ಮಹಾರಾಷ್ಟ್ರದಲ್ಲಿ ಪ್ರಾರಂಭವಾದ ಹಿಂದೂ ಸಂಸ್ಕೃತಿಯ ಒಂದು ಭಾಗ; ವಾರಕರಿ ಸಂಪ್ರದಾಯ
Team Udayavani, Oct 23, 2022, 12:56 PM IST
ಕುಳಗೇರಿ ಕ್ರಾಸ್: ಭಕ್ತಿ ಚಳುವಳಿಯಾಗಿ ರೂಪಗೊಂಡು ಇದು 13ನೇ ಶತಮಾನದಿಂದ 18ನೇ ಶತಮಾನದವರೆಗೆ ಅಂದರೆ ಸುಮಾರು 600 ವರ್ಷಗಳ ಕಾಲ ವಾರಕರಿ ಸಂಪ್ರದಾಯವು ಮಹಾರಾಷ್ಟ್ರದ ಜನ ಸಾಮಾನ್ಯರ ಜೀವನದಲ್ಲಿ ಅಗಾದವಾದ ಪರಿಣಾಮವನ್ನು ಬೀರಿದ ಒಂದು ಆಧ್ಯಾತ್ಮಿಕ ಸಂಪ್ರದಾಯವೆಂದು ಹೇಳಬಹುದು.
ವಾರಕರಿ ಎಂದರೆ ಸಾಮಾನ್ಯವಾಗಿ ಯಾತ್ರೆ ಮಾಡುವವರು ಎಂದರ್ಥ. ಭಕ್ತ ಮಾರ್ಗದಲ್ಲಿ ಯಾತ್ರೆ ಮಾಡುವವರೆಲ್ಲರೂ ವಾರಕರಿ ಸಂಪ್ರದಾಯದವರು. ಇವರ ಆರಾಧ್ಯ ದೈವ ಫಂಡರಪುರದ ವಿಠ್ಠಲ. ಇದು ಶ್ರೀಕೃಷ್ಣನ ಇನ್ನೊಂದು ರೂಪ ಎಂದು ಪೌರಾಣಿಕ ಹಿನ್ನೆಲೆಯಿಂದ ತಿಳಿದು ಬರುತ್ತದೆ.
ದಿಂಡಿ ಪಾದಯಾತ್ರೆಯ ಪ್ರಮುಖ ಉದ್ದೇಶ (ವಾರಕರಿ ಸಂಪ್ರದಾಯ) ವಿಠ್ಠಲನ ಆರಾಧನೆಯನ್ನು ಮಾಡುತ್ತಾ ಜಾತಿಯತೆಯನ್ನು ಮೀರಿ ಎಲ್ಲರೂ ಆ ದಿಂಡಿಯಲ್ಲಿ ಸಮಾನತೆ ಮತ್ತು ಮಾನವೀಯತೆಯಿಂದ ಶಾಂತಿ, ಸಹಬಾಳ್ವೆ, ಅಹಿಂಸೆಯಿಂದ ಪರಸ್ಪರ ಒಬ್ಬರಿಗೊಬ್ಬರು ತಲೆ ಭಾಗುವಿಕೆಯಿಂದು ಎಲ್ಲರೂ ಸಮಾನರು ಎಂದು ತೋರಿಸುವ ಆದ್ಯಾತ್ಮಿಕ ಚಳುವಳಿಯಾಗಿದೆ.
ನೈತಿಕ ನಡುವಳಿಕೆ, ಮದ್ಯಪಾನ ಮತ್ತು ತಂಬಾಕನ್ನು ದೂರವಿಡುವಲ್ಲಿ ಕಟ್ಟುನಿಟ್ಟಾದ ಆಚಾರ ವಿಚಾರಗಳನ್ನು ಪಾಲಿಸುವುದು. ಮುಖ್ಯವಾಗಿ ಸಾತ್ವಿಕ ಆಹಾರ ಸೇವೆನೆ ಮತ್ತು ಏಕಾದಶಿ ದಿನದಂದು ಈರುಳ್ಳಿ, ಬೆಳ್ಳುಳ್ಳಿಯನ್ನು ಸ್ವೀಕರಿಸದೆ ಇರುವುದು.
ಇವರು ಪ್ರತಿ ವರ್ಷ ಕಾರ್ತಿಕ ಮಾಸದ ಏಕಾದಶಿಯಂದು ಪಾದಾಯಾತ್ರೆಯ ಮೂಲಕ ಪಂಢರಪುರಕ್ಕೆ ವಿಠ್ಠಲನ ದರ್ಶನಕ್ಕೆ ತೆರಳುತ್ತಾರೆ. ಇದು ಭಾರತೀಯ ಹಿಂದೂ ಸಂಸ್ಕೃತಿಯ ಬಹುದೊಡ್ಡ ಆದ್ಯಾತ್ಮಿಕ ಪಾದಯಾತ್ರೆ.
ದೊರೆಸ್ವಾಮಿ ವಿರಕ್ತಮಠ ಮತ್ತು ವಾರಕರಿ(ವಾರಿ)ಸಂಪ್ರದಾಯ: ರಾಷ್ಟ್ರೀಯ ಹೆದ್ಧಾರಿಗೆ ಹೊಂದಿಕೊಂಡಿರುವ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದಲ್ಲಿರುವ ಚಿಕ್ಕ ಮಠ ಹಲವಾರು ವರ್ಷಗಳಿಂದ ಗ್ರಾಮದಲ್ಲಿ ಆದ್ಯಾತ್ಮಿಕ ಚಿಂತನೆಗಳೊಂದಿಗೆ ಸಾಮಾಜಿಕ, ಸಾಂಸ್ಕೃತಿ, ಶೈಕ್ಷಣಿಕ ಮತ್ತು ಕನ್ನಡ ಪರ ಕೈಂಕರ್ಯಗಳನ್ನು ಮಾಡುತ್ತಾ ಶ್ರೀಮಠ ಜನ ಸಾಮಾನ್ಯರಿಗೆ ಜಾತಿ-ಮತ-ಪಂಥ ಎಂಬ ಬೇಧವನ್ನರಿಯದೆ ನಿರಂತರವಾಗಿ ಸರ್ವರನ್ನು ಸಮಾನವಾಗಿ ಕಾಣುತ್ತಿರುವ ಕೋಮು ಸೌಹಾರ್ದತೆಯ ಪ್ರತಿರೂಪದಂತೆ ಕಂಗೊಳಿಸುತ್ತಿದೆ.
ನೂರಾರು ವರ್ಷಗಳಿಂದ ವಾರಿ ಸಂಪ್ರದಾಯದವರು ದಿಂಡಿ ಪಾದಯಾತ್ರೆಯ ಮೂಲಕ ಪಂಢರಪುರಕ್ಕೆ ತೆರಳುವ ಸಂದರ್ಭದಲ್ಲಿ ಶ್ರೀಮಠಕ್ಕೆ ಬಂದು ವಿಶ್ರಮಿಸಿ ಕಥಾ-ಕೀರ್ತನೆಗಳನ್ನು ಪಠಿಸಿ ಶ್ರೀಮಠದಲ್ಲಿ ಸಿದ್ದಪಡಿಸಿದ ಪ್ರಸಾದವನ್ನು ಸ್ವೀಕರಿಸಿ ಕೆಲ ಕಾಲ ವಿಶ್ರಮಿಸಿ ಮುಂದೆ ಸಾಗುತ್ತಾರೆ.
ಇಲ್ಲಿ ಪ್ರತಿ ವರ್ಷ ಲಕ್ಷ್ಮೇಶ್ವರ, ಕೋಣನ ತಂಬಿಗೆ, ಹಲುವಾಗಲು, ಅಲ್ಲಾಪೂರ, ಹರಪ್ಪನಹಳ್ಳಿ, ಯಲ್ಲಾಪುರ ಹೀಗೆ ಇನ್ನೂ ಅನೇಕ ದಿಂಡಿ(ವಾರಿ ಸಂಪ್ರದಾಯ) ಪಾದಯಾತ್ರೆಯವರು ಹಾಗೆಯೇ ಹುಬ್ಬಳ್ಳಿ ಸಿದ್ಧಾರೂಡಮಠ, ಯಲ್ಲಮ್ಮನ ಗುಡ್ಡ, ಬನಶಂಕರಿಯಂತಹ ಅನೇಕ ಪುಣ್ಯ ಕ್ಷೇತ್ರಗಳಿಗೆ ಪಾದಯಾತ್ರೆ ಮಾಡುವ ಯಾತ್ರಾರ್ಥಿಗಳಿಗೆ ನೂರಾರು ವರ್ಷಗಳಿಂದ ಶ್ರೀಮಠ ಅನ್ನದಾಸೋಹವನ್ನು ನೀಡುತ್ತಾ ಹಸಿದವರ ಹೊಟ್ಟೆಯನ್ನು ತುಂಬಿಸುವಂತಹ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ.
ವಾರಿ ಸಂಪ್ರಧಾಯ 13ನೇ ಶತಮಾನದಲ್ಲಿ ಪ್ರಾರಂಭವಾದ ಒಂದು ಬಹುದೊಡ್ಡ ಆದ್ಯಾತ್ಮಿಕ ಚಳುವಳಿ. ಇಲ್ಲಿ ಜಾತಿ, ವರ್ಗ, ವರ್ಣ ರಹಿತ ಯಾತ್ರೆ ಇದಾಗಿದ್ದು, ಇಂತಹ ವಿಶಿಷ್ಠ ಪರಂಪರೆ ಹೊಂದಿರುವ ವಾರಕರಿ ಸಂಪ್ರದಾಯದವರು ನೂರಾರು ವರ್ಷಗಳಿಂದ ಶ್ರೀಮಠದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದಾರೆ. – ಪೂಜ್ಯ ಶಾಂತಲಿಂಗ ಶ್ರೀಗಳು
-ಮಹಾಂತಯ್ಯ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kulageri Cross: ಹೂಳು ತುಂಬಿದ ಕಾಲುವೆ…ಪೋಲಾಗುತ್ತಿದೆ ಮಲಪ್ರಭಾ ಎಡದಂಡೆ ಕಾಲುವೆ ನೀರು…
New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.