ಗಣಪತಿ ಲಗ್ನದಂತಾಗಿದೆ ಹೆರಕಲ್ ಯೋಜನೆ

ಯೋಜನಾ ಸ್ಥಳಕ್ಕೆ ಶಾಸಕ ಚರಂತಿಮಠ ಭೇಟಿ•ಬಿಟಿಡಿಎ ಅಧಿಕಾರಿಗಳು ತರಾಟೆಗೆ

Team Udayavani, Jun 5, 2019, 12:29 PM IST

5-June-22

ಬಾಗಲಕೋಟೆ : ಕುಡಿಯುವ ನೀರು ಪೂರೈಕೆ ಯೋಜನೆಯ ಹೆರಕಲ್ ಬಳಿಯ ಮೂಲ ಸ್ಥಳವನ್ನು ಶಾಸಕ ಡಾ|ವೀರಣ್ಣ ಚರಂತಿಮಠ ವೀಕ್ಷಿಸಿದರು.

ಬಾಗಲಕೋಟೆ: ನಗರಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಯನ್ನು ಬಿಟಿಡಿಎ ಅಧಿಕಾರಿಗಳು ಗಣಪತಿಯ ಲಗ್ನದಂತೆ ಮಾಡಿಟಿದ್ದಾರೆ. ಆರು ವರ್ಷವಾದರೂ ಜನರ ಬಾಯಿಗೆ ಒಂದು ಹನಿ ನೀರು ಬಿದ್ದಿಲ್ಲ. ಅಧಿಕಾರಿಗಳು ಈ ವರ್ಷ ಪೂರ್ಣಗೊಳಿಸಿ ಕುಡಿಯುವ ನೀರು ಕೊಡಲೇಬೇಕು ಎಂದು ಶಾಸಕ ಡಾ|ವೀರಣ್ಣ ಚರಂತಿಮಠ ಸೂಚನೆ ನೀಡಿದರು.

ಬೀಳಗಿ ತಾಲೂಕು ಹೆರಕಲ್ ಬಳಿ ಘಟಪ್ರಭಾ ನದಿ ಪಾತ್ರದಲ್ಲಿರುವ ಬಿಟಿಡಿಎ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಯ ಯೋಜನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳೊಂದಿಗೆ ಮಂಗಳವಾರ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ನವನಗರ ಯೂನಿಟ್-1, 2 ಹಾಗೂ 3ಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆಗಾಗಿ ನಾನು ಹಿಂದೆ ಶಾಸಕನಾಗಿದ್ದ ವೇಳೆ ಬಿಟಿಡಿಎದಿಂದ ಈ ಯೋಜನೆ ಕೈಗೊಳ್ಳಲಾಗಿತ್ತು. 2013-14ನೇ ಸಾಲಿನಲ್ಲಿ ಅನುಮೋದನೆ ದೊರೆತಿದ್ದು, 2014ರಲ್ಲಿ ಕಾಮಗಾರಿ ಆರಂಭಗೊಂಡಿದೆ. 2015ರ ವೇಳೆಗೆ ಕಾಮಗಾರಿ ಪೂರ್ಣಗೊಳಿಸಿ, ನೀರು ಕೊಡಬೇಕಿತ್ತು. ಐದು ವರ್ಷ ನಾನು ಶಾಸಕನಾಗಿರಲಿಲ್ಲ. ಅಷ್ಟೊತ್ತಿಗೆ ಯೋಜನೆಯೂ ಕುಂಟಿತಗೊಂಡಿತು. 2013-14ರಲ್ಲಿ ಆರಂಭಗೊಂಡ ಯೋಜನೆ, ಈಗ 2019 ಬಂದರೂ ಮುಗಿದಿಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.

72 ಕೋಟಿ ಯೋಜನೆಗೆ 92 ಕೋಟಿ ಸೇತುವೆ: ಮುಂದಾಲೋಚನೆ ಇಲ್ಲದ ಅಧಿಕಾರಿಗಳ ಬೇಜವಾಬ್ದಾರಿಯಿಂದ 72 ಕೋಟಿ ಮೊತ್ತದ ಈ ಯೋಜನೆಗೆ ಅನಗವಾಡಿ ಸೇತುವೆ ಬಳಿ ಪೈಪ್‌ಲೈನ್‌ ಅಳವಡಿಸಲು ಮತ್ತೂಂದು ಸೇತುವೆ ನಿರ್ಮಾಣಕ್ಕೆ 92 ಕೋಟಿ ಮೊತ್ತದ ಯೋಜನೆ ಸಿದ್ಧಪಡಿಸಿದ್ದಾರೆ. ಇಷ್ಟೊಂದು ದುಂದುವೆಚ್ಚದ ಯೋಜನೆ ಮಾಡಲು ನಾನು ಇರುವವರೆಗೂ ಬಿಡುವುದಿಲ್ಲ. ಸಮುದ್ರದ ಆಳದಲ್ಲಿ ಪೈಪ್‌ಲೈನ್‌ ಅಳವಡಿಸುವ ತಂತ್ರಜ್ಞಾನ ಬೆಳೆದಿದೆ. ಆದರೆ, ಘಟಪ್ರಭಾ ನದಿಯಲ್ಲಿ ಪೈಲ್ ಹಾಕಿದರೆ ತಾಂತ್ರಿಕ ತೊಂದರೆಯಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದು ಕೇಳಿ ನನಗೇ ಶಾಕ್‌ ಆಗುತ್ತಿದೆ ಎಂದರು.

ಘಟಪ್ರಭಾ ನದಿ ಬಳಿ 10 ಕೋಟಿ ವೆಚ್ಚದಲ್ಲಿ ಪೈಪ್‌ಲೈನ್‌ಗೆ ಕಾಂಕ್ರಿಟ್ ವಾಲ್ ಹಾಕಿ, ಬಳಿಕ ಏರ್‌ ವಾಲ್ ಬಿಡಬೇಕು. ಇಲ್ಲವೇ ಹೆರಕಲ್ದಿಂದ ಆನದಿನ್ನಿ ಬ್ಯಾರೇಜ್‌ ವರೆಗೆ ಈ ನೀರು ಹರಿಸಿ, ಅಲ್ಲಿಂದ ಈಗಿರುವ ಜಾಕವೆಲ್ ಮೂಲಕ ನಗರಕ್ಕೆ ನೀರು ಕೊಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಅಲ್ಲದೇ ಮೂಲ ಯೋಜನೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ 4.90 ಕೋಟಿ ಮೊತ್ತದ ಯೋಜನೆ ಆರಂಭಗೊಂಡಿದ್ದು, ಶೀಘ್ರ ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ. ಅಧಿಕಾರಿಗಳು ಪುನಃ ವಿಳಂಬ ಮಾಡಿದರೆ ನಾನು ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಒಪ್ಪಿಕೊಂಡ ಅಧಿಕಾರಿಗಳು: ಹೆರಕಲ್ದಿಂದ ಬಾಗಲಕೋಟೆಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆ ವಿಳಂಬವಾಗಿರುವುದನ್ನು ಸ್ವತಃ ಬಿಟಿಡಿಎ ಅಧಿಕಾರಿಗಳು ಒಪ್ಪಿಕೊಂಡರು. ಶಾಸಕರೊಂದಿಗೆ ಆಗಮಿಸಿದ್ದ ಬಿಟಿಡಿಎ ಮುಖ್ಯ ಎಂಜಿನಿಯರ್‌ ಅಶೋಕ ವಾಸನದ, ಎಇಇ ಮೋಹನ ಹಲಗತ್ತಿ, ಸೂಪರಿಡೆಂಟ್ ಎಂಜಿನಿಯರ್‌ ಕೆ.ಎಸ್‌. ಜಂಬಾಳೆ ಮುಂತಾದವರು, ಯೋಜನೆ ವಿಳಂಬಕ್ಕೆ ಹಲವು ಕಾರಣಗಳಿವೆ. ಸಧ್ಯ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕಾಮಗಾರಿ ಚಾಲ್ತಿಯಿದ್ದು, ಹೆರಕಲ್ದಿಂದ ಆನದಿನ್ನಿ ಬ್ಯಾರೇಜ್‌ ವರೆಗೆ ನದಿಯಲ್ಲಿ ನೀರು ತುಂಬಿಸಿಕೊಂಡು, ಅಲ್ಲಿಂದ ಈಗಾಗಲೇ ಚಾಲ್ತಿ ಇರುವ ಯೋಜನೆಯಿಂದ ನೀರು ಕೊಡಲಾಗುವುದು. ನವನಗರ ಬೆಳೆದಂತೆ ನೀರಿನ ಅವಶ್ಯಕತೆ ಹೆಚ್ಚಾಗಲಿದ್ದು, ಆಗ ಅನಗವಾಡಿ ಬಳಿ ಸೇತುವೆ ನಿರ್ಮಿಸಿ, ಪೈಪ್‌ಲೈನ್‌ ಅಳವಡಿಸುವ ಯೋಜನೆ ಕೈಗೊಳ್ಳುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬಿಟಿಡಿಎ ಮಾಜಿ ಅಧ್ಯಕ್ಷ ಸಿ.ವಿ. ಕೋಟಿ ಸೇರಿದಂತೆ ಬಿಟಿಡಿಎ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ಹೆರಕಲ್ ಯೋಜನೆ ಕುರಿತು ಉದಯವಾಣಿ ಕಳೆದ ತಿಂಗಳು ಐದು ದಿನಗಳ ವಿಶೇಷ ಸರಣಿ ವರದಿ ಪ್ರಕಟಿಸಿತ್ತು. ಬಳಿಕ ಬಿಟಿಡಿಎ ಅಧಿಕಾರಿಗಳೂ ಎಚ್ಚೆತ್ತುಕೊಂಡು, ವಿದ್ಯುತ್‌ ಸಂಪರ್ಕ ಕಾಮಗಾರಿ ತೀವ್ರಗೊಳಿಸಿದ್ದರು. ಅಲ್ಲದೇ ಈ ಯೋಜನೆ ಅನುಷ್ಠಾನಕ್ಕೆ ಮೂಲ ಕಾರಣರಾದ ಶಾಸಕ ಚರಂತಿಮಠ ಕೂಡ, ಕುಡಿಯುವ ನೀರಿನ ಯೋಜನೆಯೊಂದು ಆರು ವರ್ಷಗಳ ಕಾಲ ಪೂರ್ಣಗೊಳ್ಳದಕ್ಕೆ ಬೇಸರ ವ್ಯಕ್ತಪಡಿಸಿದರು. ಇಡೀ ಯೋಜನೆಯ ಸಾಧಕ-ಬಾಧಕ ಹಾಗೂ ವಾಸ್ತವ ಅರಿಯಲು ಪತ್ರಕರ್ತರು ಹಾಗೂ ಬಿಟಿಡಿಎ ಅಧಿಕಾರಿಗಳೊಂದಿಗೆ ಮಂಗಳವಾರ ಯೋಜನಾ ಸ್ಥಳಕ್ಕೆ ಭೇಟಿ ನೀಡಿದರು.

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Krantiveer Brigade launched by worshipping the feet of 1008 saints: KS Eshwarappa

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

Rabkavi Banhatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು

Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು

4-

ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್‌ ಕದ್ದ ಅಪರಿಚಿತ ವ್ಯಕ್ತಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.