ನಾಮಕೆವಾಸ್ತೆ ಪರಿಸರ ದಿನ-ನಿತ್ಯವೂ ಅರಣ್ಯರೋದನ
ಲೆಕ್ಕವಿಲ್ಲದಷ್ಟು ಗಿಡ-ಮರಗಳು ಬಲಿ
Team Udayavani, Jun 7, 2019, 10:04 AM IST
ಅಫಜಲಪುರ: ಬಳೂರ್ಗಿ ಗ್ರಾಮದ ಫಲಾಲಸಿಂಗ್ ತಾಂಡಾದ ಬಳಿ ರೈತರೊಬ್ಬರ ಜಮೀನಿನಲ್ಲಿ ದೊಡ್ಡದಾದ ಬೇವಿನ ಮರ ಕಡಿದು ಹಾಕಿರುವುದು.
ಅಫಜಲಪುರ: ಪ್ರತಿ ವರ್ಷ ಜೂನ್ ಬಂತೆಂದರೆ ಸಾಕು ಎಲ್ಲರೂ ಪರಿಸರ ದಿನ ಎಂದು ಶುಭ ಕೋರುತ್ತಾರೆ, ಗಿಡ ನೆಟ್ಟು ಆಚರಣೆ ಮಾಡುತ್ತಾರೆ. ಆದರೆ ನಿತ್ಯ ನಡೆಯುತ್ತಿರುವ ಅರಣ್ಯ ರೋಧನವನ್ನು ಯಾರೂ ಕೇಳುತ್ತಿಲ್ಲ.
ಹೆಸರಿಗೆ ಮಾತ್ರ ದಿನಾಚರಣೆ: ಜೂನ್ 5ರಂದು ವಿಶ್ವ ಪರಿಸರ ದಿನ ಆಚರಿಸಲಾಗುತ್ತದೆ. ಪರಿಸರ ದಿನದ ಪ್ರಯುಕ್ತ ಅರಣ್ಯ ಇಲಾಖೆಯವರು ಗಿಡ-ಮರಗಳನ್ನು ನೆಡುತ್ತಾರೆ. ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತಾರೆ. ಇದೊಂದು ದಿನ ಹಿಗ್ಗಿನಿಂದ ಕೆಲಸ ಮಾಡಿ, ಮುಂದಿನ ದಿನಗಳಲ್ಲಿ ಸುಮ್ಮನಾಗುತ್ತಾರೆ. ಇದರಿಂದ ಪರಿಸರ ರಕ್ಷಣೆಯಾಗುತ್ತಿಲ್ಲ. ಬದಲಾಗಿ ಭಕ್ಷಣೆಯಾಗುತ್ತಿದೆ.
ಮರಗಳ್ಳರಿಗಿಲ್ಲ ಯಾರದ್ದೂ ಭಯ: ತಾಲೂಕಿನಾದ್ಯಂತ ಅಕ್ರಮ ಟಿಂಬರ್ ಮಾಫಿಯಾ ಹೆಚ್ಚಾಗುತ್ತಿದೆ. ಎಲ್ಲೆಂದರಲ್ಲಿ ಗಿಡ ಮರಗಳನ್ನು ಕಡಿದು ಮಾರಾಟ ಮಾಡುವ ಜಾಲ ಬೆಳೆದಿದೆ. ಮರಗಳ್ಳರು ಹೆಚ್ಚಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳದೆ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದೆ. ಮರಗಳ್ಳರಿಗೆ ಯಾರ ಭಯವೂ ಇಲ್ಲದಂತಾಗಿದ್ದು, ಅವ್ಯಾಹತವಾಗಿ ಮರಗಳ್ಳತನ ನಡೆಯುತ್ತಿದೆ.
ಕೊಡಲಿ ಪೆಟ್ಟಿಗೆ ಬಲಿಯಾಗಿವೆ ಲೆಕ್ಕವಿಲ್ಲದಷ್ಟು ಗಿಡ-ಮರ: ಅಕ್ರಮ ದಂಧೆಕೋರರಿಗೆ ತಾಲೂಕಿನ ರೈತರೇ ಗುರಿಯಾಗಿದ್ದಾರೆ. ರೈತರು ಪುಡಿಗಾಸಿನ ಆಸೆಗೆ ತಮ್ಮ ಜಮೀನುಗಳಲ್ಲಿರುವ ಗಿಡ-ಮರಗಳನ್ನು ಕಡಿಯಲು ಅನುಮತಿ ಕೊಡುತ್ತಿದ್ದಾರೆ. ಹೀಗಾಗಿ ಕಟ್ಟಿಗೆ ವ್ಯಾಪಾರಿಗಳು ಗಿಡ-ಮರಗಳನ್ನು ಕಡಿದು ಹಾಕುತ್ತಿದ್ದಾರೆ. ಇವರ ಕೊಡಲಿ ಪೆಟ್ಟಿಗೆ ಲೆಕ್ಕವಿಲ್ಲದಷ್ಟು ಗಿಡ-ಮರಗಳು ಬಲಿಯಾಗಿವೆ.
ಸಂಬಂಧ ಪಟ್ಟವರು ಕ್ರಮ ಕೈಗೊಳ್ಳುವರೆ?: ತಾಲೂಕಿನಲ್ಲಿರುವ ಅಕ್ರಮ ಕಟ್ಟಿಗೆ ಅಡ್ಡೆಗಳ ಮೇಲೆ ಸಂಬಂಧಪಟ್ಟ ಅರಣ್ಯ ಇಲಾಖೆಯವರು ಕ್ರಮ ಕೈಗೊಳ್ಳುವರೆ? ಎನ್ನುವ ಪ್ರಶ್ನೆ ಕಾಡುತ್ತಿದೆ. ರೈತರ ಹೊಲ- ಗದ್ದೆಗಳು, ರಸ್ತೆ ಪಕ್ಕದ ಗಿಡ-ಮರಗಳಿಗೆ ಸಾಕಷ್ಟು ಬಾರಿ ಕೊಡಲಿ ಪೆಟ್ಟು ಬಿಳುತ್ತಿದೆ. ಅಕ್ರಮ ನಡೆಯುತ್ತಿರುವುದು ಅರಣ್ಯಾಧಿಕಾರಿಗಳ ಗಮನಕ್ಕಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಈಗ ಮರಗಳನ್ನು ಕಡಿಯುತ್ತಿರುವುದರಿಂದ ಭೀಕರ ಬರಗಾಲ ಆವರಿಸಿದೆ. ಈಗಲಾದರೂ ಅಕ್ರಮಕ್ಕೆ ತಡೆ ನೀಡಿ ಮರಗಿಡಗಳನ್ನು ಉಳಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ
Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ
MUST WATCH
ಹೊಸ ಸೇರ್ಪಡೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.