ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ಅನುದಾನ
Team Udayavani, Nov 1, 2019, 1:00 PM IST
ಬನಹಟ್ಟಿ: ತೇರದಾಳ ಕ್ಷೇತ್ರದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ 25 ಕೋಟಿ ವಿಶೇಷ ಅನುದಾನ ನೀಡಿದೆ. ಅದರಲ್ಲಿ ರಬಕವಿ ಬನಹಟ್ಟಿ ಅಭಿವೃದ್ಧಿಗೆ 6 ಕೋಟಿ ಅನುದಾನದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಸಿದ್ದುಸವದಿ ತಿಳಿಸಿದರು.
ಗುರುವಾರ ಸ್ಥಳೀಯ ಕಾಡಸಿದೇಶ್ವರ ದೇವಸ್ಥಾನದ ಬೃಹತ್‌ಚರಂಡಿ ಮೇಲಿನ ಸೇತುವೆ ಕುಸಿದು ಬಿದ್ದಿದ್ದು, ನೂತನಸೇತುವೆ ನಿರ್ಮಾಣದ ತುರ್ತು ಕಾಮಗಾರಿ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ನಗರದ ಅನೇಕ ಕಡೆಗಳಲ್ಲಿ ರಸ್ತೆಗಳು ಹಾಳಾಗಿದ್ದು, ಪ್ರಮುಖ ರಸ್ತೆಗಳದುರಸ್ತಿ ಕಾರ್ಯ ಕೈಗೊಳ್ಳಲಾಗುವುದು. ಚರಂಡಿಮತ್ತು ಸೇತುವೆ ನಿರ್ಮಾಣವನ್ನು 1ಕೋಟಿ ವೆಚ್ಚದಲ್ಲಿಕೈಗೊಳ್ಳಲಾಗುವುದು. 39 ಲಕ್ಷ ವೆಚ್ಚದಲ್ಲಿ ಸ್ಮಶಾನದ ತಡೆಗೋಡೆ ನಿರ್ಮಾಣ, ರಬಕವಿಯ ಕುಸ್ತಿ ಮೈದಾನದ ಅಭಿವೃದ್ಧಿಗಾಗಿ 62 ಲಕ್ಷ ರೂ. ಮತ್ತು ಬನಹಟ್ಟಿಯ ಕನ್ನಡ ಗಂಡು ಮತ್ತು ಹೆಣ್ಣುಮಕ್ಕಳ ಸರ್ಕಾರಿ ಶಾಲೆಗಳಕಾಂಪೌಂಡ್ ಎತ್ತರ ಮಾಡುವ ಕಾಮಗಾರಿ ಶೀಘ್ರ ಆರಂಭಿಸಲಾಗುವುದು ಎಂದರು.
ಈ ಸೇತುವೆ ದೇವಸ್ಥಾನಕ್ಕೆ ಮತ್ತು ನಗರಪ್ರವೇಶದಮಹತ್ವದ ಸೇತುವೆಯಾಗಿತ್ತು. ಈ ಸೇತುವೆ ನಿರ್ಮಾಣ ಅಗತ್ಯವಾಗಿದೆ. ಶೀಘ್ರ ಕಾಮಗಾರಿ ಆರಂಭಗೊಳಿಸುವಂತೆ ಪತ್ರಿಕೆ ವರದಿ ಪ್ರಕಟಿಸಿತ್ತು. ಶ್ರೀಶೈಲ ಧಬಾಡಿ, ಶ್ರೀಪಾದ ಬಾಣಕಾರ, ಮಲ್ಲಿಕಾರ್ಜುನ ಬಾಣಕಾರ, ರಾಜು ಅಂಬಲಿ, ಪ್ರವೀಣ ಧಬಾಡಿ, ರಾಜು ಬಾಣಕಾರ, ಪೌರಾಯುಕ್ತ ಮೋಹನಜಾಧವ, ಇಂಜಿನಿಯರ್ ಬಸವರಾಜ ಶರಣಪ್ಪನವರ ಸೇರಿದಂತೆ ಅನೇಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.