3 ತಿಂಗಳಿಂದ ಶುದ್ಧ ಕುಡಿಯುವ ನೀರಿನ ಘಟಕ ಬಂದ್!
Team Udayavani, Nov 13, 2019, 4:10 PM IST
ಆನಂದಪುರ: ಸಮೀಪದ ಆಚಾಪುರ ಗ್ರಾಪಂನಲ್ಲಿ ಗ್ರಾಮೀಣ ಕುಡಿಯುವ ನೀರಿನ ಶುದ್ಧ ಘಟಕದ ಯೋಜನೆಯಲ್ಲಿ ಪ್ರಾರಂಭವಾದ ಕುಡಿಯುವ ನೀರಿನ ಘಟಕ ಯಾತ್ರಿಕ ತೊಂದರೆಯಾಗಿ 3 ತಿಂಗಳು ಕಳೆದರೂ ದುರಸ್ತಿ ಮಾಡದೆ ಈ ಭಾಗದ ಜನರಿಗೆ ಶುದ್ಧ ಕುಡಿಯುವ ನೀರಿಲ್ಲದೆ ತೊಂದರೆಯಾಗಿದೆ.
ಆಚಾಪುರ ಗ್ರಾಪಂನ ರಾಷ್ಟ್ರೀಯ ಹೆದ್ದಾರಿ 206ಕ್ಕೆ ಹೊಂದಿಕೊಂಡಂತೆ ಸ್ಥಳೀಯ ಸರ್ಕಾರಿ ಕನ್ನಡ ಶಾಲಾ ಆವರಣದಲ್ಲಿ ಈ ಘಟಕವನ್ನು ಆಳವಡಿಸಲಾಗಿದೆ. ಇದು 2017-18ನೇ ಸಾಲಿನಲ್ಲಿ ಕಾಮಗಾರಿ ಮುಕ್ತಾಯವಾಗಿದ್ದು ಅಂದಿನ ಕಂದಾಯ ಮಂತ್ರಿಯಾಗಿದ್ದ ಕಾಗೋಡು ತಿಮ್ಮಪ್ಪ ಅವರ ಅವಧಿಯಲ್ಲಿ ಈ ಘಟಕ ಉದ್ಘಾಟನೆಯಾಗಿತ್ತು. ಈಗ ಕೇವಲ ಒಂದು ವರ್ಷವಾಗುತ್ತಿದ್ದಂತೆ ಈ ಘಟಕ ಹಾಳಾಗಿದೆ.
ಈ ಘಟಕ ಸುಮಾರು 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಗ್ರಾಮೀಣ ಕುಡಿಯುವ ನೀರಿನ ಶುದ್ಧ ಘಟಕದ ಯೋಜನೆ ದೂಳು ಹಿಡಿಯುತ್ತಿದೆ. ಈ ಘಟಕದಿಂದ ಆಚಾಪುರ, ಇಸ್ಲಾಂಪುರ, ಮುರುಘಾಮಠ ಸೇರಿದಂತೆ ಸುಮಾರು 3 ಕಿಮೀ ದೂರದಲ್ಲಿರುವ ಆನಂದಪುರ ಹಾಗೂ ಯಡೇಹಳ್ಳಿ ಇತರೆ ಭಾಗದಿಂದ ಜನರು ಈ ಕುಡಿಯುವ ನೀರು ತೆಗೆದುಕೊಂಡು ಹೋಗುತಿದ್ದರು.
ಅದರೆ ಕಳೆದ 3 ತಿಂಗಳಿಂದ ಘಟಕ ಹಾಳಾಗಿದ್ದು ನೀರು ಇಲ್ಲದಂತಾಗಿದೆ. ಅಲ್ಲದೆ ಇಲ್ಲಿನ ಸರ್ಕಾರಿ ಕನ್ನಡ ಶಾಲೆಗೂ ಈ ನೀರನ್ನು ಬಳಕೆ ಮಾಡಲಾಗುತಿತ್ತು. ಅವರಿಗೂ ನೀರು ಇಲ್ಲದಂತಾಗಿದೆ. ಹಾಗೆಯೇ ಆಚಾಪುರ ಗ್ರಾಪಂನವರು ಈ ನೀರಿಗಾಗಿ ಜನರಿಗೆ ಮುಂಗಡವಾಗಿ ಹಣ ತಗೆದುಕೊಂಡು ಟೋಕನ್ ನೀಡಿದ್ದರು.
ಆದರೆ ಈಗ ಪ್ರತಿ ದಿನ ಟೋಕನ್ ಹಿಡಿದು ನೀರು ಬರುತ್ತದೆ ಎಂದು ನೋಡುವ ಪರಿಸ್ಥಿತಿ ಉಂಟಾಗಿದೆ. ಗ್ರಾಪಂನವರು ಜಿಪಂ ಇಂಜಿನಿಯರ್ ವಿಭಾಗಕ್ಕೆ ದೂರು ನೀಡಿದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ ಎಂದು ತಿಳಿಸಿದ್ದಾರೆ. ಈ ಶುದ್ಧ ಕುಡಿಯುವ ನೀರಿನ ಘಟಕಗಳು ಬಹುತೇಕ ಭಾಗದಲ್ಲಿ ನಿಮಾರ್ಣವಾಗಿದ್ದು ನಾನಾ ತೊಂದರೆಯಿಂದ ಘಟಕ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್!
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.