ಜಯಸಿಂಗ್ ನಿಸ್ವಾರ್ಥ ಸೇವೆಗೆ ಪ್ರಶಸ್ತಿ ಗರಿ
Team Udayavani, Sep 5, 2019, 11:51 AM IST
ರವೀಂದ್ರ ಮುಕ್ತೇದಾರ
ಔರಾದ: ತಾಲೂಕಿನ ಎಕಲಾರ ಗ್ರಾಮದ ಸರ್ಕಾರಿ ಶಾಲೆ ಶಿಕ್ಷಕ ಜಯಸಿಂಗ್ ಅಂಬುಲಾಲ್ ಠಾಕೂರ ಅವರಿಗೆ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಉತ್ತಮ ಪ್ರಾಥಮಿಕ ಶಾಲೆ ಶಿಕ್ಷಕ ಪ್ರಶಸ್ತಿ ಲಭಿಸಿದೆ.
ಮೂಲತಃ ತಾಲೂಕಿನ ಧೂಪತಮಗಾಂವನ ಜಯಸಿಂಗ್ ಠಾಕೂರ 2000ನೇ ವರ್ಷದಿಂದ ಶಿಕ್ಷಣ ಇಲಾಖೆಯಲ್ಲಿ ಸೇವೆ ಆರಂಭಿಸಿದ್ದಾರೆ.
ಮೊದಲಿಗೆ ತಾಲೂಕಿನ ಮಸ್ಕಲ್ ಶಾಲೆಯಲ್ಲಿ ಏಳು ವರ್ಷ, ಕಮಲನಗರ ತಾಲೂಕು ರಕ್ಷಾಳ ಗ್ರಾಮದಲ್ಲಿ ಆರು ವರ್ಷ, ಔರಾದ ತಾಲೂಕು ಎಕಲಾರ ಗ್ರಾಮದಲ್ಲಿ ಮೂರು ವರ್ಷ ಸೇವೆ ಸಲ್ಲಿಸಿ ಪಾಲಕರು ಹಾಗೂ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ಪಡೆದುಕೊಂಡು ಇದೀಗ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರತಿ ವರ್ಷ ತಮ್ಮ ಗ್ರಾಮದ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ಉತ್ತಮ ಅಂಕ ಪಡೆಯುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ವಿಶೇಷ ಬಹುಮಾನ ನೀಡುವ ಕಾರ್ಯವನ್ನು ಕಳೆದ ನಾಲ್ಕು ವರ್ಷಗಳಿಂದ ಮಾಡುತ್ತಿದ್ದಾರೆ.
ಪ್ರತಿ ನಿತ್ಯ ನಿತ್ಯ ಬೆಳಗ್ಗೆ 8:00ಕ್ಕೆ ಹೋಗಿ ಶಾಲೆ ಆವರಣದಲ್ಲಿ ಸ್ವಚ್ಛತೆ, ಗ್ರಾಮ ಹಾಗೂ ಬಡಾವಣೆಯಲ್ಲಿ ಶೌಚಾಲಯ ನಿರ್ಮಾಣದ ಜಾಗೃತಿ, ಶಾಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ಬೋಧನೆ,ದೇಶದ ಸಂಪ್ರದಾಯ, ಪರಂಪರೆ ಬಗ್ಗೆ ಜಾಗೃತಿ, ಕ್ರೀಡೆ ಸೇರಿದಂತೆ ಪ್ರತಿಯೊಂದು ವಿಷಯದಲ್ಲಿ ಮಕ್ಕಳೊಂದಿಗೆ ಬೆರೆತು ಉತ್ತಮ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಯಸಿಂಗ್ ಅವರ ನಿಸ್ವಾರ್ಥ ಸೇವೆ ಗಮನಿಸಿ 2007ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಕ್ಲಸ್ಟರ್ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅದರಂತೆ ತಾಲೂಕು ಹೋರಾಟ ಸಮಿತಿಯಿಂದ ಭಾಲ್ಕಿ ಶ್ರೀಗಳು ಸನ್ಮಾನ ಮಾಡಿ ಗೌರವಿಸಿದ್ದಾರೆ. ಬೆಂಗಳೂರಿನ ಡಾ| ಅಂಬೇಡ್ಕರ ಭವನದಲ್ಲಿ ಸೆ. 5ರಂದು ನಡೆಯುವ ಸಮಾರಂಭದಲ್ಲಿ ಸಿಎಂ ಮತ್ತು ಶಿಕ್ಷಣ ಸಚಿವರು ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.