ಅಪರೂಪದ ಮದುವೆ: 38 ಇಂಚು ಎತ್ತರದ ವರನಿಗೆ, 5.3 ಅಡಿ ಎತ್ತರದ ವಧು: ಕೂಡಿಬಂದ ಕಂಕಣ ಭಾಗ್ಯ
Team Udayavani, Feb 21, 2022, 12:13 PM IST
ಕುಳಗೇರಿ ಕ್ರಾಸ್:ನೀಲಗುಂದ ಗ್ರಾಮದ ಬಸವೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಭಾನುವಾರ ಅಪರೂಪದ ಮದುವೆ ನಡೆಯಿತು.
ವರನ ಎತ್ತರ 38″ ಇಂಚು ಇದ್ದರೆ, ವಧುವಿಗೆ 5.3 ಅಡಿ ಎತ್ತರ ಇದ್ದಾರೆ. ಗ್ರಾಮಸ್ಥರು ಸೇರಿದಂತೆ ಇಬ್ಬರ ಮನೆಯವರು ಈ ಮದುವೆಗೆ ಒಪ್ಪಿಗೆ ನೀಡಿ ಹಿಂದೂ ಸಂಪ್ರದಾಯದಂತೆ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮದುವೆ ಮಾಡಿಸಿದರು.
ಬಾದಾಮಿ ತಾಲೂಕಿನ ನೀಲಗುಂದ ಗ್ರಾಮದ 38 ಇಂಚು ಎತ್ತರದ ಬಸವರಾಜನಿಗೆ 30 ವಯಸ್ಸು. ಕುಬ್ಜನಾಗಿದ್ದ ಬಸವರಾಜ ಕುಂಬಾರ ಕನ್ಯೆಗಾಗಿ ಹುಡುಕುತ್ತಿದ್ದ, ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಗಣಿ ಗ್ರಾಮದಲ್ಲಿನ 22 ವಯಸ್ಸಿನ ಯುವತಿ ರುಕ್ಮಿಣಿಯೊಂದಿಗೆ ಮದುವೆ ಮಾಡಿಸಿದ್ದಾರೆ.
ತಾನೆ ಒಪ್ಪಿ ಯುವಕನನ್ನು ವರಿಸಲು ಮುಂದಾದ ರುಕ್ಮಿಣಿ, ಬಸವರಾಜ ಜೊತೆ ಮದುವೆಯಾಗಿ ಹೊಂದಾಣಿಕೆಯಿಂದ ಜೀವನ ನಡೆಸುತ್ತೆನೆ. ಯಾರ ಒತ್ತಡವೂ ಇಲ್ಲ ಪ್ರೇಮದಿಂದಲೇ ಮದುವೆಯಾಗುತ್ತಿದ್ದೇನೆ ಎಂದು ರುಕ್ಮಿಣಿ ಹೇಳಿಕೊಂಡರು.
5 ವರ್ಷಗಳಿಂದ ನನ್ನ ಮಗನಿಗೆ ಕನ್ಯಾ ನೋಡುತ್ತಿದ್ದೆ ಆದರೂ ಸಿಕ್ಕಿರಲಿಲ್ಲ. ಈಗ ಎಲ್ಲರಂತೆ ನನ್ನ ಮಗನಿಗೆ ಕನ್ಯಾ ಸಿಕ್ಕಿದೆ ಮದುವೆಯು ನಡೆಯಿತು ಎಂದು ಸಂತಸಗೊಂಡ ಬಸವರಾಜನ ತಾಯಿ ಶಾಂತಮ್ಮ ನನಗಂತು ಬಹಳ ಖುಷಿಯಾಗಿದೆ ಎಂದರು.
ಇಂದು ನಮ್ಮೂರಲ್ಲಿ ನಡೆದ ಮದುವೆ ಬಹಳ ವಿಶೇಷವಾದದ್ದು. ಇಬ್ಬರ ಮನೆಯವರ ಒಪ್ಪಿಗೆಯನ್ನು ಪಡೆದು ಮದುವೆ ಮಾಡಿಸಿದ್ದೇವೆ, ಮುಖಂಡರು ಗ್ರಾಮಸ್ಥರು ಸೇರಿದಂತೆ 600 ಕ್ಕೂ ಹೆಚ್ಚು ಜನ ಪಾಲ್ಗೊಂಡು ಶುಭ ಹಾರೈಸಿದರು. –ನೀಲಗುಂದ ಮಲ್ಲಪ್ಪ ಸೋಮಪ್ಪ ಹೂಗಾರ ಗ್ರಾಪಂ ಮಾಜಿ ಅಧ್ಯಕ್ಷ
ನನ್ನ ಸಹೋದರನಂತಿರುವ ಬಸವರಾಜನಿಗೆ ಮದುವೆ ಕುರಿತು ಎಲ್ಲರು ವ್ಯಂಗ್ಯ ಮಾಡುತ್ತಿದ್ದರು ಆದರೆ ಇಂದು ಅವನಿಗೆ ಮದುವೆಯಾಗಿದ್ದು ಇಡಿ ಗ್ರಾಮಸ್ಥರಿಗೆ ಸಂತಸ ತಂದಿದೆ. –ಟಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.