ಜಾನಪದದಲ್ಲಿದೆ ಸಂಸ್ಕೃತಿಯ ಸೊಗಡು
ಯುವ ಜನಾಂಗಕ್ಕೆ ಬೇಕು ಜಾನಪದ ಅರಿವು•ಕಲೆ-ಸಾಹಿತ್ಯ ರಕ್ಷಣೆಗೆ ಪರಿಷತ್ ಶ್ರಮ ನಿರಂತರ
Team Udayavani, Aug 23, 2019, 1:20 PM IST
ಔರಾದ: ಠಾಣಾಕುಶನೂರ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮವನ್ನು ನಾಡ ತಹಶೀಲ್ದಾರ್ ತಮಟೆ ಬಾರಿಸುವ ಮೂಲಕ ಉದ್ಘಾಟಿಸಿದರು.
ಔರಾದ: ಯುವ ಜನಾಂಗಕ್ಕೆ ಜಾನಪದ ಸಾಹಿತ್ಯದ ಬಗ್ಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ. ಜಾನಪದ ಉಳಿದರೆ ದೇಶದಲ್ಲಿ ಸಾಹಿತ್ಯ ಸಂಸ್ಕೃತಿ ಉಳಿಯುತ್ತದೆ ಎಂದು ನಾಡ ತಹಶೀಲ್ದಾರ್ ಧನರಾಜ ಮಲಗೆ ಹೇಳಿದರು.
ಠಾಣಾಕುಶನೂರ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕ ಮತ್ತು ಪ್ರಸನ್ನ ಕಲೆ ಮತ್ತು ಸಾಂಸ್ಕೃತಿ ಟ್ರಸ್ಟ್ ಸಂತಪೂರ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಾನಪದದಲ್ಲಿ ದೇಶದ ಸಂಸ್ಕೃತಿ ಪರಂಪರೆ ಮತ್ತು ಗ್ರಾಮೀಣ ಸಂಸ್ಕೃತಿಯ ಸೊಗಡು ಇದೆ. ಗಡಿ ತಾಲೂಕಿನಲ್ಲಿ ಜಾನಪದ ಕಲೆ ಹಾಗೂ ಸಾಹಿತ್ಯ ರಕ್ಷಣೆಗೆ ಕನ್ನಡ ಜಾನಪದ ಪರಿಷತ್ ನಿರಂತರ ಶ್ರಮಿಸುವುದರ ಜೊತೆಗೆ ನೂತನ ಕಲಾವಿದರನ್ನು ಹುಟ್ಟುಹಾಕುತ್ತಿದೆ ಎಂದರು.
ಗಡಿ ತಾಲೂಕಿನಲ್ಲಿ ಜಾನಪದ ಘಟಕ ನೂತನ ಕಲಾವಿದರನ್ನು ಆಯ್ಕೆ ಮಾಡುವುದರ ಜೊತೆಗೆ ಹಿರಿಯ ಕಲಾವಿದರನ್ನು ರಾಜ್ಯ-ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಕಲಾ ಪ್ರದರ್ಶಕ್ಕೆ ಅವಕಾಶ ಮಾಡಿಕೊಟ್ಟಿರುವುದು ನೂತನ ಕಲಾವಿದರಿಗೆ ಪ್ರೇರಣೆಯಾಗಿದೆ ಎಂದರು. ಗಡಿ ತಾಲೂಕಿನಲ್ಲಿ ಜಾನಪದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಆಗ ಮಾತ್ರ ಯುವ ಕಲಾವಿದರು ಜಾನಪದ ಕಲೆಯನ್ನು ಅನುಕರಣೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಉಪನ್ಯಾಸಕ ಹಾವಗೀರಾವ್ ಕಳಸೆ ಮಾತನಾಡಿ, ಜಾನಪದ ಕಲೆಯಲ್ಲಿ ಅದ್ಭುತ ಶಕ್ತಿ ಅಡಗಿದೆ. ಅದನ್ನು ಯುವ ಸಮೂಹಕ್ಕೆ ಪರಿಚಯಿಸಿ, ಅನುಕರಣೆ ಮಾಡಿಕೊಂಡು ಬಂದಾಗ ಮಾತ್ರ ಸುಂದರ ಬದುಕು ಹಾಗೂ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದ ಹೇಳಿದರು. ಶಾಲೆ-ಕಾಲೇಜಿನ ವಿದ್ಯಾರ್ಥಿಗಳು ಜಾನಪದ ಕಲೆ, ಜಾನಪದ ಪರಂಪರೆ ಅರಿತರೆ ಶಾಂತಿ ನೆಮ್ಮದಿಯ ಜೀವನದೊಂದಿಗೆ ಉತ್ತಮ ವ್ಯಕ್ತಿಯಾಗಿ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದರು.
ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಸಂಜುಕುಮಾರ ಜುಮ್ಮಾ ಮಾತನಾಡಿ, ವಿಶ್ವದಾದ್ಯಂತ ಜಾನಪದ ದಿವನ್ನು ಸರ್ಕಾರ ಆಚರಣೆ ಮಾಡುವ ಮೂಲಕ ನಮ್ಮ ಕಲಾವಿದರಿಗೆ ಪ್ರೇರಣೆ ನೀಡುತ್ತಿದೆ. ನಮ್ಮ ತಾಲೂಕು ಸರ್ಕಾರಿ ಕಚೇರಿಯಲ್ಲಿನ ಕಡತಗಳಲ್ಲಿ ಹಿಂದೆ ಉಳಿದಿದೆ. ಆದರೆ ವಿದ್ಯಾಭ್ಯಾಸ ಹಾಗೂ ಕಲೆ, ಕಲಾವಿದರ ರಚನೆಯಲ್ಲಿ ಹಿಂದೆ ಉಳಿದಿಲ್ಲ ಎಂದು ಹೇಳಿದರು.
ಔರಾದ ಹಾಗೂ ಕಮಲನಗರ ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ಕೂಡ ಉತ್ತಮ ಕಲಾವಿದರು ಇದ್ದಾರೆ. ಅಂಥವರನ್ನು ಗುರುತಿಸಿ ಸರ್ಕಾರದಿಂದ ಸಿಗುವ ಸೌಕರ್ಯ ಒದಗಿದಬೇಕು. ಹಾಗೂ ಅವರ ಕಲೆಯನ್ನು ವೇದಿಕೆಯಲ್ಲಿ ಪ್ರದರ್ಶನ ಮಾಡಲು ಸೂಕ್ತ ಸ್ಥಳದ ವ್ಯವಸ್ಥೆಯನ್ನು ತಾಲೂಕು ಜಾನಪದ ಪರಿಷತ್ ಮಾಡುತ್ತದೆ ಎಂದರು. ಇದೇ ವೇಳೆ ಕಮಲನಗರ ಹಾಗೂ ಔರಾದ ತಾಲೂಕಿನ ಉತ್ತಮ ಕಲಾವಿದರನ್ನು ಗುರುತಿಸಿ ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
MUST WATCH
ಹೊಸ ಸೇರ್ಪಡೆ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.