಮಾಜಿ ಸಚಿವ, ಬಿಜೆಪಿ ಮುಖಂಡ ಬಾಬುರಾವ ಚಿಂಚನಸೂರ ಹೇಳಿದರು.
ತಾಲೂಕಿನ ಬನ್ನಟ್ಟಿ ಗ್ರಾಮದಲ್ಲಿ ಲೋಕಸಭೆ ಚುನಾವಣೆ ಪ್ರಯುಕ್ತ ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಕೋಲಿ ಸಮಾಜ
ಬಾಂಧವರು ನಿಷ್ಠಾವಂತರು, ವಿಶ್ವಾಸಿಕರು. ಜೊತೆಗೆ ಬಹಳಷ್ಟು ಮುಗ್ದರಾಗಿದ್ದಾರೆ. ಅಲ್ಲದೆ ನಿರ್ಣಾಯಕ ಮತದಾರರಾಗಿದ್ದಾರೆ ಎಂದರು.
ನಮ್ಮ ಜನರ ಮುಗ್ದತನ ದುರ್ಬಳಕೆ ಮಾಡಿಕೊಂಡ ಖರ್ಗೆ ಅವರು ತಾವು ಬೆಳೆದು ತಮ್ಮ ಮಗನನ್ನು ಬೆಳೆಸಿದ್ದಾರೆ. ಆದರೆ ಕೋಲಿ
ಸಮಾಜದ ಆಶಯಗಳಿಗೆ ದಿ. ವಿಠ್ಠಲ ಹೇರೂರ ಅವರ ಆಶಯಗಳಿಗೆ ಕೊಳ್ಳಿ ಇಟ್ಟು ಮೈ ಕಾಯಿಸಿಕೊಂಡಿದ್ದಾರೆ. ಇಂತಹ ಮೋಸದ ನಾಯಕನನ್ನು ಸೋಲಿಸುವ ಭೀಷ್ಮ ಪ್ರತಿಜ್ಞೆ
ತೊಟ್ಟಿದ್ದೇನೆ ಎಂದರು. ಕೋಲಿ ಸಮಾಜ ಎಸ್.ಟಿಗೆ ಸೇರುವ ಕಾಲ ಸನ್ನಿಹಿತವಾಗಿದೆ. ಕೋಲಿ ಸಮಾಜವನ್ನು ಎಸ್.ಟಿಗೆ ಸೇರ್ಪಡೆ
ಮಾಡಿಸುತ್ತೇವೆಂದು ಬಿಜೆಪಿಯವರು ಭರವಸೆ ಕೊಟ್ಟಿದ್ದರಿಂದಲೇ ನಾನು ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ಮಲ್ಲಿಕಾರ್ಜುನ ಖರ್ಗೆ
ಹಾಗೂ ಕಾಂಗ್ರೆಸ್ ಪಕ್ಷದವರು ಕೋಲಿ ಸಮಾಜ ಎಸ್.ಟಿಗೆ ಸೇರಿಸುತ್ತೇವೆಂದು ಸುಳ್ಳು ಹೇಳಿ ಕಾಲಹರಣ ಮಾಡಿದ್ದಾರೆ. ಹೀಗಾಗಿ ಈ ಬಾರಿ ತಾವು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಯಾವುದೇ ಷರತ್ತಿಲ್ಲದೆ
ಸೇರ್ಪಡೆಯಾಗಿದ್ದೇವೆ. ಡಾ| ಉಮೇಶ ಜಾಧವ ಅವರನ್ನು ನಾವು ಗೆಲ್ಲಿಸಿ ಕಳುಹಿಸಿದರೆ ಕೋಲಿ ಸಮಾಜ ಎಸ್.ಟಿಗೆ ಸೇರ್ಪಡೆಯಾಗುವುದು ಖಂಡಿತ ಎಂದು ಹೇಳಿದರು.
ಕಲಬುರಗಿಯಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಕೋಲಿ ಸಮಾಜವನ್ನು ಮರೆಯುವುದಿಲ್ಲ ಎಂದಿದ್ದಾರೆ. ಹೀಗಾಗಿ ಅವರ ನೆನಪಿನಲ್ಲಿ ಕೋಲಿ ಸಮಾಜ ಇದೆ. ಆದ್ದರಿಂದ ತಾಲೂಕಿನ ಸಮಾಜ
ಬಾಂಧವರು ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ ಅವರಿಗೆ ಮತ ನೀಡಿ ಎಂದು ಮನವಿ ಮಾಡಿದರಲ್ಲದೇ, ಪ್ರಧಾನಿ ಮೋದಿ ದೇಶಕ್ಕೆ
ಚೌಕಿದಾರರಾದರೆ ನಾನು ಕೋಲಿ ಸಮಾಜಕ್ಕೆ ಚೌಕಿದಾರನಾಗಿದ್ದೇನೆ ಎಂದರು. ಡಾ| ಉಮೇಶ ಜಾಧವ ಮಾತನಾಡಿ, ಈ ಬಾರಿ ತಮಗೆ ಮತ ನೀಡಿ ಗೆಲ್ಲಿಸಿದರೆ ಕೋಲಿ ಸಮಾಜವನ್ನು ಎಸ್.ಟಿಗೆ ಸೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದರ ಜೊತೆಗೆ ಈ ಭಾಗದ ಅಭಿವೃದ್ದಿಗೆ ಕೂಲಿಯಾಳಿನಂತೆ ದುಡಿಯುವುದಾಗಿ ತಿಳಿಸಿದರು. ಶಾಸಕ
ದತ್ತಾತ್ರೇಯ ಪಾಟೀಲ ರೇವೂರ (ಬಿ), ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ, ಡಾ| ಎ.ಬಿ. ಮಾಲಕರೆಡ್ಡಿ ಹಾಗೂ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.