ವಿದ್ಯುತ್ ಪೋಲು ಮಾಡದಿರಿ: ಬಹುರೂಪಿ
ವಿವಿಧೆಡೆ ವಿದ್ಯುತ್ ಸುರಕ್ಷತಾ ಕಾರ್ಯಾಗಾರ•ವಾಲಿರುವ ವಿದ್ಯುತ್ ಕಂಬ-ತಂತಿ ಸರಿಪಡಿಸಿ
Team Udayavani, Aug 1, 2019, 12:50 PM IST
ಅಥಣಿ: ಹೆಸ್ಕಾಂ ಸಭಾ ಭವನದಲ್ಲಿ ನಡೆದ ವಿದ್ಯುತ್ ಸುರಕ್ಷತಾ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು.
ಅಥಣಿ: ಗ್ರಾಹಕರು ವಿದ್ಯುತ್‌ನ್ನು ಮಿತವಾಗಿ ಬಳಕೆ ಮಾಡಬೇಕು ಎಂದು ಹೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತ ಶೇಖರ ಬಹುರೂಪಿ ಸಲಹೆ ನೀಡಿದರು.
ಹೆಸ್ಕಾಂ ಇಲಾಖೆ ಸಭಾಭವನದಲ್ಲಿ ಪಟ್ಟಣದ ವಿದ್ಯುತ್ ಗ್ರಾಹಕರಿಗಾಗಿ ವಿದ್ಯುತ್ ಸುರಕ್ಷತಾ ಹಾಗೂ ಉಳಿತಾಯದ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿ, ಗ್ರಾಮೀಣ ಪ್ರದೇಶದ ತೋಟದ ವಸತಿಗಳಲ್ಲಿ ಸತತವಾಗಿ 24 ಗಂಟೆ ವಿದ್ಯುತ್ ನೀಡಲು ನೂತನವಾಗಿ ನ್ಯೂಮೆರಿಕಲ್ ರಿಲೇ ಪ್ರೊಜೆಕ್ಟ್ ಅಳವಡಿಸಿ ಆ. 1ರಿಂದ ಪ್ರಾರಂಭಿಸಲಾಗುವುದು ಎಂದರು.
ಮುಖ್ಯ ಅತಿಥಿಯಾಗಿ ವಿಜಯಕುಮಾರ ಅಡಹಳ್ಳಿ ಮಾತನಾಡಿ, ಪಟ್ಟಣದ ತೋಟ ಪಟ್ಟಿಗಳಲ್ಲಿ ಹಾಗೂ ಪಟ್ಟಣದ ಕೆಲ ಬಡಾವಣೆಗಳಲ್ಲಿ ವಿದ್ಯುತ್ ತಂತಿ ಹಾಗೂ ಕಂಬಗಳು ಕೆಳಗೆ ವಾಲಿವೆ. ದುರ್ಘಟನೆ ನಡೆಯುವ ಮುನ್ನ ಹೆಸ್ಕಾಂ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಈ ವೇಳೆ ಪುರಸಭೆ ಮಾಜಿ ಅಧ್ಯಕ್ಷ ರಾವಸಾಬ ಐಹೊಳೆ, ಎಸ್.ಓ. ಮಲಕಪ್ಪ ಜಾಲಿಬೆಂಚಿ, ಜಿ.ಟಿ.ನರೆಗಲ್ಲ, ಆರ್.ಎಸ್.ಸ್ವಾಮಿ, ರಮೇಶ ಬಾದವಾಡಗಿ ಬಸನಗೌಡ ಪಾಟೀಲ, ಆರ್.ಎಚ್.ಕಲಾರಿ, ಶಬ್ಬೀರ ಸಾತಬಚ್ಚೆ, ಮಂಜು ಹೋಳಿಕಟ್ಟಿ ಇದ್ದರು. ಶ್ರೀಧರಮೂರ್ತಿ ನಿರೂಪಿಸಿದರು. ಅಶೋಕ ವಾಲಿಕರ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಹೊಸ ಸೇರ್ಪಡೆ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.