ತಾತ್ಕಾಲಿಕ ರಸ್ತೆಯಲ್ಲಿ ಸಿಕ್ಕಾಕಿಕೊಂಡ ಬಸ್… ತಪ್ಪಿದ ಭಾರಿ ಅನಾಹುತ
Team Udayavani, Jul 18, 2023, 10:11 PM IST
ಮಹಾಲಿಂಗಪುರ: ಕೆಸರಗೊಪ್ಪ ಗ್ರಾಮದ ಹತ್ತಿರ ಮಹಾಲಿಂಗಪುರ ಹಂದಿಗುಂದ ತಾತ್ಕಾಲಿಕ ರಸ್ತೆಯಲ್ಲಿ ಬಸ್ ಸಿಕ್ಕಾಕಿಕೊಂಡು ಅಲ್ಪದರಲ್ಲಿಯೇ ಭಾರಿ ಅನಾಹುತ ತಪ್ಪಿದ ಘಟನೆ ಮಂಗಳವಾರ ಸಂಜೆ ಜರುಗಿದೆ.
ಘಟನೆ ವಿವರ: ಮಹಾಲಿಂಗಪುರ ಹಂದಿಗುಂದ ರಸ್ತೆಯಲ್ಲಿ ಕೆಸರಗೊಪ್ಪ ಗ್ರಾಮದ ಪಶ್ಚಿಮ ಭಾಗದಲ್ಲಿನ ಹಳ್ಳಕ್ಕೆ ಸೇತುವೆ ನಿರ್ಮಾಣದ ಕಾಮಗಾರಿಯು ಕಳೆದ ಕೆಲವು ತಿಂಗಳಿನಿಂದ ನಡೆಯುತ್ತಿದೆ. ವಾಹನಗಳ ಸಂಚಾರಕ್ಕಾಗಿ ಸೇತುವೆಯ ಪಕ್ಕದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ರಸ್ತೆಯಲ್ಲಿ ಹಳ್ಳವನ್ನು ದಾಟುವಾಗ ಮಂಗಳವಾರ ಸಂಜೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಚಿತ್ತಾಪುರ ಘಟಕದ ಗುರಮಿಟಕಲ್ ಮೂಗಳಖೋಡ ಬಸ್ಸು ಸಿಕ್ಕಾಕಿಕೊಂಡಿದೆ.
ಚಾಲಕನ ಸಮಯ ಪ್ರಜ್ಞೆಯಿಂದಾಗಿ ಬಸ್ ನಲ್ಲಿದ್ದ ಪ್ರಯಾಣಿಕರು ಸಕಾಲಕ್ಕೆ ಬಸ್ ನಿಂದ ಕೆಳಗೆ ಇಳಿದ ಕಾರಣ ಭಾರಿ ಅನಾಹುತ ತಪ್ಪಿದೆ. ಈ ಭಾಗದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಆದರೆ ಕಳೆದ ಎರಡು ದಿನಗಳಿಂದ ಘಟಪ್ರಭಾ ಎಡದಂಡೆ ಕಾಲುವೆ ನೀರು ಈ ಹಳ್ಳಕ್ಕೆ ಹರಿದು ಬರುತ್ತಿರುವ ಕಾರಣ ನೀರಿನ ತೇವಾಂಶದಿಂದ ತಾತ್ಕಾಲಿಕ ರಸ್ತೆಯಲ್ಲಿ ಮಣ್ಣು ನೆನೆದಿರುವ ಕಾರಣ, ಬಸ್ ಹಳ್ಳ ದಾಟುತ್ತಿರುವಾಗ ಡ್ರೈವರ್ ಬದಿಯ ಬಸ್ಸಿನ ಗಾಲಿಗಳು ಮಣ್ಣಲ್ಲಿ ಸಿಕ್ಕುಕೊಂಡ ಪರಿಣಾಮ ಈ ಘಟನೆ ಸಂಭವಿಸಿದೆ. ಆದರೆ ಚಾಲಕನ ಸಮಯ ಪ್ರಜ್ಞೆ, ಚಾಣಾಕ್ಷತನದಿಂದ ಅನಾಹುತ ತಪ್ಪಿದೆ, ಎಲ್ಲಾ ಪ್ರಯಾಣಿಕರು ಸುರಕ್ಷೀತರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ನಂತರ ಸೇತುವೆಯ ಕಾಮಗಾರಿಯ ಕಾರ್ಮಿಕರು, ಗ್ರಾಮಸ್ಥರು ಜೆಸಿಬಿ ಸಹಾಯದ ಮೂಲಕ ಬಸ್ಸನ್ನು ಹಳ್ಳದಿಂದ ದಾಟಿಸಿದ್ದರಿಂದ ಬಸ್ ಒಂದು ಗಂಟೆ ತಡವಾಗಿ ಮೂಗಳಕೋಡಕ್ಕೆ ಹೋಗಿದೆ. ಈ ಬಸ್ ನಿತ್ಯ ಗುರಮಿಟಕಲ್ ದಿಂದ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಸುಕ್ಷೇತ್ರ ಮೂಗಖೋಡಕ್ಕೆ ಹೋಗುವ ಬಸ್ಸಾಗಿದೆ. ಇದೇ ಬಸ್ಸು ಪ್ರತಿದಿನ ಮುಂಜಾನೆ 6ಕ್ಕೆ ಮೂಗಳಖೋಡದಿಂದ ಮರಳಿ ಗುರಮಟ್ಕಲ್ ಗೆ ಹೋಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.