ನಿಯಮ ಗಾಳಿಗೆ ತೂರುತ್ತಿವೆ ಆಸ್ಪತ್ರೆಗಳು
ಎಲ್ಲೆಂದರಲ್ಲಿ ಕಾಣಸಿಗುತ್ತಿವೆ ಬಳಸಿದ ಸಿರಿಂಜ್‌ರಸ್ತೆ ಬದಿ ಎಸೆಯುತ್ತಿದ್ದಾರೆ ಅವಧಿ ಮುಗಿದ ಮಾತ್ರೆ
Team Udayavani, Nov 8, 2019, 11:07 AM IST
ಮಲ್ಲಿಕಾರ್ಜುನ ಹಿರೇಮಠ
ಅಫಜಲಪುರ: ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ ಬಳಸಿದ ಸಿರಿಂಜ್, ಸೂಜಿ ಹಾಗೂ ಅವಧಿ ಮುಗಿದ ಔಷಧ, ಮಾತ್ರೆಗಳನ್ನು ರಸ್ತೆ ಪಕ್ಕದಲ್ಲೇ ಬಿಸಾಡುತ್ತಿದ್ದರೂ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳದೇ ಕಣ್ಮುಚ್ಚಿ ಕುಳಿತಿದೆ. ಸರ್ಕಾರ ಆರೋಗ್ಯ ಇಲಾಖೆ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ, ಸೂಜಿ, ಸಿರಿಂಜ್ ಪೂರೈಕೆ ಮಾಡುತ್ತದೆ. ಜತೆಗೆ ಬಳಕೆ ಮಾಡಿದ ಬಳಿಕ, ಅವುಗಳನ್ನು ಏನು ಮಾಡಬೇಕು ಎನ್ನುವುದನ್ನು ನಿಯಮಗಳಲ್ಲಿ ತಿಳಿಸಿದೆ. ಆದರೆ ಬಹುತೇಕ ಆಸ್ಪತ್ರೆಗಳು ತಾವು ಬಳಸಿದ ಸೂಜಿ, ಸಿರಿಂಜ್‌ಗಳು ಹಾಗೂ ಅವಧಿ ಮುಗಿದ ಔಷಧಿ, ಮಾತ್ರೆಗಳನ್ನು ರಸ್ತೆಗಳ ಪಕ್ಕದಲ್ಲೇ ಬಿಸಾಡುತ್ತಿವೆ.
ನಾಮಕೇ ವಾಸ್ತೆ ವಿಲೇವಾರಿ: ಬಳಸಿ ಬಿಡುವ ಔಷಧಿಗಳು, ಅವ ಧಿ ಮುಗಿದ ಔಷಧಿಗಳು, ಸೂಜಿ, ಸಿರಿಂಜ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡುವ ಬದಲಿಗೆ ಅದಕ್ಕಾಗಿಯೇ ಇರುವ ವಿಲೇವಾರಿ ಘಟಕ ವಾಹನದಲ್ಲಿ ತುಂಬಿ ಕಳುಹಿಸಬೇಕು. ಆದರೆ ಈ ವಾಹನ ಕೇವಲ ವಾನಕೇವಾಸ್ತೆ ಎನ್ನುವಂತಾಗಿದೆ.
ವರ್ಷದಲ್ಲಿ ಕೇವಲ ಎರಡ್ಮೂರು ಬಾರಿ ಬಂದು ಹೋಗುವ ವಿಲೇವಾರಿ ವಾಹನ ಸಮಪರ್ಕವಾಗಿ ವಿಲೇವಾರಿ ಮಾಡದೇ ಹೋಗುತ್ತಿದೆ. ಆಸ್ಪತ್ರೆ ಸಿಬ್ಬಂದಿ ರಸ್ತೆಗಳ ಪಕ್ಕದಲ್ಲೇ ಈ ಬಳಸಿದ ಸಿರಿಂಜ್, ಸೂಜಿ ಹಾಗೂ ಅವಧಿ ಮುಗಿದ ಮಾತ್ರೆಗಳನ್ನು ಚೆಲ್ಲಿ ಹೋಗುತ್ತಿರುವುದರಿಂದ ಪ್ರಾಣಿ, ಪಕ್ಷಿಗಳು ಅಪಾಯಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಅಲ್ಲದೇ ಪಾದಚಾರಿಗಳು ಇವುಗಳ ಮೇಲೆ ನಡೆದುಕೊಂಡು ಹೋಗುತ್ತಿದ್ದು, ಕೆಲವರಿಗೆ ಸೂಚಿಗಳು ಚುಚ್ಚಿ ಗಾಯಗಳಾದ ಉದಾಹರಣೆಗಳಿವೆ.
ಎಚ್ಚೆತ್ತುಕೊಳ್ಳಲಿ ಆರೋಗ್ಯ ಇಲಾಖೆ: ಅಪಾಯ ಸಂಭವಿಸುವ ಮುನ್ನವೇ ಆರೋಗ್ಯ ಇಲಾಖೆ ಎಚ್ಚೆತ್ತು, ಸಮಪರ್ಕವಾಗಿ ತ್ಯಾಜ್ಯ ವಿಲೇವಾರಿ ಮಾಡಿಸಬೇಕು. ಇಲ್ಲದಿದ್ದರೆ ಆಗುವ ಅನಾಹುತಕ್ಕೆ ಆರೋಗ್ಯ ಇಲಾಖೆಯೇ ನೇರ ಹೊಣೆಯಾಗಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.