ನಿಯಮ ಪಾಲಿಸದಿದ್ದರೆ ದಂಡ: ತಹಶೀಲ್ದಾರ್ ಗೌಡಿ ಎಚ್ಚರಿಕೆ |
ಮಾಸ್ಕ್ ಧರಿಸದಿದ್ದರೆ 100 ರೂ. ದಂಡ ವಸೂಲಿ
Team Udayavani, Apr 1, 2021, 7:12 PM IST
ಬೀಳಗಿ: ರಾಜ್ಯದಲ್ಲಿ ಕೋವಿಡ್-19 ರೋಗ ಹರಡುವಿಕೆ ಎರಡನೇ ಅಲೆ ಆರಂಭವಾಗಿದೆ. ಆ ನಿಟ್ಟಿನಲ್ಲಿ ತಾಲೂಕಿನಲ್ಲಿಯೂ ರೋಗದ ಹರಡುವಿಕೆ, ನಿಯಂತ್ರಣ, ಜನರ ಸುರಕ್ಷತೆ ಮತ್ತು ಲಸಿಕೆ ಹಾಕುವ ಕುರಿತು ಕ್ರಮ ಕೈಗೊಳ್ಳಬೇಕಾಗಿದೆ. ತಾಲೂಕಿನ ಜನರು ಹರಡುವಿಕೆ ನಿಯಂತ್ರಿಸುವುದರಲ್ಲಿ ಸಹಕರಿಸಬೇಕು ಎಂದು ತಹಶೀಲ್ದಾರ್ ಶಂಕರ ಗೌಡಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಕುರಿತಾದ ನಿಯಮ ಪಾಲಿಸದಿದ್ದರೆ ವಿಪತ್ತು ನಿರ್ವಹಣೆ ಕಾಯ್ದೆ ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಜನರು ಸರ್ಕಾರ ನೀಡಿರುವ ಮಾರ್ಗಸೂಚಿ ಪಾಲಿಸಬೇಕಿದೆ. ವಿವಿಧ ಹಬ್ಬಗಳ ಸಂದರ್ಭದಲ್ಲಿ ನಡೆಯುವ ಸಮಾರಂಭ, ಗುಂಪು ಚಟುವಟಿಕೆ ನಿಷೇಧಿಸಲಾಗಿದೆ. ಹಬ್ಬ ಮತ್ತು ಜಾತ್ರೆ ಸಂದರ್ಭದಲ್ಲಿ ಯಾವುದೇ ಸಾರ್ವಜನಿಕ ಜಾಗಗಳಲ್ಲಿ ಸಾರ್ವಜನಿಕ ಸಭೆ, ಸಮಾರಂಭ ನಡೆಸುವಂತಿಲ್ಲ. ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸದಿದ್ದಲ್ಲಿ 100 ರೂ. ದಂಡ ವಿಧಿಸಲಾಗುವುದು ಎಂದರು.
ಸಮುದಾಯ ಭವನಗಳು ಮತ್ತು ಕಲ್ಯಾಣ ಮಂಟಪ ಹೊಂದಿರುವ ಮಾಲೀಕರು ಅಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಜನರ ಮಧ್ಯೆ ಸಾಮಾಜಿಕ ಅಂತರ ಇರುವ ಬಗ್ಗೆ ಮತ್ತು ಮಾಸ್ಕ್ ಧರಿಸಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಮದುವೆ ಸಮಾರಂಭಗಳಿಗೆ ತೆರೆದ ಪ್ರದೇಶದಲ್ಲಿ 500 ಜನ ಮತ್ತು ಹಾಲ್‌ಗಳಲ್ಲಿ 200 ಜನರಿಗೆ ಮಾತ್ರ ಅವಕಾಶವಿರುತ್ತದೆ ಎಂದರು.
ಜನ್ಮದಿನ ಆಚರಣೆಗಳಿಗೆ ತೆರೆದ ಪ್ರದೇಶದಲ್ಲಿ 100 ಮತ್ತು ಹಾಲ್‌ಗಳಲ್ಲಿ 50 ಜನರಿಗೆ ಅವಕಾಶವಿದೆ. ಅಂತ್ಯ ಸಂಸ್ಕಾರಕ್ಕೆ ತೆರೆದ ಪ್ರದೇಶದಲ್ಲಿ 100 ಮತ್ತು ಕಟ್ಟಡವಿದ್ದರೆ 50 ಜನಕ್ಕೆ ಅವಕಾಶವಿರುತ್ತದೆ. ಧಾರ್ಮಿಕ ಕಾರ್ಯಕ್ರಮಗಳು ತೆರೆದ ಸ್ಥಳಗಳಲ್ಲಿ 500 ಜನರಿಗೆ ಅವಕಾಶವಿದೆ. ರಾಜಕೀಯ ಕಾರ್ಯಕ್ರಮಗಳು 500 ಜನರಿಗೆ ಸೀಮಿತವಾಗಿರಬೇಕು ಎಂದರು. ಎ.ಸಿ. ಇಲ್ಲದ ಪಾರ್ಟಿ ಹಾಲ್‌ಗಳ ಮಾಲೀಕರಿಗೆ 5000 ರೂ., ಎಸಿ ಇರುವ ಪಾರ್ಟಿ ಹಾಲ್ ಗಳ ಮಾಲೀಕರಿಗೆ 10,000 ರೂ, ಸ್ಟಾರ್ ಹೋಟೆಲ್ ಗಳ ಪಾರ್ಟಿ ಹಾಲ್‌ಗಳ ಮಾಲೀಕರಿಗೆ 10,000 ರೂ. ಮತ್ತು ಸಾರ್ವಜನಿಕ ಸಮಾರಂಭ ಹಾಗೂ ರ್ಯಾಲಿಗಳ ಸಂಘಟಕರಿಗೆ 10000 ರೂ. ದಂಡ ವಿಧಿಸಲಾಗುವುದು.
ಬೀಳಗಿ ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಗಿರಿಸಾಗರ, ಪ್ರಾಥಮಿಕ ಆರೋಗ್ಯ ಕೇಂದ್ರ ಗಲಗಲಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕುಂದರಗಿ ಹೀಗೆ ಒಟ್ಟು ನಾಲ್ಕು ಕಡೆ ಕೋವಿಡ್ ಲಸಿಕೆ ಹಾಕಲಾಗುತ್ತಿದೆ. ಈಗಾಗಲೇ 11000ಕ್ಕೂ ಹೆಚ್ಚು ಜನರಿಗೆ ಲಸಿಕೆ ಹಾಕಲಾಗಿರುತ್ತದೆ. ಕೋವಿಡ್ ಲಸಿಕೆ ಏ.1ರಿಂದ 45 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ನಾಗರಿಕರು ಕೇಂದ್ರಗಳಿಗೆ ಭೇಟಿ ನೀಡಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ
ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ
ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ
MUST WATCH
ಹೊಸ ಸೇರ್ಪಡೆ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.