ಬಾಯಕ್ಕ ಮೇಟಿ ನೇತೃತ್ವದ ಪ್ಯಾನೆಲ್‌ಗೆ ಗೆಲುವು
Team Udayavani, Dec 23, 2019, 11:40 AM IST
ಬಾಗಲಕೋಟೆ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ತೀವ್ರ ತುರುಸಿನಿಂದ ನಡೆದ ಕರ್ನಾಟಕ ಪ್ರದೇಶ ಕುರುಬರ ಸಂಘದ ನಾಲ್ವರು ನಿರ್ದೇಶಕರ ಸ್ಥಾನಕ್ಕೆ ರವಿವಾರ ನಡೆದ ಚುನಾವಣೆಯಲ್ಲಿ ಜಿಪಂ ಅಧ್ಯಕ್ಷೆ ಗಂಗೂಬಾಯಿ (ಬಾಯಕ್ಕ) ಮೇಟಿ ನೇತೃತ್ವದ ಗುಂಪು ಭರ್ಜರಿ ಗೆಲುವು ಸಾಧಿಸಿದೆ.
ಸಾಮಾನ್ಯ ಮಹಿಳಾ ನಿರ್ದೇಶಕ ಸ್ಥಾನಕ್ಕೆ ಬಾಯಕ್ಕ ಮೇಟಿ (1181 ಮತ), ಸಾಮಾನ್ಯ ಸ್ಥಾನಗಳಿಗೆ ಶ್ರೀಶೈಲ ದಳವಾಯಿ (1038), ಡಿ.ಬಿ. ಸಿದ್ದಾಪುರ (743), ಹನಮಂತ ಅಪ್ಪನ್ನವರ (720) ಮತಗಳನ್ನು ಪಡೆದು ಅಯ್ಕೆಯಾಗಿದ್ದಾರೆ. ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಗೆ ಒಟ್ಟು 12 ಜನ ಸ್ಪರ್ಧೆ ಮಾಡಿದ್ದರು. ಕುರುಬರ ರಾಜ್ಯ ಸಂಘಕ್ಕೆ ಜಿಲ್ಲೆಯಿಂದ ನಾಲ್ವರು ನಿರ್ದೇಶಕರನ್ನು ಆಯ್ಕೆ ಮಾಡಬೇಕಿತ್ತು. ರವಿವಾರ ನವನಗರದ ಕಾಳಿದಾಸ ಕಾಲೇಜ್ ನಲ್ಲಿ ನಡೆದ ಮತದಾನದಲ್ಲಿ ಸಂಘದ ಸದಸ್ಯತ್ವದ ಜತೆಗೆ ಮತದಾನದ ಹಕ್ಕು ಹೊಂದಿದ್ದ ಸಮಾಜದ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಜಿಲ್ಲೆಯ ಕುರುಬ ಸಮಾಜದ ಮತದಾನ ಹಕ್ಕು ಹೊಂದಿರುವ ಮತದಾರರು, ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುವುದು ಕಂಡು ಬಂತು.
ಕುರುಬರ ಸಂಘದ ನಾಲ್ಕು ನಿರ್ದೇಶಕ ಸ್ಥಾನಕ್ಕೆ ಜಿಪಂ ಅಧ್ಯಕ್ಷೆಯೂ ಆಗಿರುವ ಬಾಯಕ್ಕ ಮೇಟಿ, 2ನೇ ಬಾರಿ ಸ್ಪರ್ಧೆ ಮಾಡಿದ್ದು, ಬಾಯಕ್ಕ ಮೇಟಿ ನೇತೃತ್ವದ ಪ್ಯಾನೆಲ್‌ನಲ್ಲಿ ಶ್ರೀಶೈಲ ದಳವಾಯಿ, ಹನಮಂತ ಅಪ್ಪನ್ನವರ, ಡಿ.ಬಿ. ಸಿದ್ದಾಪುರ ಸ್ಪರ್ಧಿಸಿದ್ದರು. ಸಾಮಾಜಿಕ ಕಾರ್ಯಕರ್ತೆ ಸುವರ್ಣಾ ನಾಗರಾಳ, ಸಿದ್ದಪ್ಪ ಸೂಳಿಬಾವಿ, ಸಿದ್ದು ದೇವಗೋಳ ಹಾಗೂ ಯಮನಪ್ಪ ನಿಂಬಲಗುಂದಿ ಅವರು ಮತ್ತೂಂದು ಗುಂಪು ರಚಿಸಿಕೊಂಡು ಕಣಕ್ಕಿಳಿದ್ದರು. ಈ ಎರಡು ಗುಂಪುಗಳಲ್ಲದೇ ರೈತ ಚಳವಳಿ ಮೂಲಕ ಜಿಲ್ಲೆಯಲ್ಲಿ ಗುರುತಿಸಿಕೊಂಡಿರುವ ಯಲ್ಲಪ್ಪ ಹೆಗಡ್ಯಾರ (ಯಲ್ಲಪ್ಪ ಹೆಗಡೆ), ಚಂದಪ್ಪ ಹೂಲಗೇರಿ, ರೇವಣಸಿದ್ದ ಭೀಮಪ್ಪ ಕುರುಬರ, ಹನಮಂತ ಗೊರವರ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.