43 ಜನರಿಗೆ ನೆಗೆಟಿವ್;ಆರು ವರದಿ ರಿಜೆಕ್ಟ್
Team Udayavani, Apr 25, 2020, 12:32 PM IST
ಸಾಂದರ್ಭಿಕ ಚಿತ್ರ
ಬಾಗಲಕೋಟೆ: ಜಿಲ್ಲೆಯಿಂದ ಕೋವಿಡ್ 19 ವೈರಸ್ ಪತ್ತೆಗಾಗಿ ಕಳುಹಿಸಿದ್ದ ಗಂಟಲು ದ್ರವ ಸ್ಯಾಂಪಲ್‌ಗಳಲ್ಲಿ ಶುಕ್ರವಾರ 43 ವರದಿ ನೆಗೆಟಿವ್ ಬಂದಿದ್ದು, ಮೂರು ಪಾಜಿಟಿವ್ ಬಂದಿವೆ ಎಂದು ಜಿಲ್ಲಾಧಿಕಾರಿ ಕ್ಯಾ.ಡಾ|ಕೆ. ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ಕೋವಿಡ್ 19 ಪಾಜಿಟಿವ್ ವರದಿ ಪತ್ತೆಯಾಗಿರಲಿಲ್ಲ. ಆದರೆ, ಇಂದು 14 ವರ್ಷದ ಬಾಲಕ ಸಹಿತ ಮೂವರಿಗೆ ಪತ್ತೆಯಾಗಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಇಂದು 43 ವರದಿ ನೆಗೆಟಿವ್, ಮೂರು ಪಾಜಿಟಿವ್ ಬಂದಿದ್ದು, 31 ಬಾಕಿ ಹಾಗೂ ಇಂದು ಹೊಸದಾಗಿ ಕಳುಹಿಸಿದ 30 ಸೇರಿ ಒಟ್ಟು 61 ಸ್ಯಾಂಪಲ್‌ಗಳ ವರದಿ ಬರಬೇಕಾಗಿದೆ. ಇಲ್ಲಿವರೆಗೆ ಒಟ್ಟು 1612 ಸ್ಯಾಂಪಲ್ ಕಳುಹಿಸಲಾಗಿದ್ದು, ಅದರಲ್ಲಿ 1522 ನೆಗಟಿವ್ ಪ್ರಕರಣ, 24 ಪಾಜಿಟಿವ್ ಪ್ರಕರಣ ಹಾಗೂ 1 ಮೃತ ಪ್ರಕರಣ ವರದಿಯಾಗಿದ್ದು, 6 ಸ್ಯಾಂಪಲ್ ಗಳು ರಿಜೆಕ್ಟ್ ಆಗಿವೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 1546 ಮನೆಯಲ್ಲಿಯೇ ಪ್ರತ್ಯೇಕವಾಗಿ ನಿಗಾದಲ್ಲಿದ್ದಾರೆ. ಕೋವಿಡ್ ಸೋಂಕಿನಿಂದ ಪಿ, ನಂ.161 ಮತ್ತು 162 ವ್ಯಕ್ತಿಗಳು ಕೋವಿಡ್‌ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಈಗಾಗಲೇ ಬಿಡುಗಡೆ ಮಾಡಲಾಗಿದೆ. 28 ದಿನಗಳ ಕಾಲ ಹೋಮ್ ಕ್ವಾರಂಟೈನ್‌ನಿಂದ ಒಟ್ಟು 156 ವ್ಯಕ್ತಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudhol: ಮಧ್ಯರಾತ್ರಿ ನಡುರಸ್ತೆಯಲ್ಲಿ ಕಬ್ಬು ತುಂಬಿದ ಟ್ರೇಲರ್ ಪಲ್ಟಿ
Political Gap: ನಾನು ರಾಜಕೀಯದಿಂದ ಸ್ವಿಚ್ಡ್ ಆಫ್ ಆಗಿದ್ದೇನೆ: ಸ್ಪೀಕರ್ ಯು.ಟಿ. ಖಾದರ್
Excise: ಅಬಕಾರಿ ಇಲಾಖೆಯಲ್ಲಿ ವರ್ಗಾವಣೆಗೆ ಇನ್ನು ಕೌನ್ಸೆಲಿಂಗ್: ಸಚಿವ ತಿಮ್ಮಾಪುರ
ನಿರ್ವಹಣೆಯೇ ಇಲ್ಲದ ಬಸ್ ನಿಲ್ದಾಣ! ರಾತ್ರಿ ವೇಳೆ ಬಸ್‌ಗಳ ಓಡಾಟ ತೀರಾ ಕಡಿಮೆ
Rabakavi-Banahatti: ಯಲ್ಲಟ್ಟಿ ಬಳಿ ಸಿಎನ್‌ಜಿ ಟ್ಯಾಂಕರ್ ಪಲ್ಟಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.