![Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು](https://www.udayavani.com/wp-content/uploads/2024/12/vv-4-415x234.jpg)
ವಿದ್ಯಾರ್ಥಿಗಳಿಗೆ ಪಠ್ಯದ ಜತೆ ಕೃಷಿ ಪಾಠ ಮುಖ್ಯ
ಶಾಲೆ ಆವಾರದಲ್ಲಿಯೇ ವಿವಿಧ ತರಕಾರಿ ಬೆಳೆ ಬೇಸಾಯ
Team Udayavani, Oct 10, 2019, 4:42 PM IST
![10-October-18](https://www.udayavani.com/wp-content/uploads/2019/10/10-October-18-620x261.jpg)
ಅರುಣ ಶೆಟ್ಟಿ
ಅಂಕೋಲಾ: ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಶಾಲಾ ಸಮಯದಲ್ಲಿಯೇ ಮಕ್ಕಳಿಗೆ ಸ್ಥಳೀಯವಾಗಿ ಬೆಳೆಯುವ ತರಕಾರಿಗಳ ಕುರಿತು ಮಾಹಿತಿಯಿದ್ದರೆ ಮುಂದೊಂದು ದಿನ ಉತ್ತಮ ಕೃಷಿಕರಾಗಿಯೂ ಹೊರಹೊಮ್ಮಲು ಸಾಧ್ಯ. ಈ ನಿಟ್ಟಿನಲ್ಲಿ ಬೋಳೆ ಸಕಿಪ್ರಾ ಶಾಲೆ ಮುಖ್ಯಾಧ್ಯಾಪಕ ಜಗದೀಶ ನಾಯಕ ಮಕ್ಕಳಿಗೆ ಪಠ್ಯದ ಜೊತೆಗೆ ಕೃಷಿ ಪಾಠವನ್ನೂ ಮಾಡುತ್ತಿರುವುದು ಕಂಡುಬಂದಿದೆ.
ಸರ್ಕಾರಿ ಶಾಲೆಯೆಂದರೆ ಒಂದು ರೀತಿಯ ಅಸಡ್ಡೆ ಮನೋಭಾವವಿದೆ. ಆದರೆ ಇಂತಹ ಕೆಲವು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಪರಿಶ್ರಮದಿಂದಾಗಿ ಪರಿಸರ ಪ್ರಜ್ಞೆ ಮೂಡಿಸುವ ಕಾರ್ಯಕ್ರಮ ಶಾಲೆ ಆವರಣದಲ್ಲಿ ಸ್ವತಃ ವಿವಿಧ ಜಾತಿ ತರಕಾರಿ ಬೆಳೆಯುವುದು ಮತ್ತು ಅದನ್ನು ಬಿಸಿಯೂಟಕ್ಕೆ ಬಳಸಿ ರುಚಿಕಟ್ಟಾದ ಅಡುಗೆ ತಯಾರಿಸುವುದು ಕೆಲ ವರ್ಷಗಳಿಂದ ಇಲ್ಲಿ ನಡೆದುಕೊಂಡು ಬಂದಿದೆ.
ಬೆಂಡೆಕಾಯಿ, ಹೀರೆಕಾಯಿ, ಸೋಡಿಗೆ, ಮೊಗ್ಗೆ ಕಾಯಿ, ಸವತೆ ಕಾಯಿ ಸೇರಿದಂತೆ ವಿವಿಧ ಜಾತಿಯ ಗಿಡಗಳನ್ನು ನೆಡಲಾಗಿದೆ. ಪಠ್ಯದ ಜೊತೆಗೆ ಬಿಡುವಿನಲ್ಲಿ ಮಕ್ಕಳಿಗೆ ಮಳೆಗಾಲದಲ್ಲಿ ತರಕಾರಿಗಳನ್ನು ಬೆಳೆಯುವುದು ಮತ್ತು ಅದರ ಪೋಷಣೆಗಳ ಕುರಿತು ಮಾಹಿತಿ ನೀಡಲಾಗುತ್ತಿದೆ.
ಮಕ್ಕಳೇ ಖುಷಿಯಿಂದ ತರಕಾರಿಗಳ ಪೋಷಣೆ ಮಾಡುವುದಕ್ಕೆ ಮುಖ್ಯಾಧ್ಯಾಪಕರ ಕಾಳಜಿಯೇ ಪ್ರೇರಣೆಯಾಗಿದೆ. ಹಿಂದುಳಿದ ದಲಿತ ವಿದ್ಯಾರ್ಥಿಗಳೇ ಅಧಿಕವಾಗಿದ್ದು, ವಿವಿಧ ದಾನಿಗಳನ್ನು ಕರೆಸಿ ಶಾಲಾ ವಿದ್ಯಾರ್ಥಿಗಳಿಗೆ ಉಪಯುಕ್ತ ಉಪಕರಣಗಳನ್ನು ಕೊಡಿಸುವುದು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಕರೆಸಿ ಮಕ್ಕಳಿಗೆ ಜ್ಞಾನಾರ್ಜನೆ ಮಾಡುವುದು ಇಲ್ಲಿ ನಡೆಯುತ್ತದೆ.
ಪ್ರತಿಯೊಂದು ಶಾಲೆಯಲ್ಲಿಯೂ ಇಂತಹ ಚಟುವಟಿಕೆ ನಡೆದರೆ ಖಾಸಗಿ ಶಾಲೆಗಿಂತ ತಾವೇನೂ ಕಡಿಮೆಯಿಲ್ಲ ಎಂದು ತೋರಿಸಲು ಪ್ರೇರಣೆಯಾಗಲಿದೆ. ಮುಖ್ಯಾಧ್ಯಾಪಕರ ಜೊತೆಗೆ ಸಹ ಶಿಕ್ಷಕಿ ಸವಿತಾ ರಮೇಶ ನಾಯ್ಕರ ಸೇವೆ ಕೂಡ ಕಾರಣವಾಗಿದೆ.
ಟಾಪ್ ನ್ಯೂಸ್
![Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು](https://www.udayavani.com/wp-content/uploads/2024/12/vv-4-415x234.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!](https://www.udayavani.com/wp-content/uploads/2024/12/Honnav-150x80.jpg)
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
![ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ](https://www.udayavani.com/wp-content/uploads/2024/12/tree-plante-150x110.jpg)
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
![1-wwewqe](https://www.udayavani.com/wp-content/uploads/2024/12/1-wwewqe-150x100.jpg)
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
![5](https://www.udayavani.com/wp-content/uploads/2024/12/5-30-150x90.jpg)
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
![Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ](https://www.udayavani.com/wp-content/uploads/2024/12/beach-150x101.jpg)
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ಹೊಸ ಸೇರ್ಪಡೆ
![Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು](https://www.udayavani.com/wp-content/uploads/2024/12/vv-4-150x84.jpg)
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
![Gold-saffron](https://www.udayavani.com/wp-content/uploads/2024/12/Gold-saffron-150x90.jpg)
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
![Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು](https://www.udayavani.com/wp-content/uploads/2024/12/ashok-h-150x100.jpg)
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
![United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ](https://www.udayavani.com/wp-content/uploads/2024/12/sri-sri-ravi-shankar-150x87.jpg)
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
![KSA-Nia-Arrest](https://www.udayavani.com/wp-content/uploads/2024/12/KSA-Nia-Arrest-150x90.jpg)
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.