ಹೊಸ ಮರಳು ನೀತಿ ಜಾರಿಗೆ ಕ್ರಮ
Team Udayavani, Mar 3, 2021, 6:24 PM IST
ಬಾಗಲಕೋಟೆ: ಬಡ ಜನರ ಕೈಗೆಟಕುವ ದರದಲ್ಲಿ ಮರಳು ಒದಗಿಸಿದಲ್ಲಿ ಕಡಿಮೆ ಖರ್ಚಿನಲ್ಲಿ ಮನೆ ನಿರ್ಮಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಹೊಸ ಮರಳು ನೀತಿ ಜಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಮುರುಗೇಶ ನಿರಾಣಿ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದೆಲ್ಲೆಡೆ ಅನಧಿಕೃತವಾಗಿ ಮರಳು ಹಾಗೂ ಜಲ್ಲಿಕಲ್ಲು ಸಾಗಾಣಿಕೆ ಮಾಡಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಬರುವ ಆದಾಯ ಪೋಲಾಗುತ್ತಿದ್ದು, ನಿಯಂತ್ರಣ ಮಾಡಿದಷ್ಟು ಅನಧಿಕೃತ ಗಣಿಗಾರಿಕೆಹೆಚ್ಚಾಗುತ್ತಿದೆ. ಮರಳು ಕಡಿಮೆ ದೊರೆಯುವಂತೆಮಾಡಿದಲ್ಲಿ ಸಾಮಾನ್ಯ ಜನರಿಗೆ ಕಡಿಮೆ ಖರ್ಚಿನಲ್ಲಿಮನೆ ನಿರ್ಮಿಸಲು ಅನುಕೂಲವಾಗಲಿದೆ ಎಂದರು. ಹೊಸ ನೀತಿಯನ್ವಯ ಟ್ಯಾಕ್ಟರ್, ಎತ್ತಿನ ಬಂಡಿ,ದ್ವಿಚಕ್ರ ವಾಹನ, ಮರಳು ಸಾಗಣೆ ಮಾಡಿದರೆ ಕೇಸ್‌ದಾಖಲಿಸುವಂತಿಲ್ಲ. ಬೇರೆ ಜಿಲ್ಲೆಗಳಿಗೆ ಸಾಗಾಣಿಕೆಮಾಡಿದರೆ ಮಾತ್ರ ಕೇಸ್ ದಾಖಲಿಸಲಾಗುವುದು.10 ಲಕ್ಷ ರೂ.ಗಳ ಒಳಗೆ ನಿರ್ಮಿಸುತ್ತಿರುವಮನೆಗಳಿಗೆ ಇದು ಅನ್ವಯವಾಗಲಿದೆ ಎಂದರು.
ಜಿಲ್ಲೆಯಲ್ಲಿ ಜೆಲ್ಲಿ ಕ್ರಷರ್ ಘಟಕಗಳು 16 ಮಾತ್ರ ಚಾಲ್ತಿಯಲ್ಲಿದ್ದು, ನಮೂನೆ ಡಿ ವಿತರಿಸಿದ 29 ಜೆಲ್ಲಿ ಕ್ರಷರ್ ಘಟಕಗಳಿಗೆ ಅಧಿಕಾರಿಗಳು ಪರಿಶೀಲನೆನಡೆಸಿ ಬೇಗನೆ ಅನುಮತಿ ನೀಡಬೇಕು. ಏಕೆಂದರೆಘಟಕ ಸ್ಥಾಪನೆಗೆ ಬ್ಯಾಂಕ್‌ಗಳ ಮೂಲಕ ಸಾಲಪಡೆದಿದ್ದು, ಕಂತು ತುಂಬಲು ಸಾಧ್ಯವಾಗುತ್ತಿಲ್ಲ.ಅನುಮತಿ ತುರ್ತು ನೀಡಿದಲ್ಲಿ ಕ್ರಷರ್‌ಪ್ರಾರಂಭವಾದರೆ ಅವರಿಗೆ ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದಾಗ, ಇನ್ನು 15 ದಿನಗಳಲ್ಲಿ ಅನುಮತಿಗಾಗಿ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ.ರಾಜೇಂದ್ರ ತಿಳಿಸಿದರು.
ಜಿಲ್ಲೆಯಲ್ಲಿ ಓವರ್ ಲೋಡ್ ಆಗುತ್ತಿರುವ ಬಗ್ಗೆ ಗಣನೆಗೆ ಬಂದಿದ್ದು, ಅವುಗಳ ತಡೆಗೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯ ಹುನಗುಂದ ತಾಲೂಕಿನ ಬಲಕುಂದಿಗ್ರಾಮದಲ್ಲಿ ಮೂರು ತರಹದ ಕಲ್ಲು ಸಿಗುತ್ತಿದ್ದು,ಅವುಗಳಲ್ಲಿರುವ ವ್ಯತ್ಯಾಸದಿಂದ ಹೆಚ್ಚಿನ ಲಾಭವಾಗಲಿದ್ದು, ಬೇರೆಡೆ ರಫ್ತು ಮಾಡುವಾಗ ಗಣನೆಗೆ ತೆಗೆದುಕೊಳ್ಳಲು ತಿಳಿಸಿದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕ ರೋಹಿತ ಮಾತನಾಡಿ, 2 ಕಬ್ಬಿಣಅದಿರಿನ ಘಟಕ, 28 ಕ್ವಾರಿ, 21 ಪಿಂಕ್ ಗ್ರಾನೈಟ್ಸ್,15 ಮರಳು ಘಟಕ, 13 ಬಿಲ್ಡಿಂಗ್ ಸ್ಟೋನ್, 16ಜೆಲ್ಲಿ ಕ್ರಷರ್‌ಗಳು ಚಾಲ್ತಿಯಲ್ಲಿವೆ. ನವೀಕರಣಕ್ಕೆಬಂದ ಅರ್ಜಿಗಳನ್ನು ತುರ್ತಾಗಿ ಪರಿಶೀಲಿಸಿ ಅನುಮತಿಗೆ ಕ್ರಮ ವಹಿಸುವುದಾಗಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಪಂ ಸದಸ್ಯ ಹೂವಪ್ಪ ರಾಠೊಡ, ಗಣಿಮತ್ತು ಭೂ ವಿಜ್ಞಾನ ಇಲಾಖೆಯ ಎಂಜಿನಿಯರ್ ಶಿವಶಂಕರಿ ಮುಂತಾದವರು ಇದ್ದರು.
ಜಿಲ್ಲೆಯಲ್ಲಿ ಜೆಲ್ಲಿ ಕ್ರಷರ್ ಘಟಕಗಳು16 ಮಾತ್ರ ಚಾಲ್ತಿಯಲ್ಲಿದ್ದು,ನಮೂನೆ ಡಿ ವಿತರಿಸಿದ 29 ಜೆಲ್ಲಿ ಕ್ರಷರ್ ಘಟಕಗಳಿಗೆ ಅಧಿಕಾರಿಗಳು ಪರಿಶೀಲನೆನಡೆಸಿ ಬೇಗನೆ ಅನುಮತಿ ನೀಡಬೇಕು. ಏಕೆಂದರೆ ಘಟಕ ಸ್ಥಾಪನೆಗೆ ಬ್ಯಾಂಕ್‌ಗಳ ಮೂಲಕ ಸಾಲ ಪಡೆದಿದ್ದು, ಕಂತು ತುಂಬಲು ಸಾಧ್ಯವಾಗುತ್ತಿಲ್ಲ. ಅನುಮತಿ ತುರ್ತು ನೀಡಿದಲ್ಲಿ ಕ್ರಷರ್ ಪ್ರಾರಂಭವಾದರೆ ಅವರಿಗೆ ಅನುಕೂಲವಾಗಲಿದೆ. – ಮುರುಗೇಶ ನಿರಾಣಿ, ಗಣಿ ಮತ್ತು ಭೂ ವಿಜ್ಞಾನ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.