ಹೊಸಗುಂದ ಉತ್ಸವ ಆಹ್ವಾನ ಪತ್ರಿಕೆ ಬಿಡುಗಡೆ
Team Udayavani, Nov 11, 2019, 2:45 PM IST
ಆನಂದಪುರ: ಇಂದಿನ ಸಮಾಜಕ್ಕೆ ಹಿಂದಿನ ಉತ್ಸವಗಳ ನೆನಪು ಅತ್ಯವಶ್ಯಕವಾಗಿದೆ ಎಂದು ಜಾನಪದ ಕಲಾವಿದ ಹಾಗೂ ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷ ಟಾಕಪ್ಪ ಕಣ್ಣೂರು ಹೇಳಿದರು.
ಸಮೀಪದ ಹೊಸಗುಂದದಲ್ಲಿ ನ. 16, 17, 18ರಂದು ನಡೆಯುವ ಹೊಸಗುಂದ ಉತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಇಂದಿನ ಯುವ ಜನಾಂಗಕ್ಕೆ ನಮ್ಮ ನಾಡಿನ ಹಿಂದಿನ ರಾಜ- ಮಹಾರಾಜರ ಕಾಲದಇತಿಹಾಸ ತಿಳಿಸುವ ಅಗತ್ಯವಿದೆ ಎಂದರು. ಹೊಸಗುಂದ ಉತ್ಸವದಲ್ಲಿ ವಿವಿಧ ಜಾನಪದ ವೈಭವ ನಡೆಯಲಿದೆ. 16ರಂದು ಬೆಳಗ್ಗೆ 10.30ಕ್ಕೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ಶಿಥಿಲಾವಸ್ಥೆಯ ದೇಗುಲಗಳು ವಿಚಾರವಾಗಿ ವಿಚಾರ ಸಂಕಿರಣ ನಡೆಯಲಿದೆ.
ಸಂಜೆ 6 ರಿಂದ 7ರ ವರೆಗೆ ಜಾನಪದ ಸಂಭ್ರಮ, ನಂತರ ಗಂಗಾವತಿ ಪ್ರಾಣೇಶ್ ತಂಡದಿಂದ ನಗೆಹಬ್ಬ, 17ರಂದು ಬೆಳಗ್ಗೆ ಸಾವಯವ ಕೃಷಿ, ಬದುಕು,ಆಹಾರ ಕ್ಷೇತ್ರದಲ್ಲಿ ಸಾವಯವ ಭೋಜನ, ಕೃಷಿ ಮತ್ತು ಬದುಕು ಕುರಿತು ವಿಚಾರ ವಿನಿಮಯ, ಸಂಜೆ 6ಕ್ಕೆ ಜಾನಪದ ಸಂಭ್ರಮ, 7 ರಿಂದ ಜೀ ಕನ್ನಡ ಸರಿಗಮಪ ಖ್ಯಾತಿಯ ಗಾಯಕರಾದ ಹನುಮಂತ, ಚನ್ನಪ್ಪ, ಸುಹಾನ ಮತ್ತು ತಂಡದವರಿಂದ ಸುಮಧುರ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.
18ರಂದು ಬೆಳಗ್ಗೆ 7 ರಿಂದ 12 ಗಂಟೆಯವರೆಗೆ ಪರಿಸರ ಪ್ರವಾಸ, ಹೊಸಗುಂದ ಕಾಡಿನಲ್ಲಿ, ಸಂಜೆ 5 ರಿಂದ 6ರ ವರೆಗೆ ಜಾನಪದ ಸಂಭ್ರಮ, 7 ರಿಂದ ಖ್ಯಾತ ತಬಲಾ ಮಾಂತ್ರಿಕ ಆನೂರು ಅನಂತಕೃಷ್ಣ ಶರ್ಮಾ ಮತ್ತು ಸ್ಯಾಕ್ಸೋಫೋನ್ ಖ್ಯಾತಿಯ ಶ್ರೀಧರ್ ಸಾಗರ್ ತಂಡದಿಂದ ವಾದ್ಯ ಸಂಗೀತ ನಡೆಯಲಿದೆ.
ಅಲ್ಲದೆ ಇದೇ ಪ್ರಥಮ ಬಾರಿಗೆ ಶ್ರೀ ಉಮಾಮಹೇಶ್ವರನಿಗೆ ವೈಭವದ ಲಕ್ಷ ದೀಪೋತ್ಸವ ನಡೆಯಲಿದೆ. ಉತ್ಸವದಲ್ಲಿ ವಿವಿಧ ಸಂಘ- ಸಂಸ್ಥೆಗಳಿಂದ ವಿವಿದ ಖಾದ್ಯಗಳು (ತಿಂಡಿ ತಿನಿಸುಗಳ ಅಂಗಡಿಗಳು)ಜನರಿಗೆ ಒಂದೇ ಸ್ಥಳದಲ್ಲಿ ದೂರೆಯುವಂತಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಉಮಾಮಹೇಶ್ವರ ದೇವಾಲಯದ ಟ್ರಸ್ಟ್ ಅಧ್ಯಕ್ಷ ಸಿ.ಎಂ.ಎನ್. ಶಾಸ್ತ್ರಿ, ಸಾಗರ ಶಂಕರ ಮಠದ ಆಶ್ವಿನ್, ನಂಜುಂಡಸ್ವಾಮಿ , ಜ್ಯೋತಿ ಕೋವಿ, ಹಾಲಪ್ಪ, ಶಂಕರ್‌ನಾಯಕ್ಕ್ , ಬಸವರಾಜ್ ಗೌಡ್ರು, ನಾಗರಾಜ್ ಸಾಗರ್, ಗಿರೀಶ್ ಕೋವಿ, ಮಂಜಪ್ಪ, ಹುರಳಿ ನಾರಾಯಣಪ್ಪ, ಹಿತಕರ ಜೈನ್, ದಿನೇಶ್, ಗೋಪಾಲ್, ಕಂಜಗುಣಿ ನಾರಾಯಣಪ್ಪ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.