ಕಾಂಗ್ರೆಸ್ ಮುಸ್ಲಿಮರಿಗೆ ಸೀಮಿತಗೊಳಿಸಬೇಡಿ
ಸತ್ಯಶೋಧನಾ ಸಮಿತಿ ಎದುರು ಕೈ ಪ್ರಮುಖರ ವಿನಂತಿ•ಎಲ್ಲ ಸಮಾಜ ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಲಹೆ
Team Udayavani, Jul 18, 2019, 12:46 PM IST
ಬಾಗಲಕೋಟೆ: ಕೆಪಿಸಿಸಿಯಿಂದ ಆಗಮಿಸಿದ್ದ ಸತ್ಯ ಶೋಧನಾ ಸಮಿತಿಯ ವೀರಕುಮಾರ ಪಾಟೀಲ ಮತ್ತು ವೀರಣ್ಣ ಮತ್ತಿಕಟ್ಟಿ ಅವರಿಗೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಈಟಿ, ಲಿಖೀತ ಪ್ರಶ್ನಾವಳಿಗಳ ಉತ್ತರ ಸಲ್ಲಿಸಿದರು.
ಬಾಗಲಕೋಟೆ: ಕಳೆದ 2018ರ ವಿಧಾನಸಭೆ ಚುನಾವಣೆ ಹಾಗೂ ಈಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ನಿಖರ ಕಾರಣ ಹುಡುಕಲು ಆಗಮಿಸಿದ್ದ ಕೆಪಿಸಿಸಿಯ ಸತ್ಯ ಶೋಧನಾ ಸಮಿತಿ ಎದುರು ಹಲವು ಕಾರ್ಯಕರ್ತರು, ಪ್ರಮುಖರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಪಕ್ಷವನ್ನು ಕೇವಲ ಮುಸ್ಲಿಂರಿಗೆ ಸೀಮಿತಗೊಳಿಸಬೇಡಿ ಎಂದು ಹೇಳಿಕೊಂಡಿದ್ದಾರೆ.
ನಗರದ ಬಗನಿ ಸಮಾಜ ಆವರಣದಲ್ಲಿರುವ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಕೆಪಿಸಿಸಿಯಿಂದ ಆಗಮಿಸಿದ್ದ ಸತ್ಯ ಶೋಧನಾ ಸಮಿತಿಯ ವಿ.ಆರ್. ಸುದರ್ಶನ, ಬಸವರಾಜ ರಾಯರಡ್ಡಿ, ವೀರಣ್ಣ ಮತ್ತಿಕಟ್ಟಿ, ಆರ್. ದೃವನಾರಾಯಣ ಹಾಗೂ ವೀರಕುಮಾರ ಪಾಟೀಲ ಎದುರು, ಜಿಲ್ಲೆಯ ಪಕ್ಷ ಹಳೆಯ ಕಾರ್ಯಕರ್ತರು, ಇಂತಹ ಹಲವು ವಿಷಯ ಗಮನಕ್ಕೆ ತಂದರು.
ಮುಸ್ಲಿಂ ಲೀಗ್ ಮಾಡ್ಬೇಡಿ: ಈಚಿನ ದಿನಗಳಲ್ಲಿ ಕಾಂಗ್ರೆಸ್‌ನಿಂದ ಮುಸ್ಲಿಂರ ಓಲೈಕೆ ಹೆಚ್ಚು ಮಾಡಲಾಗುತ್ತಿದೆ. ಇದರಿಂದ ಪಕ್ಷದ ಪಾರಂಪರಿಕ ಇತರೆ ಸಮಾಜಗಳು ದೂರಾಗುತ್ತಿವೆ. ಒಂದು ರಾಜಕೀಯ ಪಕ್ಷವೆಂದಾಗ ಎಲ್ಲ ಸಮಾಜದವರನ್ನೂ ಒಟ್ಟಿಗೆ ಕರೆದುಕೊಂಡು ಹೋಗಬೇಕು. ಆದರೆ, ಪಕ್ಷವನ್ನು ಮುಸ್ಲಿಂ ಲೀಗ್ ಮಾಡಲು ಹೊರಟಿದ್ದಾರೆ. ಜಿಲ್ಲೆಯ ಕೆಲ ಮುಖಂಡರು, ಕೆಲವೇ ಕೆಲ ಸಮಾಜದ ಪ್ರಮುಖರನ್ನು ಅಕ್ಕ-ಪಕ್ಕ ಕರೆದುಕೊಂಡು ತಿರುಗುತ್ತಾರೆ. ಜವಾಬ್ದಾರಿಗಳನ್ನೂ ಅವರಿಗೇ ಕೊಡುತ್ತಾರೆ. ಅವರು ಕೇವಲ ವಿಜಿಟಿಂಗ್ ಕಾರ್ಡ್ ಮಾಡಿಕೊಂಡು ಸ್ವಯಂ ಪ್ರಚಾರ ಪಡೆಯುತ್ತಾರೆ ಹೊರತು, ಪಕ್ಷ ಸಂಘಟನೆ ಮಾಡುತ್ತಿಲ್ಲ. ಹೀಗಾದರೆ ಪಕ್ಷ ಬೆಳೆಯುವುದು ಹೇಗೆ ಎಂದು ಸಮಿತಿಯ ಸದಸ್ಯರ ಎದುರು ಕೆಲ ಕಾರ್ಯಕರ್ತರು ಅಸಮಾಧಾನ ಹೊರ ಹಾಕಿದರು ಎಂದು ಸಭೆಯಲ್ಲಿ ಭಾಗವಹಿಸಿದ್ದ ಪಕ್ಷ ಜವಾಬ್ದಾರಿ ಹೊತ್ತ ಮುಖಂಡರೊಬ್ಬರು ಉದಯವಾಣಿಗೆ ಖಚಿತಪಡಿಸಿದರು.
ಕಾಟಾಚಾರಕ್ಕೆ ಬಂದು ಹೋಯ್ತಾ ಸಮಿತಿ?: ಸೋಲಿನ ಪರಾಮರ್ಶೆ ಮಾಡುವ ಜತೆಗೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಕುರಿತು ತಳ ಮಟ್ಟದ ಅಭಿಪ್ರಾಯ ಪಡೆಯಬೇಕಾದ ಸತ್ಯ ಶೋಧನಾ ಸಮಿತಿ, ಕೇವಲ ಕಾಟಾಚಾರಕ್ಕೆ ಬಂದು ಹೋಗಿದೆ. ತಪ್ಪು ಮಾಡಿದವರಿಂದಲೇ ಮಾಹಿತಿ ಪಡೆಯುವ ಪ್ರಯತ್ನಗಳೂ ನಡೆದವು. ವಾಸ್ತವ ಸಮಸ್ಯೆ ಅರಿಯಲು, ತಳಮಟ್ಟದ ಕಾರ್ಯಕರ್ತರನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕಿತ್ತು. ಅಲ್ಲದೇ ಇಂತಹ ಪ್ರಮುಖ ಸಮಿತಿ ಹಿರಿಯ ಸದಸ್ಯರು ಜಿಲ್ಲೆಗೆ ಬಂದಾಗ, ಜವಾಬ್ದಾರಿಯುತ ನಾಯಕರು, ಕೆಲವು ಬ್ಲಾಕ್‌ಗಳ ಅಧ್ಯಕ್ಷರೇ ಬಂದಿರಲಿಲ್ಲ. ಅಲ್ಲದೇ ಬೆಳಗ್ಗೆ 10:30ರಿಂದ ಸಂಜೆ 5ರವರೆಗೂ ಜಿಲ್ಲೆಯ ಎಲ್ಲಾ ಎಂಟೂ ವಿಧಾನಸಭೆ ಕ್ಷೇತ್ರಗಳು, ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿನ ಸಮಸ್ಯೆ, ಸೋಲಿನ ವಿವರಣೆ ಪಡೆಯುವುದಾಗಿ ಹೇಳಿ, ಕೇವಲ ಮೂರು ಗಂಟೆ ಇದ್ದು, ಮರಳಿ ಹೋಗಿದ್ದಾರೆ. ಹೀಗಾಗಿ ಕೆಪಿಸಿಸಿಗೆ ಸತ್ಯ ಮಾಹಿತಿ ಹೋಗುವುದು ಅನುಮಾನ ಎಂದು ಹಿರಿಯ ಮುಖಂಡರೊಬ್ಬರು ಅನುಮಾನ ವ್ಯಕ್ತಪಡಿಸಿದರು.
ಗರಂ ಆಗಿದ್ದ ಸಮಿತಿ ಸದಸ್ಯರು: ಬೆಳಗ್ಗೆ 11ರ ಬಳಿಕ ವಿಧಾನಸಭೆ ಮತಕ್ಷೇತ್ರವಾರು ಬ್ಲಾಕ್ ಅಧ್ಯಕ್ಷರು, ಸೋತ ಅಭ್ಯರ್ಥಿಗಳು, ಕೆಪಿಸಿಸಿ, ಜಿಲ್ಲಾ ಸಮಿತಿಯ ಪದಾಧಿಕಾರಿಗಳಿಂದ ಸಮಿತಿ ಸದಸ್ಯರು ಅಭಿಪ್ರಾಯ ಪಡೆದರು. ಅಲ್ಲದೇ ಕೆಪಿಸಿಸಿಯಿಂದ ನಿರ್ದಿಷ್ಟಪಡಿಸಿದ್ದ ಪ್ರಶ್ನಾವಳಿಗಳ ಪ್ರತಿಯನ್ನು ಸಂಬಂಧಿಸಿದವರಿಗೆ ನೀಡಿ, ಆ ಪ್ರಶ್ನಾವಳಿಗೆ ಲಿಖೀತ ರೂಪದ ಉತ್ತರ ಬರೆದುಕೊಡಲು ತಿಳಿಸಿದರು. ಕೆಲವರು ಸ್ಥಳದಲ್ಲೇ ಪ್ರಶ್ನಾವಳಿಗೆ ಉತ್ತರಿಸಿದರೆ, ಇನ್ನೂ ಕೆಲವರು, ಕೆಪಿಸಿಸಿಗೆ ಆ ಮೇಲೆ ತಲುಪಿಸುತ್ತೇವೆ ಎಂದು ಹೇಳಿಕೊಂಡು, ಪ್ರಶ್ನಾವಳಿಯ ಪ್ರತಿಯನ್ನು ತಮ್ಮ ಕಾರಿನಲ್ಲಿ ಇಟ್ಟುಕೊಂಡರು.
ವಿವರ ಪಡೆಯುವ ವೇಳೆ ಜಮಖಂಡಿ ಮತ್ತು ಸಾವಳಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಸತ್ಯ ಶೋಧನಾ ಸಮಿತಿ ಎದುರು ಬರಲಿಲ್ಲ. ತಮ್ಮ ಅಭಿಪ್ರಾಯ, ಪಕ್ಷ ಸಂಘಟನೆ ಬಗ್ಗೆ ಸಮಿತಿಗೆ ವಿವರಿಸಬೇಕಾದ ಈ ಎರಡು ಬ್ಲಾಕ್‌ಗಳ ಅಧ್ಯಕ್ಷರು ಬಾರದೇ ಇದ್ದುದ್ದನ್ನು ಗಂಭೀರವಾಗಿ ಪರಿಗಣಿಸಿದ ಸಮಿತಿ ಸದಸ್ಯರು, ಎರಡೂ ಬ್ಲಾಕ್ ಅಧ್ಯಕ್ಷರನ್ನು ಅಮಾನತುಗೊಳಿಸಿ ಎಂದು ಜಿಲ್ಲಾ ಅಧ್ಯಕ್ಷರಿಗೆ ಸೂಚಿಸಿದರು ಎಂದು ಪದಾಧಿಕಾರಿಯೊಬ್ಬರು ತಿಳಿಸಿದರು.
ಒಟ್ಟಾರೆ, 14 ತಿಂಗಳ ಬಳಿಕ ಎಚ್ಚೆತ್ತ ಕೆಪಿಸಿಸಿ, ವಿಧಾನಸಭೆ ಚುನಾವಣೆಯ ಸೋಲಿನ ಅವಲೋಕನಕ್ಕಾಗಿ ಬಂದರೂ ಅದು ಸಮರ್ಪಕವಾಗಿ ನಡೆಯಲಿಲ್ಲ ಎಂಬ ಮಾತು ಕಾಂಗ್ರೆಸ್ಸಿಗರಿಂದಲೇ ಕೇಳಿ ಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.