ಸರ್ಕಾರಿ ಶಾಲೆ ನೋಡಿ ಮೂಗು ಮುರಿಯದಿರಿ!
ಶಾಲೆ ಏಳ್ಗೆಗೆ ಎರಡು ಲಕ್ಷ ರೂ. ದೇಣಿಗೆ ನೀಡಿದ ಗ್ರಾಮಸ್ಥರು
Team Udayavani, Sep 5, 2019, 10:54 AM IST
ಆಳಂದ: ಸಾಲೇಗಾಂವ ಗ್ರಾಮದ ಸಂಗಮನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣ ಹಸಿರಿನಿಂದ ಕಂಗೊಳಿಸುತ್ತಿದೆ.
ಮಹಾದೇವ ವಡಗಾಂವ
ಆಳಂದ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿದು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವ ಇಂದಿನ ದಿನಮಾನಗಳಲ್ಲಿ ಅಪರೂಪ ಎನ್ನುವಂತೆ ತಾಲೂಕಿನ ಸಾಲೇಗಾಂವ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾದರಿಯ ಶಾಲೆ ಎನ್ನಿಸಿಕೊಳ್ಳುತ್ತಿದೆ.
ಕುಗ್ರಾಮವಾದರೂ ಶೈಕ್ಷಣಿಕ ವಾತಾವರಣ ಬೆಳೆದ ಹಿನ್ನೆಲೆಯಲ್ಲಿ ಇದುವರೆಗೂ ಗ್ರಾಮಸ್ಥರು 2 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಈ ದೇಣಿಗೆ ಹಣದಲ್ಲಿ ಒಂದು ಲಕ್ಷ ರೂ. ವೆಚ್ಚದಲ್ಲಿ ವೇದಿಕೆ ನಿರ್ಮಾಣ, 20 ಸಾವಿರ ರೂ. ವೆಚ್ಚದಲ್ಲಿ ಗಣಕ ಯಂತ್ರ, 10 ಸಾವಿರ ರೂ. ವೆಚ್ಚದಲ್ಲಿ ಪ್ರೊಜೆಕ್ಟರ್, ಮೂರು ಸಾವಿರ ವೆಚ್ಚದಲ್ಲಿ 65 ಊಟದ ತಟ್ಟೆ, ನೀರು ಸಂಗ್ರಕ್ಕೆ 500 ಲೀಟರ್ ಸಾಮರ್ಥ್ಯದ ಸಿಂಟ್ಯಾಕ್ಸ್, ನೀರೆತ್ತುವ ಮೋಟಾರ್, ಎಂಟು ಸಾವಿರ ರೂ.ದಲ್ಲಿ ಆವರಣದಲ್ಲಿ ಕಲ್ಲು ಹಾಸಿಗೆ ಹೀಗೆ ಬಂದ ದೇಣಿಗೆಯನ್ನೇ ಸದ್ಭಳಕೆ ಮಾಡಿದ ಹಿನ್ನೆಲೆಯಲ್ಲಿ ಶಾಲೆಯ ಮಕ್ಕಳಿಗೆ ಒಳ್ಳೆಯ ವಾತಾವರಣ ಸೃಷ್ಟಿಯಾಗಿದೆ.
ಈ ಶಾಲೆಗೆ ಕಳೆದ ಎಂಟು ವರ್ಷಗಳಿಂದ ಏಕೋಪಾಧ್ಯ ಶಿಕ್ಷಕರಾಗಿದ್ದ ರವಿ ಚಿಕ್ಕಮಂಗಳೂರು ಅವರು, ಸತತ ಪ್ರಯತ್ನದ ಫಲದಿಂದ ಶಾಲೆಯ ಚಿತ್ರವಣನ್ನೇ ಬದಲಿಸುವ ಮೂಲಕ ಶಾಲೆಯೊಂದಿಗೆ ತಾವು ಸಹ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಾಗಿ ಪಾಲಕರ ಹಾಗೂ ವಿದ್ಯಾರ್ಥಿಗಳ ಪ್ರೀತಿ ಪಾತ್ರರಾಗಿದ್ದಾರೆ.
ಶಾಲೆ ಆರಂಭಗೊಂಡು 13 ವರ್ಷಗಳ ಅವಧಿಯಲ್ಲಿ ಎಂಟು ವರ್ಷ ಒಬ್ಬರೇ ಶಿಕ್ಷಕರಾಗಿದ್ದ ರವಿ ಅವರು, ಕೇವಲ ಶಾಲೆಗೆ ಶಿಕ್ಷಕರಾಗಿರದೇ, ಹೆಚ್ಚಿನ ಒತ್ತು ನೀಡಿ ಮಕ್ಕಳ ಕಲಿಕಾ ಗುಣಮಟ್ಟ, ಬ್ಯಾಂಕಿಂಗ್ ವ್ಯವಸ್ಥೆ, ಆವರಣದಲ್ಲಿ ಪರಿಸರ ಸಂರಕ್ಷಣೆಗಾಗಿ ಪ್ರತಿಯೊಂದು ಮಗುವಿನ ಮೂಲಕ ಹತ್ತಾರು ಗಿಡ, ಮರ ಬೆಳೆಸಲು ಪ್ರೋತ್ಸಾಹ, ಶಾಲಾ ಕೈತೋಟ, ಪ್ರತಿಭಾ ಕಾರಂಜಿಯಲ್ಲಿ ಮಕ್ಕಳು ಮಿಂಚುವಂತೆ ಮಾಡಿದೆ. ಕ್ರೀಡೆ, ಮೊರಾರ್ಜಿ, ಕಿತ್ತೂರುರಾಣಿ ಚೆನ್ನಮ್ಮ, ಆದರ್ಶ ಶಾಲೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನವರು ಪಾಸಾಗುವಂತೆ ನೋಡಿಕೊಳ್ಳಲಾಗಿದೆ.
ಈ ಸದ್ಯ ಶಾಲೆಯಲ್ಲಿ ರವಿ ಮತ್ತು ವೆಂಕಟೇಶ ಗುತ್ತೇದಾರ ಎನ್ನುವ ಇಬ್ಬರು ಶಿಕ್ಷಕರು ಸೇರಿ ಮಕ್ಕಳ ಕಲಿಕೆಯಲ್ಲಿ ಅಮೂಲಾಗ್ರ ಬದಲಾವಣೆ ತರುವ ಮೂಲಕ ಇನ್ನೂಳಿದ ಶಾಲೆಗಳಿಗೆ ಮಾದರಿಯಾಗಿದ್ದಾರೆ ಎಂದು ಪಾಲಕರು ಹೇಳಿಕೊಂಡಿದ್ದಾರೆ.
ಹಸಿರು ವನ ಶಾಲೆಗೊಂದು ವನ, ಮಗುವಿಗೊಂದು ಮರ ಯೋಜನೆ ಅಡಿಯಲ್ಲಿ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಸಿ ನೆಟ್ಟು ಅದರ ಬೆಳವಣಿಗೆ ಸಂಪೂರ್ಣ ಜವಾಬ್ದಾರಿ ವಹಿಸುವ ಮೂಲಕ ಆವರಣದಲ್ಲಿ ಹೊಂಗೆ, ಅರಳಿ, ಮಾವು, ಬೇವು, ತುಳಿಸಿ, ತೇಗ, ಅಶೋಕ, ನುಗ್ಗೆ ಕರಿಬೇವು, ಹುಣಿಸೆ, ಬದಾಮಿ ಹೀಗೆ ಅನೇಕ ಬೆಳೆದ ಮರಗಳು ಕಂಗಳಿಸುತ್ತಿವೆ.
ಬ್ಯಾಂಕಿಂಗ ವ್ಯವಸ್ಥೆ: ಶಾಲೆಯಲ್ಲೇ ವಿದ್ಯಾರ್ಥಿಗಳ ಖಾತೆ ತೆರೆದು ಉಳಿತಾಯದ ಹವ್ಯಾಸ ಬೆಳೆಸುವ ಮೂಲಕ ಬ್ಯಾಂಕ್ ವ್ಯವಹಾರದ ಜ್ಞಾನ ಮೂಡಿಸಲಾಗಿದೆ.
ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾ ಮಟ್ಟದ ವರೆಗೂ ಮುಂಚೂಣಿಯಲ್ಲಿ ವಿದ್ಯಾರ್ಥಿಗಳ ಸಾಧನೆಗೆ ಕೈಗನ್ನಡಿಯಾಗಿದೆ. ಇಲ್ಲಿ ಓದಿದ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆಗೆ ಪೂರಕ ಎನ್ನುವುದಕ್ಕೆ ಹೆಚ್ಚಿನವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸಾಗಿ ಆದರ್ಶ, ಕಿತ್ತೂರು ರಾಣಿ ಚನ್ನಮ್ಮ, ಮೊರಾರ್ಜಿ ಶಾಲೆಗಳ ನೇಮಕಾತಿಯಲ್ಲಿ ಅನೇಕ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಅಲ್ಲದೇ, ಗಣಿತ ಕಲಿಕಾ ಪರೀಕ್ಷೆಯಲ್ಲೂ ಮೂರು ಪ್ರಶಸ್ತಿಗಳನ್ನು ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡಿದ್ದಾರೆ.
ಶಾಲೆಯ ಕೋಣೆಗಳಲ್ಲಿ ಗೋಡೆ ಬರಹ ಹಾಗೂ ಚಿತ್ರ ರಚನೆಯಲ್ಲಿ ಸ್ವತಃ ಶಿಕ್ಷಕ ರವಿ ಅವರು ಮಕ್ಕಳೊಂದಿಗೆ ಸೇರಿ ಅಂದ, ಚಂದವಾಗಿ ಮೂಡಿಸಿರುವುದು ನೋಡುಗರನ್ನು ಹುಬ್ಬೇರಿಸುವಂತೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.