ಸರ್ಕಾರಿ ಶಾಲೆಗೆ ಮಕ್ಕಳ ಸೇರಿಸಿ

ದೇವಸ್ಥಾನಕ್ಕಿಂತ ಶಾಲೆ ನಿರ್ಮಾಣಕ್ಕೆ ಮಹತ್ವ ಕೊಡಿ

Team Udayavani, Sep 22, 2019, 3:26 PM IST

22-Sepectember-15

ಆಲಮಟ್ಟಿ: ದೇಶದಲ್ಲಿಯೇ ಬೃಹತ್‌ ನೀರಾವರಿ ಯೋಜನೆಯಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಪ್ರತಿಫಲ ಈ ಭಾಗಕ್ಕೆ ದೊರೆಯಬೇಕಾದರೆ ಕಾರ್ಯಾಂಗದಲ್ಲಿರುವವರು ಸಮಯೋಚಿತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಶಿವಾನಂದ ಪಾಟೀಲ ಹೇಳದರು.

ಚಿಮ್ಮಲಗಿಭಾಗ-1ಬಿದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ನೂತನವಾಗಿ ನಿರ್ಮಿಸಿರುವ
ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆ ಏಷ್ಯಾ ಖಂಡದಲ್ಲಿಯೇ ಬೃಹತ್‌ ನೀರಾವರಿ ಯೋಜನೆಗಳಲ್ಲೊಂದಾಗಿದೆ. ಇದು ಸಾಕಾರಗೊಳ್ಳಲು ಅಖಂಡ ವಿಜಯಪುರ ಜಿಲ್ಲೆಯ ಜನತೆಯ ತ್ಯಾಗದ ಫಲವಾಗಿರುವುದರಿಂದ ಇಡಿ ಉತ್ತರಕರ್ನಾಟಕದ ಜನರು ಕುಡಿಯುವ ನೀರು ಹಾಗೂ ವಿವಿಧ ಉದ್ದೇಶಗಳಿಗೆ ನೀರನ್ನು ಪಡೆಯುವಂತಾಗಿದೆ ಎಂದರು. ನಾಗರಿಕರು ದೇವಾಲಯಗಳನ್ನು ನಿರ್ಮಿಸಲು ಕೊಡುವ ಮಹತ್ವವನ್ನು ಶಾಲೆಗಳನ್ನು ನಿರ್ಮಿಸಲು ಕೊಡಬೇಕು. ತಾವು 15 ವರ್ಷ ಈ ಕ್ಷೇತ್ರದ ಶಾಸಕನಾಗಿದ್ದರೂ ಹೆಚ್ಚಿನ ಪ್ರಮಾಣದಲ್ಲಿ ಧಾರ್ಮಿಕ ಕೇಂದ್ರಗಳಿಗೆ ನೀಡಲಾಗಿದ್ದು ಈಗ ಮೊದಲಿಗಿಂತಲೂ ಕ್ಷೇತ್ರದ ಅಭಿವೃದ್ಧಿಗಾಗಿ 2 ಕೋಟಿವರೆಗೆ ಅನುದಾನ ಲಭ್ಯವಾಗುತ್ತಿದ್ದು ಇದರಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಶಾಲೆಗಳ ಅಭಿವೃದ್ಧಿಗಾಗಿ ವಿನಿಯೋಗಿಸಲಾಗುವುದು ಎಂದರು.

ಸರ್ಕಾರಿ ಶಾಲೆಗಳಲ್ಲಿ ಕಲಿಸುವ ಗುರುಗಳು ವಿಶೇಷ ತರಬೇತಿ ಹಾಗೂ ಶಿಕ್ಷಣ ಪಡೆದವರಾಗಿರುತ್ತಾರೆ. ಅಲ್ಲದೇ ಶೈಕ್ಷಣಿಕ ಅಭಿವೃದ್ಧಿಗಾಗಿಯೇ ಸರ್ಕಾರ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಹಾಲು, ಶೂ, ಬಿಸಿಯೂಟ, ಶಿಷ್ಯವೇತನ ಹೀಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರೂ ಕೂಡ ಪಾಲಕರು ಖಾಸಗಿ ಶಾಲೆಗಳತ್ತ ಮುಖ
ಮಾಡುತ್ತಿರುವುದು ವಿಪರ್ಯಾಸ ಎಂದರು.

ದೇಶಕ್ಕೆ ಉತ್ತರ ಹಿಂದೂಸ್ತಾನದ ಉತ್ತರಪ್ರದೇಶು ಐವರು ಪ್ರಧಾನ ಮಂತ್ರಿಗಳನ್ನು ನೀಡಿದೆ. ಆದರೆ ಶಾಲೆಗಳನ್ನು ಕೊಟ್ಟಿಲ್ಲ, ನಮ್ಮಲ್ಲಿ ಒಬ್ಬರೇ ಪ್ರಧಾನಿಯಾಗಿದ್ದರೂ ಶಾಲೆಗಳನ್ನು ಅತಿ ಹೆಚ್ಚು ನಿರ್ಮಾಣ ಮಾಡಿದ ರಾಜ್ಯ ಕರ್ನಾಟಕ. ದಿ| ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿರುವ ವೇಳೆಯಲ್ಲಿ ಉಚಿತ ಪಠ್ಯಪುಸ್ತಕದಿಂದ ಆರಂಭವಾಗಿ ನಂತರ ಬಂದಿರುವ ಮುಖ್ಯಮಂತ್ರಿಯವರು ಒಂದೊಂದು ವಿಶೇಷ ಕ್ರಮಗಳನ್ನು ಕೈಗೊಂಡು ಮಾದರಿ ಸೌಲಭ್ಯಗಳನ್ನು ಒದಗಿಸಿದ್ದಾರೆ. ಈ ಎಲ್ಲ ಸೌಲಭ್ಯಗಳನ್ನು ಪಡೆದು ಶಿಕ್ಷಣ ನೀಡದಿದ್ದರೆ ಅವರಿಂಥ ಪಾಪಿಗಳು ಬೇರೆ ಇಲ್ಲ ಎಂದು ಹೇಳಿದರು.

ಈಗ ಐದು ಕೋಣೆ, ಇನ್ನೂ ಐದು ಕೋಣೆ ನಿರ್ಮಿಸಲು ಅನುದಾನ, ಆಲಮಟ್ಟಿ ಪರಿಸರದಲ್ಲಿ ಡೆಂಘೀ ಬರದಂತೆ ತಡೆಯಲು ನಾಗರಿಕರು ತಮ್ಮ ಮನೆ ಮುಂದಿರುವ ಕೊಳಚೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು. ನಿಡಗುಂದಿ ಭವಿಷ್ಯದಲ್ಲಿ ಮಾದರಿ ತಾಲೂಕಾಗಲಿದೆ. ಅಧಿಕಾರಿಗಳು ಸಮಸ್ಯೆ ಅರಿತು ಕೆಲಸ ಮಾಡಿದರೆ ಯೋಜನೆ ಸಾಕಾರವಾಗುತ್ತದೆ ಎಂದರು.

ಆಲಮಟ್ಟಿಯ ವಿಶೇಷ ಭೂ ಸ್ವಾಧೀನಾಕಾರಿ ಎ.ರಘು ಮಾತನಾಡಿದರು. ಚಿಮ್ಮಲಗಿ ಅರಳೆಲೆ
ಕಟ್ಟಿಮನಿ ಹಿರೇಮಠದ ನೀಲಕಂಠ ಸ್ವಾಮೀಜಿ ಸಾನ್ನಿಧ್ಯ, ಮಲ್ಲಮ್ಮ ಹಡಪದ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯ ಮಲ್ಲು ರಾಠೊಡ, ಗ್ರಾಪಂ ಅಧ್ಯಕ್ಷೆ ಸೈದಮ್ಮ ಬೆಣ್ಣಿ, ಬಿ.ಟಿ. ಗೌಡರ, ಎ.ಕೆ. ಚಲವಾದಿ, ಎಸ್‌.ಜಿ. ಭೋಸಲೆ, ಡಾ| ಎಸ್‌.ಎಸ್‌. ಓತಗೇರಿ, ಮಂಜುಳಾ ಘಂಟಿ, ನಜೀರಸಾಬ ಮುದ್ದೇಬಿಹಾಳ, ರೇವತಿ ಭಗವತಿ, ಭಾರತಿ ಉಪ್ಪಾರ, ಎಂ.ಆರ್‌. ಕಮತಗಿ, ಸಿ.ಎಸ್‌. ಕುಂಬಾರ, ತಾನಾಜಿ ನಾಗರಾಳ, ರಾಹುಲ್‌ ಕುಬಕಡ್ಡಿ ಮೊದಲಾದವರಿದ್ದರು. ಬಿ.ಐ. ಖ್ಯಾಡಿ ಸ್ವಾಗತಿಸಿದರು. ಮಹೇಶ ಗಾಳಪ್ಪಗೋಳ ನಿರೂಪಿಸಿದರು.

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

1-dp

Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ

Police

Subhramanya: ಹೆದ್ದಾರಿ ತಡೆದು ಪ್ರತಿಭಟನೆ: 13 ಮಂದಿಗೆ ಜಾಮೀನು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.