ಯುಕೆಪಿಗೆ ಈಗಲಾದರೂ ಸಿಗುತ್ತಾ ವೇಗ!
ನೀರಾವರಿಗೆ ಹೆಚ್ಚು ಒತ್ತು ಕೊಡಬೇಕಿದೆ ಬಿಎಸ್‌ವೈ•ನೀರಾವರಿ ಹೋರಾಟಗಾರರು, ರೈತರ ಕಾತರ
Team Udayavani, Jul 31, 2019, 10:53 AM IST
ಆಲಮಟ್ಟಿ ಜಲಾಶಯ
ಶ್ರೀಶೈಲ ಬಿರಾದಾರ
ಬಾಗಲಕೋಟೆ: ಮೈತ್ರಿ ಸರ್ಕಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದ್ದ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತಕ್ಕೆ ಬಿಜೆಪಿ ಸರ್ಕಾರದಲ್ಲಾದರೂ ವೇಗ ಸಿಗುತ್ತದೆಯಾ ಎಂದು ಈ ಭಾಗದ ರೈತರು, ನೀರಾವರಿ ಹೋರಾಟಗಾರರು ಕಾತರರಾಗಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ನೀರಾವರಿ ಯೋಜನೆ ಕಾಲುವೆ ನಿರ್ಮಾಣದಲ್ಲಿ ಒಂದಷ್ಟು ವೇಗ ಕಂಡಿದ್ದ ಈ ಯೋಜನೆ, ಭೂ ಸ್ವಾಧೀನ ವಿಷಯದಲ್ಲಿ ಭಾರಿ ಹಿನ್ನಡೆ ಅನುಭವಿಸಿತ್ತು. ಅದಕ್ಕೆ ಹೊಸ ಭೂ ಸ್ವಾಧೀನ ಕಾಯ್ದೆ ಸಹಿತ ಹಲವು ಕಾರಣಗಳನ್ನು ನೀಡಲಾಗಿತ್ತು. ಸರ್ಕಾರದ ವಿಳಂಬ ನೀತಿಯಿಂದ 3ನೇ ಹಂತದಲ್ಲಿ ಸ್ವಾಧೀನಗೊಳ್ಳಲಿದ್ದ ಭೂಮಿ ವಶಪಡಿಸಿಕೊಳ್ಳಲು ನಡೆಸಿದ ಪ್ರಕ್ರಿಯೆಗಳ ಅಧಿಸೂಚನೆಗಳು ರದ್ದುಗೊಂಡವು. ಹೀಗಾಗಿ ರದ್ದುಗೊಂಡ ಅಧಿಸೂಚನೆಗಳನ್ನು ಪುನಃ ಆರಂಭಿಸಿ, ಸ್ವಾಧೀನ, ಕಾಲುವೆ ನಿರ್ಮಾಣ, ಪುನರ್‌ವಸತಿ, ಪುನರ್ ನಿರ್ಮಾಣ ಕಾರ್ಯಕ್ಕೆ ವೇಗ ನೀಡಬೇಕಿದೆ.
ನೀರು ಕೊಟ್ಟು 9 ವರ್ಷ: ಕೃಷ್ಣಾ ನ್ಯಾಯಾಧಿಕರಣ ಎ ಸ್ಕೀಂ ನಡಿ 173 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದ್ದು, 519.60 ಮೀಟರ್‌ವರೆಗೆ ಆಲಮಟ್ಟಿ ಜಲಾಶಯದಲ್ಲಿ ನೀರು ಸಂಗ್ರಹಿಸಿ, ಬಳಸಲು ಅನುಮತಿ ಕೊಟ್ಟಿತ್ತು. ಆ ನೀರಿನಲ್ಲೇ ಈವರೆಗೆ ಕರ್ನಾಟಕ ಕೇವಲ 119 ಟಿಎಂಸಿ ಮಾತ್ರ ಸದ್ಭಳಕೆ ಮಾಡಿಕೊಂಡಿದೆ ಎಂಬ ಮಾತಿದೆ. ಅಲ್ಲದೇ ಕಳೆದ 2010ರ ಡಿಸೆಂಬರ್ 30ರಂದು ನ್ಯಾಯಾಧಿಕರಣದ ಅಂತಿಮ ತೀರ್ಪು ಬಂದಿದ್ದು, ರಾಜ್ಯಕ್ಕೆ 177 ಟಿಎಂಸಿ ನೀರು ಹಂಚಿಕೆ ಮಾಡಿ, ಆಲಮಟ್ಟಿ ಜಲಾಶಯವನ್ನು 524.256 ಮೀಟರ್‌ಗೆ ಎತ್ತರಿಸಲು ಅನುಮತಿ ಕೊಟ್ಟಿದೆ. 177 ಟಿಎಂಸಿ ಅಡಿ ನೀರು ಕೊಟ್ಟು, 9 ವರ್ಷವಾದರೂ ಈ ವರೆಗೆ ನೀರು ಬಳಕೆ ಮಾಡಿಕೊಂಡಿಲ್ಲ. (2010ರಿಂದ 50 ವರ್ಷದೊಳಗೆ ಸಂಪೂರ್ಣ ನೀರು ಬಳಸಿಕೊಳ್ಳಲು ನ್ಯಾಯಾಧಿಕರಣ ಸೂಚನೆ ಕೂಡ ಕೊಟ್ಟಿದೆ) ಬೇಸಿಗೆಯಲ್ಲಿ ಕೊಯ್ನಾದಿಂದ ನೀರು ಬಿಡಿ ಎಂದು ಮಹಾರಾಷ್ಟ್ರದತ್ತ ಬೇಡಿಕೆ ಇಡುವುದು ತಪ್ಪಿಲ್ಲ.
ಯೋಜನಾ ವೆಚ್ಚ ಮೂರು ಪಟ್ಟು ಹೆಚ್ಚಳ: ಇಡೀ ರಾಜ್ಯದಲ್ಲೇ ಅತಿ ದೊಡ್ಡ ನೀರಾವರಿ ಯೋಜನೆ ಎಂಬ ಹೆಸರು ಯುಕೆಪಿಗಿದೆ. 3ನೇ ಹಂತದಲ್ಲಿ 1,23,640 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕು. 94,640 ಎಕರೆ ಹಿನ್ನೀರಿನಲ್ಲಿ ಮುಳುಗಡೆಯಾದರೆ, 4,315 ಎಕರೆ ಪುನರ್ ವಸತಿ ಕೇಂದ್ರಗಳ ನಿರ್ಮಾಣಕ್ಕಾಗಿ ಅಗತ್ಯವಿದೆ. ಕಾಲುವೆ ನಿರ್ಮಾಣಕ್ಕಾಗಿ 24,685 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕು. ಹೀಗೆ 12 ಗ್ರಾಮಗಳು ಪೂರ್ಣ, 10 ಗ್ರಾಮಗಳು ಭಾಗಶಃ ಮುಳುಗಡೆಯಾಗುವ ಜತೆಗೆ 1,23,640 ಎಕರೆ ಭೂಮಿ, ಆಲಮಟ್ಟಿ ಜಲಾಶಯ 524.256 ಮೀಟರ್‌ಗೆ ಎತ್ತರಿಸಿದಾಗ ಕಳೆದುಕೊಳ್ಳಬೇಕಾಗುತ್ತದೆ. ಈ 3ನೇ ಹಂತದ ಯೋಜನೆಗೆ 2012ರ ಜನವರಿ 24ರಂದು 17,206.39 ಕೋಟಿ ಮೊತ್ತದ ಸಮಗ್ರ ಯೋಜನಾ ವರದಿಗೆ ಅಂದಿನ ಬಿಜೆಪಿ ಸರ್ಕಾರ ಒಪ್ಪಿಗೆ ನೀಡಿತ್ತು. ಆದರೀಗ ಈ ಯೋಜನಾ ವೆಚ್ಚದ ಮೂರು ಪಟ್ಟು ಹೆಚ್ಚಳವಾಗಿದೆ. ಭೂಸ್ವಾಧೀನಕ್ಕಾಗಿಯೇ 50 ಸಾವಿರ ಕೋಟಿ ಅನುದಾನ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.