ನೀರಾವರಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯ
ಹೊಸ ಕೆರೆಕಟ್ಟೆ ನಿರ್ಮಾಣವಾಗದ್ದರಿಂದ ಕೃಷಿ ಕಾರ್ಯ ಕುಸಿತ
Team Udayavani, Dec 18, 2019, 10:55 AM IST
ಮಹಾದೇವ ವಡಗಾಂವ
ಆಳಂದ: ತಾಲೂಕಿನಲ್ಲಿ ನೀರಾವರಿ ಯೋಜನೆಗಳು ಸೂಕ್ತ ಅನುಷ್ಠಾನಕ್ಕೆ ಬರುತ್ತಿಲ್ಲವೆಂದು ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀರಾವರಿ ಮೂಲಗಳ ಉತ್ತೇಜನಕ್ಕೆ ಅಮರ್ಜಾ ಅಣೆಕಟ್ಟೆ ಸೇರಿದಂತೆ ಕೆಲವೆಡೆ ಕೆರೆಗಳ ನಿರ್ಮಾಣಕ್ಕೆ ಸರ್ಕಾರ ಸಾಕಷ್ಟು ಹಣ ನೀಡಿದರೂ, ರೈತರ ಜಮೀನುಗಳಿಗೆ ಮಾತ್ರ ನೀರು ತಲುಪಿಲ್ಲ. ಆದ್ದರಿಂದ ಸರ್ಕಾರ ನೀರಾವರಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಕುಡಿಯುವ ನೀರಿಗೆ ಸೀಮಿತ: ಜಿಲ್ಲೆಯ ಮಧ್ಯಮ ನೀರಾವರಿಗಳಲ್ಲಿ ಒಂದಾಗಿರುವ ಅಮರ್ಜಾ ಅಣೆಕಟ್ಟೆ ನಿರ್ಮಾಣ ಆದಾಗಿನಿಂದಲೂ ಅಣೆಕಟ್ಟೆ ಕಾಲುವೆ ಕೊನೆಯಂಚಿನ ರೈತರಿಗೆ ಇಂದಿಗೂ ನೀರು ಸಿಕ್ಕಿಲ್ಲ. ಅಲ್ಲದೇ ಈಗ ಅಣೆಕಟ್ಟೆಯನ್ನು ಬರೀ ಕುಡಿಯುವ ನೀರಿನ ಬಳಕೆಗೆ ಸೀಮಿತಗೊಳಿಸಿದ್ದು, ನೀರಾವರಿ ಅವಲಂಬಿತರ ಗೋಳು ಯಾರಿಗೆ ಹೇಳಬೇಕು ಎನ್ನುವ ಪ್ರಶ್ನೆ ಕಾಡುತ್ತಿದೆ.
ತಾಲೂಕಿನಲ್ಲಿ 8671 ಹೆಕ್ಟೇರ್ ಪ್ರದೇಶ ನೀರಾವರಿ ಕ್ಷೇತ್ರವಿದೆ. ಈ ಪೈಕಿ ಬಾವಿ ನೀರಾವರಿ 8470 ಹೆಕ್ಟೇರ್ ಮತ್ತು ಕೊಳವೆ ಬಾವಿ 201 ಹೆಕ್ಟೇರ್ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ತಾಲೂಕಿನ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ 35 ಕೆರೆಗಳು ಹಾಗೂ ಮಧ್ಯಮ ನೀರಾವರಿ ಇಲಾಖೆ ವ್ಯಾಪ್ತಿಯ ಒಂದು ಅಮರ್ಜಾ ಅಣೆಕಟ್ಟೆ
ಕನಿಷ್ಠ 36 ಗ್ರಾಮಗಳಿಗಾದರೂ ನೀರಾವರಿ ಕೃಷಿಗೆ ಆಧಾರವಾಗಬೇಕಿತ್ತು. ಈ ಕೆರೆ ಹಾಗೂ ಅಣೆಕಟ್ಟೆ ಯೋಜನೆ ಅನುಷ್ಠಾನವಾಗದೇ ಹಾಗೂ ಹೊಸ ಕೆರೆ, ಕಟ್ಟೆಗಳ ನಿರ್ಮಾಣವೂ ಆಗದೇ ಇರುವುದರಿಂದ, ವರ್ಷ ಕಳೆದಂಡೆ ನೀರಾವರಿ ಕೃಷಿ ಮತ್ತಷ್ಟು ಕುಸಿಯಲು ಪ್ರಮುಖ ಕಾರಣವಾಗಿದೆ. ನೀರಾವರಿ ಉದ್ದೇಶಕ್ಕಾಗಿ ಹುಟ್ಟಿಕೊಂಡಿರುವ ಅಮರ್ಜಾ ಅಣೆಕಟ್ಟೆ ಸೇರಿದಂತೆ ತಾಲೂಕಿನ ಜಿನುಗು ಕೆರೆಗಳ ಕಾಲುವೆ ದುರಸ್ತಿ ಹಾಗೂ ಹೂಳೆತ್ತುವಿಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಿಸಿ, ಕೆಳಭಾಗದ ಹೊಲಗಳಿಗೆ ನೀರೊದಗಿಸುವ ಮೂಲಕ ನೀರಾವರಿ ಕೃಷಿ ಉತ್ತೇಜನಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನಕ್ಕೆ ತರಲು ಜನಪ್ರತಿನಿಧಿ ಗಳು ಮುಂದಾಗಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
1972ರಲ್ಲಿ ಟಿಡಿಪಿ ಅಧ್ಯಕ್ಷರಾಗಿದ್ದ ನನ್ನ ಅಜ್ಜ ಅಣ್ಣಾರಾವ್ ಪಾಟೀಲ ಹಾಗೂ ಸ್ವಾತಂತ್ರ್ಯ ಸೇನಾನಿ ಅಣ್ಣಾರಾವ್ ವಿ. ಪಾಟೀಲ ಪರಿಶ್ರಮದ ಫಲವಾಗಿ ನೀರಾವರಿ ಉದ್ದೇಶದಿಂದ ಆರಂಭದಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ ಅಮರ್ಜಾ ಅಣೆಕಟ್ಟೆ ನಿರ್ಮಿಸಲಾಗಿತ್ತು. ಕಾಲುವೆ ಕಾಮಗಾರಿ ವೈಜ್ಞಾನಿಕವಾಗದೆ, ನೀರಿನ ಒಳಹರಿವು ಕಡಿಮೆಯಾಗಿದ್ದರಿಂದ ನೀರಾವರಿಗೆ ಒತ್ತು ನೀಡದೇ ಅನಾನೂಕುಲವಾಗಿದೆ. ಡಾ| ಮಲ್ಲಿಕಾರ್ಜುನ ಖರ್ಗೆ ನೀರಾವರಿ ಸಚಿವರಿದ್ದಾಗ 100 ಕೋಟಿ ರೂ. ಅನುದಾನದಲ್ಲಿ ಕಾಲುವೆ ದುರಸ್ತಿಗೆ ಚಾಲನೆ ನೀಡಿದ್ದರು. ಹೀಗೆ ಐದು ಕೋಟಿ ರೂ. ವೆಚ್ಚದಲ್ಲಿ ಆರಂಭಗೊಂಡ ಕಾಮಗಾರಿ 200 ಕೋಟಿ ರೂ. ಖರ್ಚಾದರೂ ಮುಗಿಯದೇ, ನೀರಾವರಿ ಕನಸು ಈಡೇರದಂತಾಗಿದೆ.
ಗುರುಶರಣ ಪಾಟೀಲ ಕೋರಳ್ಳಿ,
ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ
ಉದ್ದೇಶ ಈಡೇರಿಸುವ ಕಾರ್ಯ ಪ್ರಗತಿಯಲ್ಲಿ
ನೀರಾವರಿ ಉದ್ದೇಶವಿದೆ. ಆದರೆ ಅಣೆಕಟ್ಟೆಗೆ ನೀರು ಭರ್ತಿಯಾಗುತ್ತಿಲ್ಲ. ಮೊದಲು ಕೇಂದ್ರೀಯ ವಿವಿಗೆ ಕುಡಿಯುವ ನೀರು ಪೂರೈಕೆ ಇರಲಿಲ್ಲ. ಮಳೆ ಕೊರತೆಯಿಂದ ಅಣೆಕಟ್ಟೆ ಭರ್ತಿಯಾಗುತ್ತಿಲ್ಲ. ಜವಳಿ, ನಿಂಬರಗಾ ಧಂಗಾಪುರ ವರೆಗೆ ಮಾತ್ರ ಎರಡ್ಮೂರು ಸಲ ಕಾಲುವೆಗೆ ನೀರು ಹರಿಸಲಾಗಿದೆ. ಅಫಜಲಪುರ ಭೀಮಾನದಿಯಿಂದ ಮರ್ಜಾಕ್ಕೆ ನೀರು ಹರಿಸುವ ಉದ್ದೇಶದಿಂದ ಇಲಾಖೆ ಕೈಗೆತ್ತಿಕೊಂಡ ಕಾರ್ಯ ಪ್ರಗತಿಯಲ್ಲಿದೆ. ವರ್ಷದಲ್ಲಿ ನೀರು ಬರ್ತಿಯಾದರೆ ಕಾಲುವೆ ವ್ಯಾಪ್ತಿಯ ಎಲ್ಲ ರೈತರಿಗೆ ನೀರು ಒದಗಿಸಲು ಅನುಕೂಲವಾಗುತ್ತದೆ. ಎಡದಂಡೆ ವ್ಯಾಪ್ತಿಯ 54.784 ಕಿ.ಮೀ ಕಾಮಗಾರಿ ಪೂರ್ಣವಾಗಿದೆ. ಅಫಜಲಪುರ ವ್ಯಾಪ್ತಿಯ ಚರಣ ಕಾಲುವೆ ಮುಗಿಯುವ ಹಂತದಲ್ಲಿದೆ. ಬಲದಂಡೆಯ 42.48ಕಿ.ಮೀ ಕಾಮಗಾರಿ ಪೂರ್ಣವಾಗಿದೆ. ಎರಡು ಬಾರಿ ನೀರು ಹರಿಸಲಾಗಿದೆ. ಪ್ರತಿಸಲ ಕೇವಲ 22 ಕಿ.ಮೀ ವರೆಗೆ ಮಾತ್ರ ನೀರು ಹರಿಸಲು ಸಾಧ್ಯವಾಗುತ್ತಿದೆ. ಅಷ್ಟರಲ್ಲೇ ಅಣೆಕಟ್ಟೆ ಖಾಲಿಯಾಗುತ್ತಿದೆ.
. ಮಲ್ಲಿಕಾರ್ಜುನ,
ಸಹಾಯಕ ಎಂಜಿನಿಯರ್, ನೀರಾವರಿ ನಿಗಮ, ಅಮರ್ಜಾ ಅಣೆಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.