ಬಿಟಿಡಿಎ ವಿರುದ್ಧ ರೈತನ ಆಕ್ರೋಶ
ಭೂಮಿ ಕೊಟ್ಟ ರೈತನಿಗೆ ಕೊಟ್ಟಿಲ್ಲ ಪರಿಹಾರ•ಕಚೇರಿಗೆ ಗೇಟ್‌ಗೆ ಬೀಗ ಜಡಿದು ಪ್ರತಿಭಟನೆ
Team Udayavani, Jun 22, 2019, 1:09 PM IST
ಬಾಗಲಕೋಟೆ: ಬಿಟಿಡಿಎ ಮುಖ್ಯ ಗೇಟ್‌ಗೆ ಬೀಗ ಹಾಕಿ ಪ್ರತಿಭಟಿಸಿದ ರೈತ ಬಸಪ್ಪ ದೊಡ್ಡಮನಿ.
ಬಾಗಲಕೋಟೆ: ನವನಗರ-ಬಾಗಲಕೋಟೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗೆ ಭೂಮಿ ನೀಡಿದ ರೈತನಿಗೆ ಸೂಕ್ತ ಪರಿಹಾರ ಕೊಡದೇ ಬೇಜವಾಬ್ದಾರಿ ತೋರಿದ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ರೈತನೊಬ್ಬ ಆಕ್ರೋಶ ವ್ಯಕ್ತಪಡಿಸಿದ್ದು, ಶುಕ್ರವಾರ ಬಿಟಿಡಿಎ ಮುಖ್ಯ ಕಚೇರಿಯ ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ನಗರದ ಬಸಪ್ಪ ದೊಡ್ಡಮನಿ ಎಂಬ ರೈತ, ನವನಗರದ ಬಿಟಿಡಿಎ ಕಚೇರಿಯ ಮುಖ್ಯ ಗೇಟ್‌ಗೆ ಬೀಗ ಹಾಕಿ ಸುಮಾರು ಒಂದು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ. ಈ ವೇಳೆ ಕಚೇರಿಯೊಳಗೆ ಇದ್ದ ಅಧಿಕಾರಿಗಳು ಹೊರ ಬರದೇ ಪರದಾಡಿದರೆ, ಬಿಟಿಡಿಎ ಕೆಲಸಕ್ಕಾಗಿ ಬಂದಿದ್ದ ಜನರು, ಒಳ ಹೋಗಲು ಆಗದೇ ಪರದಾಡಿದರು.
ಬಿಟಿಡಿಎ ಕೆಲ ಅಧಿಕಾರಿಗಳು, ರೈತ ಬಸಪ್ಪನ ಮನವೋಲಿಸಲು ಪ್ರಯತ್ನಿಸಿದರಾದರೂ, ಕಳೆದ ಹಲವು ವರ್ಷಗಳಿಂದ ಹೀಗೆ ಹೇಳಿ, ನನಗೆ ಪರಿಹಾರ ಕೊಟ್ಟಿಲ್ಲ. ಪರಿಹಾರ ಕೊಡುವವರೆಗೂ ಗೇಟ್ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ, ಬಿಟಿಡಿಎ ಅಧಿಕಾರಿಗಳಿಗೆ ಪರಿಹಾರ ಕೊಡಲು ತಿಳಿಸಿದರು. ಸುಮಾರು ಹೊತ್ತಿನ ಬಳಿಕ, ಬೀಗ ಹಾಕಿದ ಗೇಟ್ ತೆರವುಗೊಳಿಸಲಾಯಿತು.
ಏನಿದು ಪರಿಹಾರ: ಬಸಪ್ಪ ದೊಡ್ಡಮನಿ ಅವರು ನಗರದ ದಡ್ಡೇನವರ ಕ್ರಾಸ್ ಬಳಿ ಭೂಮಿ ಹೊಂದಿದ್ದು, ಕಳೆದ 20 ವರ್ಷಗಳ ಹಿಂದೆ ಬಾಗಲಕೋಟೆ ನಗರ ಆಲಮಟ್ಟಿ ಹಿನ್ನೀರಿನಲ್ಲಿ ಮುಳುಗಡೆಯಾದಾಗ, ನವನಗರಕ್ಕೆ ಸ್ಥಳಾಂತರಿಸಲಾಗಿತ್ತು. ಹಳೆಯ ನಗರ ಮತ್ತು ನವನಗರಕ್ಕೆ ಸಂಪರ್ಕ ಕಲ್ಪಿಸಲು ದಡ್ಡೇನವರ ಕ್ರಾಸ್ ಬಳಿ, ರೈತ ಬಸಪ್ಪ ಅವರ 1.20 ಎಕರೆ ಜಾಗೆಯನ್ನು ಬಿಟಿಡಿಎ ಸ್ವಾಧೀನಪಡಿಸಿಕೊಂಡಿದೆ. ಆದರೆ, ಈ ಭೂಮಿಗೆ ಈ ವರೆಗೆ ಪರಿಹಾರ ಕೊಟ್ಟಿಲ್ಲ ಎಂಬುದು ರೈತನ ಆಕ್ರೋಶ.
ಬಿಟಿಡಿಎ ಪರಿಹಾರ ಕೊಡದ ಹಿನ್ನೆಲೆಯಲ್ಲಿ ಇದೇ ರೈತ, ಕಳೆದ ವರ್ಷ, ನವನಗರ-ಬಾಗಲಕೋಟೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯನ್ನು ಜೆಸಿಬಿ ಮೂಲಕ ಅಗೆದು ರಸ್ತೆ ಸಂಚಾರ ಸ್ಥಗಿತಗೊಳಿಸಿದ್ದ. ಇದಕ್ಕೂ ಮುಂಚೆ ತನ್ನ ಭೂಮಿಯಲ್ಲಿ ಹಾಯ್ದು ಹೋಗಿರುವ ಬಿಎಸ್‌ಎನ್‌ಎಲ್ ಕೇಬಲ್ ತಂತಿಗಳನ್ನು ಕಟ್ ಮಾಡಿದ್ದ. ಇದರಿಂದ ಇಡೀ ಜಿಲ್ಲಾಡಳಿತ ಭವನ, ದೂರವಾಣಿ ಸಂಪರ್ಕ ಹಾಗೂ ಇಂಟರ್‌ನೆಟ್ ಸಂಪರ್ಕದಿಂದ ಇಡೀ ದಿನ ವಂಚಿತವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kulageri Cross: ಹೂಳು ತುಂಬಿದ ಕಾಲುವೆ…ಪೋಲಾಗುತ್ತಿದೆ ಮಲಪ್ರಭಾ ಎಡದಂಡೆ ಕಾಲುವೆ ನೀರು…
New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.