ಇದ್ದೂ ಇಲ್ಲವಾದ ಆಲಮೇಲ ಗ್ರಂಥಾಲಯ
ಕತ್ತಲೆ ಕೋಣೆಯಲ್ಲಿ ಧೂಳು ತಿನ್ನುತ್ತಿವೆ ಪುಸ್ತಕಓದುಗರಿಗೆ ಕೂಡಲು ಸ್ಥಳಾವಕಾಶ ಕೊರತೆ
Team Udayavani, Nov 8, 2019, 4:08 PM IST
ಆಲಮೇಲ: ಸಮರ್ಪಕ ನಿರ್ವಹಣೆ ಕೊರತೆಯಿಂದ ಇಲ್ಲಿನ ಸಾರ್ವಜನಿಕ ಗ್ರಂಥಾಲಯ ಇದ್ದೂ ಇಲ್ಲವಾಗಿದೆ. ಈ ಕುರಿತು ಸಾರ್ವಜನಿಕರು, ಓದುಗರು ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿ ಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.
ಈಗಾಗಲೇ 28 ವರ್ಷ ಪೂರೈಸಿದ ಈ ಸಾರ್ವಜನಿಕ ಗ್ರಂಥಾಲಯ 1991ರಲ್ಲಿ ಪ್ರಾರಂಭಗೊಂಡಿತು. ಗ್ರಾಪಂ ಕಟ್ಟಡದಲ್ಲೇ ಮೊದಲಿಗೆ ಗ್ರಂಥಾಲಯ ಪ್ರಾರಂಭಗೊಂಡಿತ್ತು. ನಂತರ 1956ರಲ್ಲಿ ನಿರ್ಮಿಸಿದ್ದ ಹಳೆ ಕಟ್ಟಡಕ್ಕೆ ಸ್ಥಳಾಂತರಗೊಂಡಿತು.
ಸುಮಾರು 20 ವರ್ಷಗಳ ಕಾಲ ಗ್ರಂಥಾಲಯವನ್ನು
ಸರಿಯಾಗಿ ಕಾರ್ಯನಿರ್ವಹಿಸಲಾಗಿತ್ತು. ಈಚೆಗೆ ಅಸಮರ್ಪಕ ನಿರ್ವಹಣೆಯಿಂದ ಸಾರ್ವಜನಿಕರಿಗೆ ಉಪಯುಕ್ತವಿಲ್ಲದಂತಾಗಿದೆ. ಗ್ರಂಥಾಲಯಕ್ಕೆ ಹೋಗಬೇಕು ಎಂದರೆ ಯಾವಾಗಲು ಬೀಗ ಹಾಕಿರುತ್ತದೆ ಎಂದು ಆರೋಪಿಸುವ ಸಾರ್ವಜನಿಕರು ಮತ್ತು ಓದುಗರು, ಸಂಬಂಧಪಟ್ಟ ಗ್ರಂಥಾಲಯ ಇಲಾಖೆಗೆ, ಜಿಲ್ಲಾಧಿ ಕಾರಿಗೆ, ತಹಶೀಲ್ದಾರ್ ಮತ್ತು ಪಪಂಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಇನ್ನು ಗ್ರಂಥಾಲಯದಲ್ಲಿರುವ 4290 ಪುಸ್ತಕಗಳು ಧೂಳುತಿನ್ನುತ್ತಿವೆ. ಗ್ರಂಥಾಲಯಕ್ಕೆ ನೀಡಿದ ಜಾಗ ಅತಿಕ್ರಮಣಗೊಂಡಿದೆ. ಅಸಮರ್ಪಕ ನಿರ್ವಹಣೆಗೆ ಇದೊಂದು ಉದಾಹರಣೆ. ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಪ್ರತಿ ತಿಂಗಳು ಪತ್ರಿಕೆ, ಸ್ವಚ್ಛತೆ ನಿರ್ವಹಣೆಗೆ 400 ರೂ. ಸಹಾಯಧನ ಬರುತ್ತದೆ. ಈ ಹಣದಲ್ಲಿ ಎರಡು ದಿನಪತ್ರಿಕೆ ತರಿಸಲಾಗುತ್ತದೆ. ಒಟ್ಟು 275 ಜನ ಗ್ರಂಥಾಲಯದ ಸದಸ್ಯತ್ವ ಪಡೆದಿದ್ದಾರೆ. ಆದರೆ ಓದುಗರಿಗೆ ಸದ್ಬಳಕೆಗೆ ಬಾರದ ಪುಸ್ತಕಗಳು ಕತ್ತಲೆ ಕೋಣೆಯಲ್ಲಿ ಕೊಳೆಯುತ್ತಿವೆ.
ಶಿಥಿಲಗೊಂಡ ಕಟ್ಟಡ: 63 ವರ್ಷದ ಹಳೆಯ (1956ರಲ್ಲಿ ನಿರ್ಮಾಣ) ಹಂಚಿನ ಕಟ್ಟಡದಲ್ಲಿರುವ ಸಾರ್ವಜನಿಕ ಗ್ರಂಥಾಲಯದ ಮೇಲ್ಛಾವಣಿ ಶಿಥಿಲಗೊಂಡಿದೆ. ಹಂಚುಗಳು ಒಡೆದಿವೆ. ಮಳೆಗಾಲದಲ್ಲಿ ನೀರು ಸೋರಿ ಪುಸ್ತಕ, ಪತ್ರಿಕೆಗಳು ಹಾಳಾಗಿವೆ. ಆಲಮೇಲ ಪಟ್ಟಣದಲ್ಲಿ ಸುಮಾರ 30 ಸಾವಿರ ಜನಸಂಖ್ಯೆ ಇದ್ದು, ಓದುಗರು ಸಾರ್ವಜನಿಕ ಗ್ರಂಥಾಲಯಕ್ಕೆ ಆಗಮಿಸಿ ಓದಬೇಕೆಂದರೆ ಯಾವಾಗಲು ಬೀಗ ಹಾಕಿರುತ್ತಾರೆ. ಹೀಗಾಗಿ ಓದುಗರ ಕೊರತೆಯಿಂದ ಗ್ರಂಥಾಲಯ ಎಲ್ಲಿದೆ ಎಂಬ ಪ್ರಶ್ನೆ ಬಹಳಷ್ಟು ಜನರಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.