ಸರ್ಕಾರಿ ನೌಕರರಿಗೂ ಇನ್ನು ಕ್ಯಾಂಟೀನ್‌!

ರಿಯಾಯಿತಿ ದರದಲ್ಲಿ-ಸಾಲದ ರೂಪದಲ್ಲಿ ದೊರೆಯಲಿವೆ ವಿವಿಧ ತರಹ ವಸ್ತುಗಳು

Team Udayavani, Dec 11, 2019, 1:25 PM IST

Udayavani Kannada Newspaper

„ವಿಶೇಷ ವರದಿ
ಬಾಗಲಕೋಟೆ: ಸೈನಿಕರು, ಮಾಜಿ ಸೈನಿಕರು ಹಾಗೂ ಪೊಲೀಸರಿಗಾಗಿ ಇಲಾಖೆಯಿಂದ ನಡೆಸುತ್ತಿರುವ ಕ್ಯಾಂಟಿನ್‌ ಮಾದರಿಯಲ್ಲೇ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳಿಗಾಗಿ ಕೇಂದ್ರ ಸರ್ಕಾರದಿಂದ ಪರವಾನಗಿ ಪಡೆದ “ಸಾಯಿ ಇಂಟರ್‌ ನ್ಯಾಶನಲ್‌’ ಖಾಸಗಿ ಸಂಸ್ಥೆಯೊಂದು ನಗರದಲ್ಲಿ ಕ್ಯಾಂಟಿನ್‌ ತೆರೆಯುತ್ತಿದೆ.

ಸರ್ಕಾರಿ ನೌಕರರಿಗಾಗಿಯೇ ಕ್ಯಾಂಟಿನ್‌ ಆರಂಭಿಸಬೇಕೆಂಬುದು ಹಲವು ದಿನಗಳ ಬೇಡಿಕೆಯಾಗಿತ್ತು. ಆದರೆ, ಅದರ ನಿರ್ವಹಣೆ ಸಹಿತ ವಿವಿಧ ಕಾರಣಗಳಿಂದ ನನೆಗುದಿಗೆ ಬಿದ್ದಿತ್ತು. ಆದರೀಗ ಮತ್ತೆ ಈ ಕ್ಯಾಂಟಿನ್‌ ಆರಂಭಗೊಳ್ಳಲಿದೆ.

ರಿಯಾಯಿತಿ ದರ: ಸರ್ಕಾರಿ ನೌಕರರು, ಸಿಬ್ಬಂದಿ, ಅಧಿಕಾರಿಗಳು ತಮ್ಮ ಮನೆಗಳಿಗೆ ನಿತ್ಯ ಬೇಕಾಗುವ ಕಿರಾಣಿ ಸಾಮಗ್ರಿ, ಗೃಹಬಳಕೆಯ ಹಲವು ವಸ್ತುಗಳನ್ನು ರಿಯಾಯಿತಿ ದರದಲ್ಲಿ ಪಡೆಯಲು ಈ ಕ್ಯಾಂಟಿನ್‌ ವ್ಯವಸ್ಥೆ ಸಹಕಾರಿಯಾಗಲಿದೆ. ಸಾಮಾನ್ಯ ಅಂಗಡಿಗಳಲ್ಲಿ ದೊರೆಯುವ ವಸ್ತುಗಳ ಬೆಲೆಗಿಂತಲೂ ರಿಯಾಯಿತಿ ದರ ಹಾಗೂ ಸಾಲದ ರೂಪದಲ್ಲಿ ವಸ್ತುಗಳು ದೊರೆಯುತ್ತದೆ.

ಸರ್ಕಾರಿ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಕೆಲವೊಮ್ಮೆ ನಾಲ್ಕೈದು ತಿಂಗಳ ಕಾಲ ವೇತನ ಆಗದಿದ್ದರೂ ಕಿರಾಣಿ ಸಾಮಗ್ರಿ ಸಹಿತ, ಗೃಹ ಬಳಕೆಯ ವಸ್ತುಗಳನ್ನು ಉದ್ರಿ (ಸಾಲದ ರೂಪದಲ್ಲಿ ) ಖರೀದಿಸಬಹುದು. ನಾಲ್ಕೈದು ತಿಂಗಳ ಕಾಲ ಆ ಹಣ ಮರಳಿಸದಿದ್ದರೆ ಅಂಗಡಿಕಾರರಿಂದ ಸ್ವಲ್ಪ ಮುಜುಗರ ಅನುಭವಿಸುವ ಪ್ರಸಂಗ ಹೆಚ್ಚಿರುತ್ತವೆ. ಆದರೆ, ಈ ಕ್ಯಾಂಟಿನ್‌ಲ್ಲಿ ಸದಸ್ಯತ್ವ ಪಡೆದ ಸರ್ಕಾರಿ ನೌಕರರು ಸಾಲದ ರೂಪದಲ್ಲಿ ಪಡೆದ ವಸ್ತುಗಳಿಗೆ ವೇತನ ಆದ ಬಳಿಕ ಆ ಹಣವನ್ನು ಒಂದೇ ಕಂತಿನಲ್ಲಿ ಪಾವತಿಸಲು ಅವಕಾಶವಿದೆ.

ಸರ್ಕಾರಿ-ಅರೆ ಸರ್ಕಾರಿ ನೌಕರರಿಗೆ: ನವನಗರದ ಹೊಸ ಬಸ್‌ ನಿಲ್ದಾಣದೆದುರಿಗೆ ಇರುವ ಸರ್ಕಾರಿ ನೌಕರರ ವಾಣಿಜ್ಯ ಸಂಕೀರ್ಣದ ಮೊದಲ ಮಹಡಿಯಲ್ಲಿ ಈ ಕ್ಯಾಂಟಿನ್‌ ಆರಂಭಗೊಳ್ಳುತ್ತಿದ್ದು, ಇದು ಸಂಪೂರ್ಣ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರು, ಅಧಿಕಾರಿ-ಸಿಬ್ಬಂದಿಗೆ ಮಾತ್ರ ಸೀಮಿತವಾಗಿದೆ. ಖಾಸಗಿ ವ್ಯಕ್ತಿಗಳು ಹಾಗೂ ಸಾಮಾನ್ಯ ಜನರಿಗೆ ಇಲ್ಲಿ ಅವಕಾಶವಿಲ್ಲ. ಸರ್ಕಾರದ ಯಾವುದೇ ಇಲಾಖೆಯಡಿ ಈ ಕ್ಯಾಂಟಿನ್‌ ನಡೆಯಲ್ಲ. ಸಂಪೂರ್ಣ ಖಾಸಗಿಯಾಗಿ ನಡೆಯಲಿದೆ.

ಸದಸ್ಯತ್ವ ಇದ್ದವರಿಗೆ ಮಾತ್ರ: ಇಲ್ಲಿ ಸದಸ್ಯತ್ವ ಪಡೆಯಲು ಇಲಾಖೆಯ ಗುರುತಿನ ಚೀಟಿ, ಆಧಾರ್‌ ಕಾರ್ಡ್‌, 2 ಪಾಸ್‌ಪೋರ್ಟ್‌ ಸೈಜ್‌ ಫೋಟೋ, ಪ್ರಸ್ತುತ ವೇತನ ಪತ್ರ ನೀಡುವುದು ಕಡ್ಡಾಯವಾಗಿದೆ. ಈ ದಾಖಲೆ ನೀಡಿ ಕ್ಯಾಂಟಿನ್‌ನಲ್ಲಿ ಸದಸ್ಯತ್ವ ಪಡೆಯಬೇಕು. ಅದಕ್ಕೆ ಕ್ಯಾಂಟಿನ್‌ನಿಂದ್‌ ಗುರುತಿನ ಚೀಟಿ ನೀಡಲಿದ್ದು, ಆ ಗುರುತಿನ ಚೀಟಿ ತೋರಿಸಿ ಪ್ರತಿ ತಿಂಗಳು ಗೃಹ ಬಳಕೆ ಹಾಗೂ ದಿನಸಿ ವಸ್ತುಗಳನ್ನು ಖರೀದಿಸಬಹುದು. ಪೊಲೀಸ್‌ ಕ್ಯಾಂಟಿನ್‌ ಹಾಗೂ ಸೈನಿಕರ ಕ್ಯಾಂಟಿನ್‌ನಲ್ಲಿ ಆಯಾ ಇಲಾಖೆ ನೌಕರರಿಗೆ ಸೀಮಿತಗೊಳಿಸಿದಂತೆ ಇಲ್ಲೂ ಸರ್ಕಾರಿ ನೌಕರ-ಸಿಬ್ಬಂದಿಗೆ ಮಾತ್ರ ಸೀಮಿತಗೊಳಿಸಲಾಗಿದೆ.

ಕ್ಯಾಂಟಿನ್‌ನಲ್ಲಿ ಏನು ದೊರೆಯಲಿವೆ: ದೆಹಲಿ ಮೂಲದ ಸಾಯಿ ಇಂಟರ್‌ನ್ಯಾಶನಲ್‌ನಿಂದ ಸರ್ಕಾರಿ ನೌಕರರ ಕ್ಯಾಂಟಿನ್‌ ಆರಂಭಗೊಳ್ಳಲಿದ್ದು, ಈ ಕ್ಯಾಂಟಿನ್‌ ಜತೆಗೆ ಸ್ಯಾಮಸಂಗ್‌, ಎಲ್‌ಜಿ, ಐಎಫ್‌ಬಿ, ಬೋಸ್ಕ್, ವಿವೋ, ಐಟಿಸಿ, ಎಸ್‌ ಸುಜಕಿ ಹೀಗೆ ಹಲವು ಬ್ರಾಂಡ್‌ ಗಳ ಮೊಬೈಲ್‌, ಟಿವಿ, ರೆಫ್ರಿಜಿರೇಟರ್‌, ವಾಷಿಂಗ್‌ ಮಷಿನ್‌, ವಾಟರ್‌ ಪ್ಯುರಿಪೈಯರ್‌, ದಿನ ಬಳಕೆ ವಸ್ತುಗಳು, ಎಫ್‌.ಎಂ.ಸಿ.ಜಿ ವಸ್ತುಗಳು ರಿಯಾಯಿತಿ ದರದಲ್ಲಿ ದೊರೆಯುತ್ತವೆ. ಜತೆಗೆ ಹಣಕಾಸು ತೊಂದರೆ ನೀಗಿಸಿಕೊಳ್ಳಲು ಕಂತುಗಳ ವ್ಯವಸ್ಥೆ ಕೂಡ ಮಾಡಲಾಗಿದೆ.

24 ಸಾವಿರ ನೌಕರರಿಗೆ ಅನುಕೂಲ: ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಂದಾಯ, ಬಿಸಿಎಂ ಸೇರಿದಂತೆ ಜಿಪಂ ವ್ಯಾಪ್ತಿಯ 27 ಹಾಗೂ ಕಂದಾಯ ಇಲಾಖೆಯ
7 ಸೇರಿದಂತೆ ರಾಜ್ಯ ಸರ್ಕಾರದ ಅಧೀನದಲ್ಲಿ ಒಟ್ಟು ಸುಮಾರು 63 ಇಲಾಖೆಗಳಿವೆ. ಈ ಎಲ್ಲ ಇಲಾಖೆಗಳಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಹಿಡಿದು “ಡಿ’ ದರ್ಜೆಯ ನೌಕರರವರೆಗೆ ಒಟ್ಟು 24 ಸಾವಿರ ಸರ್ಕಾರಿ ನೌಕರರಿದ್ದಾರೆ. ಈ ಎಲ್ಲ ನೌಕರರೂ ಇಲ್ಲಿ ಸದಸ್ಯತ್ವ ಪಡೆಯಲು ಅವಕಾಶವಿದೆ. ಬಾಗಲಕೋಟೆ ನಗರವೊಂದರಲ್ಲೇ ಸುಮಾರು 4 ಸಾವಿರ ಜನ ಸರ್ಕಾರಿ ನೌಕರರಿದ್ದು, ಅವರೆಲ್ಲರ ಸದಸ್ಯತ್ವ ಮಾಡುವ ಕಾರ್ಯ ನಡೆಯುತ್ತಿದೆ ಎಂದು ಕ್ಯಾಂಟಿನ್‌ನ ವ್ಯವಸ್ಥಾಪಕ ಪರಶುರಾಮ ಪಿ. “ಉದಯವಾಣಿ’ಗೆ ತಿಳಿಸಿದರು.

ಕ್ಯಾಂಟೀನ್‌ನಲ್ಲಿ ಏನು ದೊರೆಯಲಿವೆ?
ದೆಹಲಿ ಮೂಲದ ಸಾಯಿ ಇಂಟರ್‌ನ್ಯಾಶನಲ್‌ನಿಂದ ಸರ್ಕಾರಿ ನೌಕರರ ಕ್ಯಾಂಟಿನ್‌ ಆರಂಭಗೊಳ್ಳಲಿದ್ದು, ಈ ಕ್ಯಾಂಟಿನ್‌ ಜತೆಗೆ ಸ್ಯಾಮಸಂಗ್‌, ಎಲ್‌ಜಿ, ಐಎಫ್‌ಬಿ, ಬೋಸ್ಕ್, ವಿವೋ, ಐಟಿಸಿ, ಎಸ್‌ ಸುಜಕಿ ಹೀಗೆ ಹಲವು ಬ್ರಾಂಡ್‌ಗಳ ಮೊಬೈಲ್‌, ಟಿವಿ, ರೆಫ್ರಿಜಿರೇಟರ್‌, ವಾಷಿಂಗ್‌ ಮಷಿನ್‌, ವಾಟರ್‌ ಪ್ಯುರಿಪೈಯರ್‌, ದಿನ ಬಳಕೆ ವಸ್ತುಗಳು, ಎಫ್‌.ಎಂ.ಸಿ.ಜಿ ವಸ್ತುಗಳು ರಿಯಾಯಿತಿ ದರದಲ್ಲಿ ದೊರೆಯುತ್ತವೆ. ಜತೆಗೆ ಹಣಕಾಸು ತೊಂದರೆ ನೀಗಿಸಿಕೊಳ್ಳಲು ಕಂತುಗಳ ವ್ಯವಸ್ಥೆ ಕೂಡ ಮಾಡಲಾಗಿದೆ.

ಸರ್ಕಾರಿ ನೌಕರರಿಗಾಗಿ ಖಾಸಗಿಯಾಗಿ ಪ್ರತ್ಯೇಕ ಕ್ಯಾಂಟಿನ್‌ ಆರಂಭಗೊಳ್ಳುತ್ತಿದೆ. ಗೃಹ ಬಳಕೆ ಹಾಗೂ ದಿನಸಿ ಸಾಮಗ್ರಿ ದೊರೆಯಲಿವೆ. ನೌಕರರ ವೇತನ ಪಟ್ಟಿ ಪರಿಗಣಿಸಿ, ವೇತನಕ್ಕೆ ಅನುಗುಣವಾಗಿ ಸಾಲದ ರೂಪದಲ್ಲಿ (ಉದ್ರಿ) ಸಾಮಗ್ರಿ ನೀಡಲಾಗುತ್ತದೆ. 3 ಸಾವಿರ ಮೇಲ್ಪಟ್ಟು ದಿನಸಿ ಖರೀದಿಸಿದರೆ 5 ಕಿ.ಮೀ ವ್ಯಾಪ್ತಿಯ ಒಳಗಿದ್ದರೆ ಉಚಿತ ಸಾಗಾಣಿಕೆ ವ್ಯವಸ್ಥೆ ಕೂಡ ಮಾಡಲಾಗುತ್ತದೆ. ಪರಶುರಾಮ ಪಿ, ವ್ಯವಸ್ಥಾಪಕ,

ಸರ್ಕಾರಿ ನೌಕರರ ಕ್ಯಾಂಟಿನ್

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-kulageri-cross

Kulageri Cross: ಹೂಳು ತುಂಬಿದ ಕಾಲುವೆ…ಪೋಲಾಗುತ್ತಿದೆ ಮಲಪ್ರಭಾ ಎಡದಂಡೆ ಕಾಲುವೆ ನೀರು…

New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!

New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!

9-rabakavi

Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ

10

Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.