ಸಂತಪೂರ ತಾಲೂಕು ಕೇಂದ್ರಕ್ಕೆ ಒತ್ತಾಯ
ತಾಲೂಕು ಕೇಂದ್ರವಾಗಿಸಲು ಜನಪ್ರತಿನಿಧಿಗಳು 2008ರಲ್ಲೇ ಸಲ್ಲಿಸಿದ್ದರು ಸರ್ಕಾರಕ್ಕೆ ನಡುವಳಿ ಪತ್ರ
Team Udayavani, Sep 15, 2019, 11:46 AM IST
ಔರಾದ: ಪಟ್ಟಣದ ಮಿನಿವಿಧಾನ ಸೌಧ.
•ರವೀಂದ್ರ ಮುಕ್ತೇದಾರ
ಔರಾದ: ಔರಾದ ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಮಾಡುವುದಕ್ಕಿಂತ ಸರ್ಕಾರ ಸಂತಪೂರ ಪಟ್ಟಣವನ್ನು ತಾಲೂಕು ಕೇಂದ್ರವಾಗಿಸಬೇಕು ಎಂದು ಜನಪ್ರತಿನಿಧಿಗಳು ಈ ಹಿಂದೆಯೇ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಚುನಾವಣೆ ಸಮಯದಲ್ಲಿ ಔರಾದ ತಾಲೂಕಿನಿಂದ ಗೆಲುವು ಸಾಧಿಸಿ ತಾಲೂಕಿನ ಅಭಿವೃದ್ಧಿಯೇ ನಮ್ಮ ಮೂಲ ಮಂತ್ರವಾಗಿದೆ ಎಂದು ಜನರಿಗೆ ಹೇಳಿ, ಸಂತಪೂರ ತಾಲೂಕು ರಚನೆ ಮಾಡುವಂತೆ 2008ರಲ್ಲಿಯೇ ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯತದಲ್ಲಿ ಸಭೆ ನಡೆಸಿ ಸರ್ಕಾರಕ್ಕೆ ನಡುವಳಿ ಪತ್ರ ಸಹ ಸಲ್ಲಿಸಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಔರಾದ ತಾಲೂಕಿನ ಮೀಸಲು ಕ್ಷೇತ್ರದ ಮೊದಲ ಶಾಸಕ ಹಾಗೂ ಹಾಲಿ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ 22-9-2008ರಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ. ಅದರಂತೆ ಅಂದಿನ ಆರು ಜಿಪಂ ಸದಸ್ಯರ ಪೈಕಿ ಐದು ಜಿಪಂ ಸದಸ್ಯರು ಕೂಡ ಪತ್ರ ನೀಡಿದ್ದಾರೆ. ರಾಜಶೇಖರ ನಾಗಮೂರ್ತಿ ವಡಗಾಂವ ಜಿಪಂ ಸದಸ್ಯೆ, ಮೀನಾಕ್ಷಿ ಸಂಗ್ರಾಮ ಠಾಣಾಕುಶನೂರ ಜಿಪಂ ಸದಸ್ಯೆ, ನಂದಿನಿ ಚಂದ್ರಶೇಖರ್ (ಚಿಂತಾಕಿ) ಜಿಪಂ ಕ್ಷೇತ್ರ, ರಮೇಶ ದೇವತೆ ಸಂತಪೂರ ಜಿಪಂ ಕ್ಷೇತ್ರದ ಸದಸ್ಯರು ಹಾಗೂ ಒಬ್ಬರು ತಾಪಂ ಸದಸ್ಯರು ಕೂಡ ಪತ್ರ ನೀಡಿದ್ದಾರೆ. ಅಂದಿನ ತಾಲೂಕು ಪಂಚಾಯತ ಅಧ್ಯಕ್ಷೆ ಶೀಲಾವತಿ ಶಿವಶರಣರಪ್ಪ ವಲ್ಲೆಪೂರೆ ಅವರು 17-9-2008ರಲ್ಲಿ ಪತ್ರ ನೀಡಿದ್ದಾರೆ. ನೀಲಮ್ಮ ಶಿವರುದ್ರಪ್ಪ ತಾಪಂ ಸದಸ್ಯೆ, ಪಾಂಡುರಂಗ ಶರಣಪ್ಪ, ಶರಣಪ್ಪ ಭೀಮರಾವ್, ಕಲ್ಲಪ್ಪ ಹುಲ್ಲೆಪ್ಪ, ರಾಮಪ್ಪ ಕಲ್ಲಪ್ಪ, ಸಂಜೀವ ವೆಂಕಟರಾವ್, ವಿಜಯಕುಮಾರ ಬಾಬಣೆ ಹಾಗೂ ತಾಲೂಕಿನ 38 ಗ್ರಾಪಂಗಳ ಪೈಕಿ ನಾಗಮಾರಪಳ್ಳಿ, ಸಂತಪೂರ,ಧೂಪತಮಗಾಂವ, ಚಿಂತಾಕಿ, ಹೆಡ್ಗಾಪೂರ, ನಾಗಮಾರಪಳ್ಳಿ, ಶೆಂಬೆಳ್ಳಿ, ಚಿಕಲಿ, ಜೋಜನಾ, ಖೇಡ್, ಬಳತ್, ಲಾಧಾ, ತೋರಣಾ ಸೇರಿದಂತೆ ಒಟ್ಟು 12 ಗ್ರಾಪಂ ಸದಸ್ಯರು, ಆಡಳಿತ ಮಂಡಳಿ ಸದಸ್ಯರು ಪಂಚಾಯತದಲ್ಲಿ ಸಭೆ ನಡೆಸಿ ಸರ್ವ ಸದಸ್ಯರ ಒಪ್ಪಂದದ ಪತ್ರವನ್ನು ಕೂಡ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಿದ್ದಾರೆ
ನಿಲ್ಲದ ಶೀತಲ ಸಮರ: ಔರಾದ ತಾಲೂಕು ಕೇಂದ್ರವಾಗಿದೆ ಎಂದು ತಾಲೂಕಿನ ನಿವಾಸಿಗಳು ಖುಷಿಯಲ್ಲಿದ್ದರೆ ಸಂತಪೂರ ತಾಲೂಕು ಹೋರಾಟ ಸಮಿತಿ ಸದಸ್ಯರು ನಮ್ಮ ತಾಲೂಕನ್ನು ನಾವು ಪಡೆದುಕೊಳ್ಳುತ್ತೇವೆ ಎಂದು ಹೋರಾಟವನ್ನು ನಿರಂತರವಾಗಿ ಮಾಡುತ್ತಲೇ ಇದ್ದಾರೆ.
ಜನರಿಗೆ ತಪ್ಪದ ಸಮಸ್ಯೆ: ತಂದೆ-ತಾಯಿ ಜಗಳದಲ್ಲಿ ಕೂಸು ಬಡುವಾಯ್ತು ಎನ್ನುವಂತೆ ಸಂತಪೂರ ಹಾಗೂ ಔರಾದ ತಾಲೂಕು ಕೇಂದ್ರ ರಚನೆಗಾಗಿ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಔರಾದ ತಾಲೂಕು ಕೇಂದ್ರವಾದರೂ ಕೆಲ ಇಲಾಖೆಯ ಸೌಕರ್ಯ ಪಡೆದುಕೊಳ್ಳಲು ಜಿಲ್ಲಾ ಕೇಂದ್ರಕ್ಕೆ ಹೋಗುವಂತಹ ಅನಿವಾರ್ಯತೆ ಇದೆ.
ಸರ್ಕಾರ ನೀರಾವರಿ ಇಲಾಖೆಯ ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿ ಅನುದಾನವನ್ನು ಪ್ರತಿವರ್ಷ ಇಲಾಖೆಗೆ ನೀಡುತ್ತಿದೆ. ಜನರಿಗೆ ಜಿಲ್ಲಾ ಕೇಂದ್ರದಲ್ಲಿರುವ ಕಚೇರಿಯ ಬಗ್ಗೆ ಇಂದಿಗೂ ಮಾಹಿತಿ ಇಲ್ಲ. ಅಂದ ಮೇಲೆ ಅವರು ಇಲಾಖೆಯ ಯೋಜನೆಗಳ ಲಾಭ ಪಡೆದುಕೊಳ್ಳುವುದು ಯಾವಾಗ ಎನುವ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡುತ್ತಿವೆ.
ಔರಾದ ತಾಲೂಕು ಕೇಂದ್ರವಾಗಿಸಿ ಸರ್ಕಾರ ಆದೇಶ ಮಾಡಿದೆ. ಯಾವುದೇ ಕಾರಣಕ್ಕೂ ತಾಲೂಕು ಬದಲಾಗುವುದಿಲ್ಲ. ಎರಡೂ ಸಮಿತಿ ಸದಸ್ಯರು ಒಂದು ಕಡೆ ಕುಳಿತುಕೊಂಡು ಜಿಲ್ಲಾ ಕೇಂದ್ರದಲ್ಲಿರುವ ತಾಲೂಕು ಮಟ್ಟದ ಕಚೇರಿಗಳನ್ನು ತಾಲೂಕಿಗೆ ತರಲು ಮುಂದಾಗಬೇಕು ಎನ್ನುವುದು ಕಾನೂನು ತಜ್ಞರ ಮಾತು.
ಸಂತಪೂರ, ಔರಾದ ತಾಲೂಕು ಹೋರಾಟ ಸಮಿತಿ ಸದಸ್ಯರಿಗೆ ಮಾನವೀಯತೆ ಇದ್ದರೆ ಇಬ್ಬರೂ ಒಂದಾಗಿ ಮೊದಲು ಜಿಲ್ಲಾ ಕೇಂದ್ರದಲ್ಲ್ಲಿರುವ ಕಚೇರಿಗಳನ್ನು ತಾಲೂಕಿಗೆ ತರುವ ಬಗ್ಗೆ ಪ್ರಯತ್ನ ಮಾಡಲಿ. ಆ ಮೂಲಕ ತಾಲೂಕಿನ ಜನರು ಕಚೇರಿಗಾಗಿ ಜಿಲ್ಲಾ ಕೇಂದ್ರಕ್ಕೆ ಅಲೆಯುವುದನ್ನು ತಪ್ಪಿಸಲಿ.
• ಹಾವಪ್ಪ ದ್ಯಾಡೆ, ಯುವ ಹೋರಾಟಗಾರ
ಎರಡೂ ತಾಲೂಕು ಹೋರಾಟ ಸಮಿತಿಯ ಸದಸ್ಯರು ತಮ್ಮ ಹೋರಾಟವನ್ನು ನಂತರ ಇಟ್ಟಿಕೊಳ್ಳಲಿ. ಮೊದಲು ಜಿಲ್ಲಾ ಕೇಂದ್ರದಲ್ಲಿರುವ ಕಚೇರಿಗಳನ್ನು ತಾಲೂಕಿಗೆ ತರುವ ಪ್ರಯತ್ನ ಮಾಡಲಿ. ಅವರೊಂದಿಗೆ ನಾವು ಸಹಕಾರ ನೀಡುತ್ತವೆ.
• ಅಮರ ಔರಾದೆ, ಸ್ಥಳೀಯ ನಿವಾಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ullal: ಬಾವಿ, ಬೋರ್‌ವೆಲ್‌ನಲ್ಲಿ ತೈಲಮಿಶ್ರಿತ ನೀರು; ಸಮಸ್ಯೆ ಇರುವ ಮನೆಗಳಿಗೆ ಪೈಪ್‌ಲೈನ್
Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್
Sagara: ಮಿಡಿ ಮಾವು, ವಿಶ್ವವಿದ್ಯಾಲಯದ ನಡೆದಾಡುವ ವಿಶ್ವಕೋಶ ಬಿ.ವಿ.ಸುಬ್ಬರಾವ್ ಇನ್ನಿಲ್ಲ
Perla: ರಸ್ತೆ ವಿಸ್ತರಣೆ, ನೇತ್ರಾವತಿ ನದಿ ತಡೆಗೋಡೆ ದುರಸ್ತಿಗೆ ಆಗ್ರಹ
Aranthodu: ಪ್ರಯಾಣಿಕ ತಂಗುದಾಣದ ದಾರಿ ಮಾಯ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Ullal: ಬಾವಿ, ಬೋರ್‌ವೆಲ್‌ನಲ್ಲಿ ತೈಲಮಿಶ್ರಿತ ನೀರು; ಸಮಸ್ಯೆ ಇರುವ ಮನೆಗಳಿಗೆ ಪೈಪ್‌ಲೈನ್
Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್
Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!
Sagara: ಮಿಡಿ ಮಾವು, ವಿಶ್ವವಿದ್ಯಾಲಯದ ನಡೆದಾಡುವ ವಿಶ್ವಕೋಶ ಬಿ.ವಿ.ಸುಬ್ಬರಾವ್ ಇನ್ನಿಲ್ಲ
Perla: ರಸ್ತೆ ವಿಸ್ತರಣೆ, ನೇತ್ರಾವತಿ ನದಿ ತಡೆಗೋಡೆ ದುರಸ್ತಿಗೆ ಆಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.