ಕೂಗಳತೆಯಲ್ಲಿದ್ದರೂ ಪ್ರಯೋಜನವಾಗದ ಕೆರೆ
•ಹಳ್ಳಿಗಳಿಗೆ 'ಸಂಜೀವಿನಿ'•ತುಂಬಿ ನಿಂತರೆ ಅಕ್ಕಪಕ್ಕದ ಸಾವಿರಾರು ಎಕರೆ ಜಮೀನುಗಳಿಗೆ ಅನುಕೂಲ
Team Udayavani, Jun 7, 2019, 8:58 AM IST
ಬನಹಟ್ಟಿ: ಬನಹಟ್ಟಿ ಸಮೀಪದ ಬೃಹತ್ ಕೆರೆ.
ಬನಹಟ್ಟಿ: ರೈತರ ಜೀವಜಲವಾಗಿರುವ ಬನಹಟ್ಟಿಯ ಕೆರೆಯಿಂದ ಜಗದಾಳ, ನಾವಲಗಿ, ಚಿಮ್ಮಡ, ಬಂಡಿಗಣಿ, ಯಲ್ಲಟ್ಟಿ ಸೇರಿದಂತೆ ಮುಧೋಳ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಅಂತರ್ಜಲಮಟ್ಟ ಹೆಚ್ಚಳವಾಗಿದ್ದರೆ, ಕೂಗಳತೆಯಲ್ಲಿರುವ ರಬಕವಿ-ಬನಹಟ್ಟಿ ಪಟ್ಟಣಕ್ಕೆ ಪ್ರಯೋಜನವಾಗದಿರುವುದು ವಿಪರ್ಯಾಸವೇ ಸರಿ.
ಶತಮಾನದ ಇತಿಹಾಸ ಹೊಂದಿರುವ ಬನಹಟ್ಟಿಯ ಬೃಹತ್ ಕೆರೆ ಸುಮಾರು 64 ಎಕರೆ ವಿಸ್ತೀರ್ಣ ಹೊಂದಿದ್ದು, ಅದು ತುಂಬಿ ನಿಂತರೆ ಅಕ್ಕಪಕ್ಕದ ಸಾವಿರಾರು ಎಕರೆ ಜಮೀನುಗಳಿಗೆ ಅನುಕೂಲವಾಗುತ್ತದೆ. 8-10 ಗ್ರಾಮಗಳ ದೂರದವರೆಗೆ ಇರುವ ಕೊಳವೆಬಾವಿಗಳಲ್ಲಿ ಸದಾ ನೀರು ಶೇಖರಣೆಯಾಗಲು ಈ ಕೆರೆ ಕಾರಣವಾಗಿದೆ. ಆದರೆ ರಬಕವಿ-ಬನಹಟ್ಟಿಗೆ ಯಾವುದೇ ರೀತಿಯ ಅನುಕೂಲವಾಗಿಲ್ಲ. ಕಾರಣ ಇದಕ್ಕೆ ಮಹತ್ವದ ಯೋಜನೆ ರೂಪಿಸಿ ರಬಕವಿ-ಬನಹಟ್ಟಿ ಅವಳಿ ಪಟ್ಟಣದಲ್ಲಿರುವ ಲಕ್ಷಕ್ಕೂ ಅಧಿಕ ಜನರಿಗೆ ಪ್ರಯೋಜನವಾಗುವಂತೆ ಮಾಡಬೇಕಿದೆ.
ನೀರಿದ್ದರೂ ಇಲ್ಲ ಪ್ರಯೋಜನ: ಘಟಪ್ರಭಾ ಎಡದಂಡೆ ಕಾಲುವೆ ಮೂಲಕ ನೀರು ಹರಿದು ಬಂದರೆ ಬನಹಟ್ಟಿ ಕೆರೆ ತುಂಬುತ್ತದೆ. ಕೆರೆ ಒಮ್ಮೆ ಭರಪೂರ ಭರ್ತಿಯಾದರೆ ಸುಮಾರು 0.75 ಟಿಎಂಸಿ ನೀರು ಶೇಖರಣೆಯಾಗುತ್ತದೆ. ಈ ನೀರನ್ನು ಬೇಸಿಗೆ ದಿನಗಳಲ್ಲಿ ರಬಕವಿ-ಬನಹಟ್ಟಿ ಅವಳಿನಗರಕ್ಕೆ ಪೂರೈಸಬಹುದು. ಇದರಿಂದ ಅತ್ಯಂತ ಕಡಿಮೆ ವೆಚ್ಚದಲ್ಲಿ ನೀರಿನ ಸಮಸ್ಯೆ ನೀಗಿಸಬಹುದಾಗಿದ್ದು, ಈ ಕುರಿತು ಜನಪ್ರತಿನಿಧಿಗಳು ಆಲೋಚನೆ ಮಾಡದಿರುವುದು ದುರದೃಷ್ಟಕರ.
ಹೂಳು ತೆಗೆದರೆ ಇನ್ನಷ್ಟು ಅನುಕೂಲ: ಕೆರೆಯಲ್ಲಿ ಹೂಳು ತೆಗೆದರೆ ಇನ್ನಷ್ಟು ಆಳವಾಗಿ ನೀರು ಸಂಗ್ರಹಣೆಯಾಗುತ್ತದೆ. ಸರಕಾರ ಈ ಕೆರೆಯನ್ನು ಹೂಳು ತೆಗೆದು ಸಾಕಷ್ಟು ನೀರು ನಿಲ್ಲುವಂತೆ ಮಾಡಿದರೆ ಸಾಕಷ್ಟು ಅನುಕೂಲವಾಗುತ್ತದೆ. ನೀರಿನ ಬವಣೆ ನೀಗಿದಂತಾಗುತ್ತದೆ. ಇಂತಹ ಕೆರೆಯನ್ನು ಸದ್ಬಳಕೆ ಮಾಡಿಕೊಳ್ಳದೇ ಮತ್ತೆ ಟ್ಯಾಂಕರ್, ಕೊಳವೆ ಬಾವಿ ಸೇರಿದಂತೆ ಇತರೆ ಹರಸಾಹಸ ಮಾಡುವುದರ ಮೂಲಕ ಕಸರತ್ತು ನಡೆಸುತ್ತಿದೆ.
ಕೆರೆ ಒತ್ತುವರಿ: 64 ಎಕರೆ ವಿಸ್ತೀರ್ಣ ಹೊಂದಿರುವ ಈ ಕೆರೆ ಸದ್ಯ ಭೂಗಳ್ಳರ ಪಾಲಾಗಿ ಅಂದಾಜು 10 ಎಕರೆ ಪ್ರದೇಶ ಖಾಸಗಿ ವ್ಯಕ್ತಿಗಳ ಪಾಲಾಗಿದೆ. ಈ ಒತ್ತುವರಿ ಪ್ರದೇಶವನ್ನು ವಾಪಸ್ ಪಡೆಯುವತ್ತ ಸರ್ಕಾರ ಪ್ರಮುಖ ಹೆಜ್ಜೆ ಇಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.