ಬೀಳಗಿ ಕೆರೆ ಅಭಿವೃದ್ಧಿಗೆ 1 ಕೋಟಿ ಅನುದಾನ: ನಿರಾಣಿ
Team Udayavani, Feb 13, 2021, 7:23 PM IST
ಬೀಳಗಿ: ಕೆರೆ ಸುತ್ತಲು ಜನರ ವಾಯು ವಿಹಾರಕ್ಕಾಗಿ ಗಾರ್ಡನ್, ಸಾರ್ವಜನಿಕರಿಗೆ ಆಸನದ ವ್ಯವಸ್ಥೆ ಹಾಗೂ ವಿವಿಧ ಅಭಿವೃದ್ಧಿಕಾಮಗಾರಿಗೆ 1ಕೋಟಿ ಅನುದಾನ ಶೀಘ್ರ ಮಂಜೂರಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ಆರ್. ನಿರಾಣಿ ಹೇಳಿದರು.
ಗುರುವಾರ ಪಟ್ಟಣದ ಕೆರೆಗೆ ಭೇಟಿ ನೀಡಿ ಮಾತನಾಡಿದ ಅವರು, ಸಚಿವ ಮುರಗೇಶ ನಿರಾಣಿ ಅವರ ಜನರ ಆಸೆಯಂತೆ 2ಕೋಟಿ ರೂ. ವೆಚ್ಚದಲ್ಲಿ ಕೃಷ್ಣಾ ನದಿಯಿಂದ ಪಟ್ಟಣದ ಕೆರೆಗೆ ಶೇ. 90ರಷ್ಟು ನೀರನ್ನು ತುಂಬಿಸಲಾಗಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ, ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸದಕಾರಣ ಕೆರೆ ನೀರು ಸೋರಿಕೆಯಾಗುತ್ತದೆ.ಸುತ್ತಮುತ್ತಲು ಗಿಡಗಂಟಿ ಬೆಳೆದಿವೆ. ಕೆರೆ ದಡದಲ್ಲಿ ಜನರು ಬಯಲು ಶೌಚಮಾಡುವದನ್ನು ತಡೆಗಟ್ಟಲು ಪಪಂ ಕ್ರಮ ಕೈಗೊಳ್ಳಬೇಕು ಎಂದರು.
ಬರುವ ದಿನಗಳಲ್ಲಿ ಸಚಿವ ಮುರಗೇಶ ನಿರಾಣಿ ಕೆರೆ ಬಾಗಿನ ಅರ್ಪಣೆ ಮಾಡುವರು. ಜನರ ಆಸೆಯಂತೆ ಸಂಪೂರ್ಣವಾಗಿ ಕೆರೆಗೆನೀರು ತುಂಬಿಸಲಾಗುವುದು ಎಂದು ಭರವಸೆ ನೀಡಿದರು.
ಬಿಜೆಪಿ ಅಧ್ಯಕ್ಷ ಈರಣ್ಣ ಗಿಡ್ಡಪ್ಪಗೋಳ,ಪಪಂ ಮುಖ್ಯಾಧಿಕಾರಿ ಐ.ಕೆ. ಗುಡದಾರಿ, ಸಣ್ಣ ನೀರಾವರಿ ಎಂಜನಿಯರ್ ಎಸ್.ಎಂ. ಬಾಟಿ, ಪಪಂ ಅಧ್ಯಕ್ಷ ಸಿದ್ದಲಿಂಗೇಶ ನಾಗರಾಳ, ಉಪಾಧ್ಯಕ್ಷ ಕಾಮೇಶ ದಂಧರಗಿ, ಸಂತೋಷ ನಿಂಬಾಳ್ಕರ, ಸಿದ್ದು ಮಾದರ, ಮುತ್ತು ಬೋರ್ಜಿ, ನಿಂಗಪ್ಪ ದಂಧರಗಿ, ಮಲ್ಲಪ್ಪ ಶಂಬೋಜಿ, ವಿ ಜಿ ರೇವಡಿಗಾರ, ಸಂಗಪ್ಪ ಕಟಗೇರಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.