ಗಬ್ಬೆದ್ದು ನಾರುತ್ತಿದೆ ದತ್ತ ಕ್ಷೇತ್ರ ಗಾಣಗಾಪುರ
ಚರಂಡಿ ನೀರು ರಸ್ತೆ ಮೇಲೆಮೂಗುಮುಚ್ಚಿ ತಿರುಗುವ ಭಕ್ತರುಹಾಳಾದ ರಸ್ತೆ, ಸೌಕರ್ಯ ಕೊರತೆ
Team Udayavani, Sep 25, 2019, 11:12 AM IST
ಮಲ್ಲಿಕಾರ್ಜುನ ಹಿರೇಮಠ
ಅಫಜಲಪುರ: ಇತಿಹಾಸ ಪ್ರಸಿದ್ಧ ಯಾತ್ರಾ ಸ್ಥಳವಾದ ದೇವಲ ಗಾಣಗಪುರ ಕಸದ ರಾಶಿ, ಹದಗೆಟ್ಟ ರಸ್ತೆ, ಕೊಳಚೆ ನೀರಿನಿಂದ ಗಬ್ಬೆದ್ದು ನಾರುತ್ತಿದೆ.
ಎಲ್ಲಿ ನೋಡಿದರೂ ಕಸ: ದೇವಲ ಗಾಣಗಾಪುರಕ್ಕೆ ದೇಶದ ಅನೇಕ ಕಡೆಗಳಿಂದ ಭಕ್ತರು ಬರುತ್ತಾರೆ. ದತ್ತ ದೇವಸ್ಥಾನ ಮುಜರಾಯಿ ಇಲಾಖೆಗೆ ಒಳಪಟ್ಟಿದೆ. ಇಲ್ಲಿ ಸೌಲಭ್ಯ ಒದಗಿಸಲು ಸರ್ಕಾರ ಲಕ್ಷಾಂತರ ರೂ. ವ್ಯಯಿಸುತ್ತಿದೆ. ಆದರೆ ಹಣ ಮಾತ್ರ ಖರ್ಚಾಗುತ್ತಿದೆಯೇ ವಿನಃ ಸಮಸ್ಯೆಗಳು ಹಾಗೇ ಉಳಿದುಕೊಳ್ಳುತ್ತಿವೆ.
ಎಲ್ಲಿ ನೋಡಿದರೂ ಕಸದ ರಾಶಿ ಕಂಡು ಬರುತ್ತಿದೆ. ಗ್ರಾಮದ ಪ್ರಮುಖ ಬೀದಿಗಳಾದ ಬಸ್ ನಿಲ್ದಾಣ, ಸಂಗಮ ರಸ್ತೆ, ನದಿ ರಸ್ತೆ, ದತ್ತ ದೇವಸ್ತಾನದ ರಸ್ತೆಗಳಲ್ಲಿ ಕಸ ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯಗಳು ಕಂಡು ಬರುತ್ತಿವೆ.
ಗ್ರಾ.ಪಂ ಹಾಗೂ ದೇವಸ್ಥಾನ ವತಿಯಿಂದ ಸ್ವಚ್ಛತಾ ಕಾರ್ಮಿಕರಿದ್ದಾರೆ. ಆದರೂ ಗ್ರಾಮದ ಯಾವ ರಸ್ತೆಗಳು ಸುಂದರವಾಗಿ ಕಾಣುವುದಿಲ್ಲ. ಅಲ್ಲದೇ ರಸ್ತೆ ಮೇಲೆ ಪ್ಲಾಸ್ಟಿಕ್ ತ್ಯಾಜ್ಯ, ಕಸ ಕಡ್ಡಿಗಳು ಬಿದ್ದು ಕಸದ ರಾಶಿಯೇ ಹರಡಿಕೊಂಡಿದೆ.
ಚರಂಡಿನೀರು ರಸ್ತೆ ಮೇಲೆ: ಗ್ರಾಮದಲ್ಲಿರುವ ಪ್ರಮುಖವಾದ ಒಳ ರಸ್ತೆಗಳಿಗೆ ಸಮರ್ಪಕವಾದ ಚರಂಡಿ ವ್ಯವಸ್ಥೆಯಿಲ್ಲ. ಚರಂಡಿಗಳಿದ್ದರೂ ಅವುಗಳಲ್ಲಿ ಸರಾಗವಾಗಿ ನೀರು ಹರಿದು ಹೋಗುತ್ತಿಲ್ಲ. ಹೀಗಾಗಿ ಗ್ರಾಮದ ಚರಂಡಿ ನೀರು ರಸ್ತೆ ಮೇಲೆ ಹರಿದಾಡಿ ಕೊಳಚೆ ಪ್ರದೇಶದಂತೆ ಭಾಸವಾಗುತ್ತಿದೆ.
ಮೂಲಭೂತ ಸೌಕರ್ಯ ಕೊರತೆ: ಗ್ರಾಮದ ಒಳ ರಸ್ತೆಗಳು ಹಾಳಾಗಿ ಹೊಂಡಗಳು ಬಿದ್ದಿವೆ. ಹೀಗಾಗಿ ಸುಗಮ ಸಂಚಾರವೂ ಸಾಧ್ಯವಾಗುತ್ತಿಲ್ಲ. ದತ್ತ ದರ್ಶನಕ್ಕೆ ಬರುವ ಮಹಾರಾಷ್ಟ್ರ, ಕೇರಳ, ಸೀಮಾಂಧ್ರ, ತೆಲಂಗಾಣ, ಗೋವಾ ಹಾಗೂ ಅನೇಕ ರಾಜ್ಯಗಳಿಂದ ಬರುವ ಭಕ್ತರು ಇಲ್ಲಿನ ಅವ್ಯವಸ್ಥೆ ಕಂಡು ವ್ಯವಸ್ಥೆ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಹಸು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.