ಜೋಡಿ ಶ್ವಾನದೊಂದಿಗೆ ಪ್ರವಾಹ ದಾಟಿದ ಯುವಕ
Team Udayavani, Aug 7, 2019, 8:53 PM IST
ಬಾಗಲಕೋಟೆ : ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಘಟಪ್ರಭಾ ನದಿಗೆ 1.72 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಘಟಪ್ರಭಾ ನದಿ ತುಂಬಿ, ಅತಿ ರಭಸವಾಗಿ ಹರಿಯುತ್ತಿದೆ. ತುಂಬಿ ಹರಿಯುತ್ತಿದ್ದ ನದಿಯಲ್ಲೇ ಓರ್ವ ಯುವಕ ಹಾಗೂ ಎರಡು ಶ್ವಾನಗಳು ಯಾದವಾಡ- ಮುಧೋಳ ನಡುವಿನ ಸೇತುವೆ ದಾಟಿ ಗಮನ ಸೆಳೆದಿವೆ.
ಮುಧೋಳ - ಯಾದವಾಡ ಸಂಪರ್ಕ ಸೇತುವೆ ಮುಳುಗಿ ಸೇತುವೆ ಮೇಲೆ ನೀರು ಹರಿಯುತ್ತಿರುವಾಗ ಮುಧೋಳದಿಂದ ಯಾದವಾಡದ ಕಡೆಗೆ ಎರಡು ನಾಯಿಗಳು ಸೇತುವೆ ಮಧ್ಯೆ ಭಾಗದಿಂದ ಈಜಿ ದಡಸೇರಿದವು. ಅಲ್ಲದೇ ಇದೇ ಸಂದರ್ಭದಲ್ಲಿ ಯಾದವಾಡದ ಕಡೆಯಿಂದ ಮುಧೋಳ ಕಡೆಗೆ ಸೇತುವೆಯ ಬದಿಯ ಕಂಬಗಳನ್ನು ಆಸರೆಯನ್ನಾಗಿ ಹಿಡಿದುಕೊಂಡು ಬಂದ ಯುವಕ ಗಮನ ಸೆಳೆದ. ಈ ಕಡೆಗೆದಾಟಿ ಬಂದ ತಕ್ಷಣ ಪೋಲಿಸರು ತರಾಟೆಗೆ ತೆಗೆದುಕೊಂಡ ತಕ್ಷಣ ಹೆದರಿದ ಯುವಕ ತನ್ನ ಹೆಸರನ್ನೂ ಹೇಳದೆ ತುರ್ತು ಕೆಲಸವಿತ್ತೆಂದು ಅಲ್ಲಿಂದ ತೆರಳಿದ.
ನಗರಸಭೆ ಸಿಬ್ಬಂದಿ ರಕ್ಷಿಸಿದ ಸೈನಿಕರು :
ರಬಕವಿ ಬನಹಟ್ಟಿ ತಾಲೂಕಿನ ಹಿಪ್ಪರಗಿ ಸೇತುವೆ ಬಳಿ ಕೃಷ್ಣಾ ನದಿಯಲ್ಲಿದ್ದ ಜಾಕವೆಲ್ ಗಳು ನೀರಿನಲ್ಲಿ ಮುಳುಗಿದ್ದು, ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಗರಸಭೆ ಸಿಬ್ಬಂದಿ ಪ್ರವಾಹದಲ್ಲಿ ಸಿಲುಕಿದ್ದರು. ಎನ್.ಡಿ.ಆರ್.ಎಫ್ ಸೈನಿಕರು ಧಾವಿಸಿ, ಮೂವರು ನಗರಸಭೆ ಸಿಬ್ಬಂದಿಯನ್ನು ಸುರಕ್ಷಿತವಾಗಿ ತಡಕ್ಕೆ ಕರೆ ತಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ
Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ
JDS protest: ಎಚ್‌ಡಿಕೆ ಕರಿಯ: ಜಮೀರ್ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ
Congress: “40 ಪರ್ಸೆಂಟ್ ಸಿಎಂ’ಗೆ ಸಾಕ್ಷಿ ಕೊಟ್ಟಿದ್ರ್ಯಾ?: ಸಿಎಂಗೆ ಸಿ.ಟಿ. ರವಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.