ಬೇಸಾಯಕ್ಕೆ ಮಾಗಿ ಉಳುಮೆ ಮದ್ದು
ಕ್ಷೀಣಿಸುತ್ತಿದೆ ಎತ್ತು ಅವಲಂಬಿತ ಕೃಷಿ•ರೈತನ ಕೈಯಲ್ಲಿ ಕಾಸಿಲ್ಲ-ಸಾಲ ಸಾಮಾನ್ಯ
Team Udayavani, Apr 27, 2019, 10:22 AM IST
ಆಳಂದ: ಪಟ್ಟಣದ ಹೊಲವೊಂದರದಲ್ಲಿ ರೈತರು ಮಾಗಿ ಉಳುಮೆಯಲ್ಲಿ ತೊಡಗಿ ಭೂಮಿ ಹದಗೊಳಿಸುತ್ತಿರುವ ದೃಶ್ಯ.
ಆಳಂದ: ರೈತರು ಮುಂಗಾರು ಬಿತ್ತನೆ ಸಿದ್ಧತೆಗಾಗಿ ಮಾಗಿ ಉಳುಮೆಯತ್ತ ಮುಖಮಾಡಿದ್ದಾರೆ. ಹೊತ್ತೇರುವ ಮುನ್ನ ಹಾಗೂ ಇಳಿ ಹೊತ್ತಿನ ನಡುವೆ ಕುಂಟಿ (ಗಳ್ಯಾ) ಹೊಡೆದು ಭೂಮಿ ಸಾಗ ಮಾಡುವಲ್ಲಿ ಮಗ್ನವಾಗಿದ್ದಾರೆ.
ಮಾಗಿ ಉಳುಮೆ ಕೈಗೊಂಡರೆ ಮಾತ್ರ ಬಿತ್ತನೆಗೆ ಭೂಮಿ ಹದವಾಗುವ ಹಿನ್ನೆಲೆಯಲ್ಲಿ ಮತ್ತು ಇದರಿಂದ ಬೆಳೆಗೆ ವೈಜ್ಞಾನಿಕ ಲಾಭ ಆಗುವುದರಿಂದ ರೈತರು ಪ್ರತಿ ವರ್ಷ ಭೂಮಿಯನ್ನು ಕನಿಷ್ಠ ಎರಡ್ಮೂರು ಬಾರಿಯಾದರೂ ಉಳುಮೆ ಮಾಡಿ ಸ್ವಚ್ಛಗೊಳಿಸುತ್ತಾರೆ.
ಎತ್ತುಗಳ ಅವಲಂಬಿತ ಕೃಷಿ ವರ್ಷ ಕಳೆದಂತೆ ಕ್ಷೀಣಿಸುತ್ತಿದ್ದರಿಂದ ಈಗ ಟ್ರ್ಯಾಕ್ಟರ್‌ಗಳ ಮೂಲಕವೇ ಭೂಮಿಯನ್ನು ಸಾಗ ಮಾಡುತ್ತಿರುವುದು ಹೆಚ್ಚಾಗತೊಡಗಿದೆ.
ಬರ ಆವರಿಸಿದ್ದರಿಂದ ಅಷ್ಟಕ್ಕಷ್ಟೇ ಬೆಳೆ ಕೈಗೆ ಬಂದಿತ್ತು. ಸೂಕ್ತ ಬೆಲೆಯೂ ಸಿಕ್ಕಿರಲಿಲ್ಲ. ಖಾಸಗಿ ಮಾರುಕಟ್ಟೆಯಲ್ಲಿ ತೊಗರಿಗೆ ಬೆಲೆಯಿಲ್ಲ. ಸರ್ಕಾರದ ಖರೀದಿ ಮೂಲಕ ಕೇವಲ 10 ಕ್ವಿಂಟಲ್ ಖರೀದಿಗೆ ಅವಕಾಶವಿದೆ. ಈ 10 ಕ್ವಿಂಟಲ್ ಮಾರಾಟ ಮಾಡಿದ ರೈತರ ಕೈಗೆ ಹಣ ಸೇರಿಲ್ಲ. ಸೇರಿದ ಹಣ ಸಾಲ ಮುಟ್ಟಿಸಲಿಕ್ಕೇ ಸಾಕಾಗುತ್ತಿದೆ. ಸದ್ಯ ಕೈಯಲ್ಲಿ ಕಾಸಿಲ್ಲ. ಸಾಲದ ಹೊರೆ ಸಾಮಾನ್ಯವಾಗಿದೆ. ಕೃಷಿ ಬಿಟ್ಟರೆ ಬೇರೆನೂ ಕೆಲಸ ಮಾಡುವಂತಿಲ್ಲ. ಅನ್ನದ ಉತ್ಪಾದನೆ ಜವಾಬ್ದಾರಿ ನಮ್ಮ ಮೇಲಿದೆ ಎನ್ನುತ್ತಾರೆ ರೈತರು.
ಏಪ್ರಿಲ್- ಮೇ ತಿಂಗಳು ಕಳೆಯುವುದು ಹೇಗಪ್ಪ ಎನ್ನುತ್ತಲೇ ಜೂನ್ ಸಮೀಪಿಸಿ ಮಳೆ ಬಂದರೆ ಬಿತ್ತನೆ ಹೇಗಪ್ಪ ಮಾಡಬೇಕು ಎನ್ನುವ ಸ್ಥಿತಿಯಲ್ಲಿ ರೈತರಿದ್ದಾರೆ. ಇದ್ದ ಎತ್ತುಗಳನ್ನು ಬರಲಗಾದಿಂದ ಮಾರಿಕೊಂಡು ಬಿಟ್ಟಿದ್ದಾರೆ. ಬಿತ್ತನೆ ಮಾಡಲು ಮುಂದಾದರೆ ಬೀಜ, ಗೊಬ್ಬರ ಖರೀದಿಗೂ ಹಣವಿಲ್ಲ. ಸಕಾಲಕ್ಕೆ ಬ್ಯಾಂಕುಗಳು ಸಾಲ ನೀಡುವುದಿಲ್ಲ. ಸಾಹುಕಾರಿ ಸಾಲ ಈ ಬಾರಿ ದೊರೆಯದ ಪರಿಸ್ಥಿತಿ ಉಂಟಾಗಿದೆ. ರೈತರಿಗೆ ಬರದ ಹಸಿವಿನ ನಡುವೆ ಮುಂಗಾರು ಹಂಗಾಮಿನ ಸಿದ್ಧತೆಯ ಹೋರಾಟ ಮಾಡುವ ಅನಿವಾರ್ಯತೆಯೂ ಬಂದೊದಗಿದೆ.
ಸಕಾಲಕ್ಕೆ ಬೀಜ ಒದಗಿಸಿ: ಮುಂಗಾರು ಹಂಗಾಮಿಗೆ ಕೃಷಿ ಇಲಾಖೆಯೂ ಈ ಭಾಗದ ರೈತರ ಬೀಜದ ಬೇಡಿಕೆಯನ್ನು ಸಕಾಲಕ್ಕೆ ಪೂರೈಕೆ ಮಾಡಲು ಸಿದ್ಧತೆ ಮಾಡಿಕೊಂಡು ಉದ್ದು, ಹೆಸರು, ತೊಗರಿ, ಶೇಂಗಾ, ಸೂಯಾಬಿನ್, ಸಜ್ಜೆ, ಸೂರ್ಯಕಾಂತಿ, ಎಳ್ಳು ಮತ್ತಿತರ ಬೀಜಗಳ ಬೇಡಿಕೆ ಇದೆ. ಮಳೆ ಬಿದ್ದ ಮೇಲೆ ಬೀಜ, ಗೊಬ್ಬರಕ್ಕಾಗಿ ಅಲೆದಾಡಿ ದಿನದೊಡುವಂತೆ ಆಗಬಾರದು. ಇಲಾಖೆಯಲ್ಲಿ ಈಗಾಗಲೇ ಮೊದಲೆ ಬೀಜಗಳ ದಾಸ್ತಾನು ಆಗಬೇಕು ಎನ್ನುತ್ತಾರೆ ರೈತರು.
ಸಬ್ಸಿಡಿ ನಾಮಕೆವಾಸ್ತೆ ಬೇಡ: ಬಿತ್ತನೆ ಬೀಜವನ್ನು ಕೃಷಿ ಇಲಾಖೆಗೆ ಪೂರೈಸುವಾಗ ಕಂಪನಿಗಳು ಬೆಲೆ ಹೆಚ್ಚಿಸುತ್ತವೆ. ಕಂಪನಿಗಳಿಂದ ಖರೀದಿಸುವ ಬೀಜಗಳಿಗೆ ಕೃಷಿ ಇಲಾಖೆ ಶೇ. 50ಷ್ಟು ಸಬ್ಸಿಡಿ ಕಡಿತ ಮಾಡಿ ವಿತರಿಸಿದ ಮೇಲೂ ಹೊರಗೆ ಸಿಗುವ ಬೀಜದ ಬೆಲೆಗೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ಈ ರೀತಿಯ ನಾಮಕಾವಾಸ್ತೆ ಸಬ್ಸಿಡಿ ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸುತ್ತಾರೆ ರೈತರು.
ಬೆಳೆ ಕಟಾವು ಆದ ಮೇಲೆ ಮಾಗಿ ಉಳುಮೆ ನಿರಂತರವಾಗಿ ಮಾಡಬೇಕು. ಅಂದರೆ ಮೂರು ರೀತಿ ಲಾಭವಾಗುತ್ತದೆ. ಹೊಲದಲ್ಲಿ ಬಿದ್ದ ಹುಲ್ಲು, ಕಸ ಕಣಿಕೆ ಮಣ್ಣಿನಲ್ಲಿ ಸಿಕ್ಕು ಮಳೆ ಬಂದಾಗ ಕೊಳೆತು ಗೊಬ್ಬರವಾಗಿ ಪರಿಣಮಿಸುತ್ತದೆ. ನೆಟೆ ರೋಗ ನಿರ್ವಹಣೆ, ಉಳಿಮೆಯಿಂದ ಭೂಮಿ ನೀರು ಇಂಗಿಸಿಕೊಳ್ಳುತ್ತದೆ. ಅಲ್ಲದೆ, ರೋಗಾಣು ಜೀವಿಗಳು ಬಿಸಿಲಿಗೆ ಬಿದ್ದಾಗ ಪಕ್ಷಿಗಳು ತಿಂದುಹಾಕುತ್ತಿವೆ. ಅಲ್ಲದೆ, ಕೆಲವೊಂದು ಸತ್ತು ಹೋಗುವುದರಿಂದ ರೋಗವು ನಿರ್ವಹಣೆಯಾಗಿ ಬೆಳೆಗೆ ಅನುಕೂಲವಾಗುತ್ತದೆ ಎಂದು ಕೃಷಿ ತಜ್ಞರು ಮತ್ತು ಕೃಷಿ ವಿಜ್ಞಾನಿಗಳು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
BGT 2024-25: ಆಸೀಸ್ ನಲ್ಲಿ ಲಯಕ್ಕೆ ಮರಳಿದ ವಿರಾಟ್ ಕೊಹ್ಲಿ
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.