ಮನ್ನಿಕಟ್ಟಿ ಕೆರೆ ಪುನಶ್ಚೇತನಕ್ಕೆ ಕ್ರಮ: ಡಿಸಿ ರಾಜೇಂದ್ರ
ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ
Team Udayavani, Apr 17, 2022, 12:19 PM IST
ಬಾಗಲಕೋಟೆ: ತಾಲೂಕಿನ ಬೆಟ್ಟದ ಕೆಳಗೆ ಇರುವ ಪುಟ್ಟ ಗ್ರಾಮ ಮನ್ನಿಕಟ್ಟಿಯಲ್ಲಿ ಮಳೆಯ ನೀರಿನ ಮೇಲೆ ಅವಲಂಭಿತವಾಗಿದ್ದು, ಆ ನೀರನ್ನು ಶೇಖರಿಸಿಟ್ಟುಕೊಳ್ಳಲು ಈ ಮೊದಲೇ ಇದ್ದ ಕೆರೆ ಸ್ಥಳವನ್ನು ಪುನಃಶ್ಚೇತನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ| ಕೆ.ರಾಜೇಂದ ಹೇಳಿದರು.
ಮನ್ನಿಕಟ್ಟಿ ಗ್ರಾಮದಲ್ಲಿ ತಾಲೂಕು ಅಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ಗ್ರಾಮಕ್ಕೆ ಆಗಮಿಸುತ್ತಿರುವಾಗ ಪಾಳುಬಿದ್ದ ಕೆರೆಯನ್ನು ಗಮನಸಿದ ಜಿಲ್ಲಾಧಿಕಾರಿಗಳು ಸಣ್ಣ ನೀರಾವರಿ ಇಲಾಖೆ ಮೂಲಕ ಕೆರೆ ತುಂಬಿಸುವ ಕಾರ್ಯವನ್ನು ಮಾಡುವುದಾಗಿ ಗ್ರಾಮಸ್ಥರಿಗೆ ತಿಳಿಸಿದರು.
ಕೇವಲ 2565 ಜನಸಂಖ್ಯೆಯುಳ್ಳ, 393 ಕುಟುಂಬ, 73 ಸರ್ವೆ ನಂಬರ, 1100 ಎಕರೆ ಜಮೀನು ಹಾಗೂ ಎರಡು ಅಂಗನವಾಡಿ ಕೇಂದ್ರ, ಒಂದು ಸರಕಾರಿ ಪ್ರಾಥಮಿಕ ಶಾಲೆಗಳನ್ನೊಳಗೊಂಡ ಈ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿಸಲು ಎಲ್ಲ ರೀತಿಯ ಕ್ರಮಕೈಗೊಳ್ಳಲಾಗುವುದು. ಕಂದಾಯ ವ್ಯಾಪ್ತಿಗೆ ಬರುವ ಸೌಲಭ್ಯ ಒದಗಿಸಲಾಗುತ್ತದೆ. ಈ ಗ್ರಾಮದಲ್ಲಿರುವ ಸ್ಮಶಾನ ಭೂಮಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸುತ್ತಲೂ ಕೌಂಪೌಂಡ್ ಹಾಗೂ ಶವ ಸಂಸ್ಕಾರ ಸ್ಥಳದಲ್ಲಿ ಟೆಂಟ್ ನಿರ್ಮಾಣ ಮಾಡಲು ಕ್ರಮ ವಹಿಸಲಾಗುವುದು ಎಂದರು.
ಅಲ್ಲದೇ ಗ್ರಾಮಸ್ಥರು ಸಲ್ಲಿಸಿ ಪ್ರತಿಯೊಂದು ಅಹವಾಲುಗಳನ್ನು ಆಲಿಸಿದರು. ಗ್ರಾಮಸ್ಥರು ರಸ್ತೆ ಅಗಲೀಕರಣ, ಗ್ರಾಮದಲ್ಲಿ ಗ್ರಂಥಾಲಯ ಸ್ಥಾಪನೆ, ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡ ವಿದ್ಯಾರ್ಥಿವೇತನ, ವಿಧವಾ ವೇತನ, ಸಂಸ್ಥಾ ಸುರಕ್ಷಣಾ ವೇತನ, ಮನ್ನಿಕಟ್ಟಿಯಿಂದ ಭಗವತಿ ವರೆಗೆ ರಸ್ತೆ ಡಾಂಬರೀಕರಣ, ಗ್ರಾಮದಲ್ಲಿರುವ ಸಮುದಾಯ ಭವನ ಆರ್‌ಸಿಸಿ ಮೇಲ್ಚಾವಣಿ ಸೇರಿದಂತೆ ಇತರೆ ಅಹವಾಲುಗಳನ್ನು ಜಿಲ್ಲಾಧಿಕಾರಿಗಳ ಮುಂದಿಟ್ಟಾಗ ಸ್ಥಗಿತಗೊಂಡ ವಿದ್ಯಾರ್ಥಿ ವೇತನಕ್ಕೆ ಒಂದು ತಿಂಗಳಲ್ಲಿ ಸರಿಪಡಿಸುವಂತೆ ಅಧಿಕಾರಿಗಳು ಸೂಚನೆ ನೀಡಿದರು.
ಕಂದಾಯ ಇಲಾಖೆಗೆ ಸಂಬಂಧಿಸಿದ ಅಹವಾಲುಗಳ ಇತ್ಯರ್ಥಕ್ಕೆ ತಹಶೀಲ್ದಾರ್‌ಗೆ ಸೂಚಿಸಿದರು. ಶಾಲೆಗೆ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದರು.
ಕೊರೊನಾ ನಾಲ್ಕನೇ ಅಲೆ ಪ್ರಾರಂಭವಾಗಿದ್ದು, ಬೇರೆ ದೇಶಗಳನ್ನು ಗಮನಿಸಿದಾಗ ದೇಶ, ರಾಜ್ಯ ಹಾಗೂ ಜಿಲ್ಲೆಯಲ್ಲಿ ಎಲ್ಲ ರೀತಿಯ ಕ್ರಮಕೈಗೊಳ್ಳುವ ಮೂಲಕ ಸನ್ನದ್ಧರಾಗಿದ್ದೇವೆ. ಗ್ರಾಮದ ಐತನ ಸರ್ವೇ ನಂ.42ರ ಜಮೀನಿನ ಬೆಳೆ ಸಮೀಕ್ಷೆ ಆಗದೇ ಇರುವ ಬಗ್ಗೆ ದೂರು ಆಲಿಸಿದ ಜಿಲ್ಲಾಧಿಕಾರಿಗಳು ತಾಂತ್ರಿಕ ಸಮಸ್ಯೆಯಿಂದ ಈ ರೀತಿಯಾಗಿದ್ದು, ಇದನ್ನು ಕೂಡಲೇ ಕ್ರಮ ವಹಿಸಲು ತಹಶೀಲ್ದಾರ್ ಗೆ ಸೂಚಿಸಿದರು.
ಗ್ರಾಮಸ್ಥರ ವಿಶೇಷವಾಗಿ ಮನವಿ ಮಾಡಿಕೊಂಡ ಜಿಲ್ಲಾಧಿಕಾರಿ ಈ ಭಾಗದ ನೀರಾವರಿ ಕಾರ್ಯಕ್ಕೆ ಕಾಲುವೆ ನಿರ್ಮಾಣಕ್ಕೆ ಕಾರ್ಯ ಪ್ರಾರಂಭವಾಗುವುದರಿಂದ ಚಿಕ್ಕಪುಟ್ಟ ಸಮಸ್ಯೆಗಳನ್ನು ಗ್ರಾಮದಲ್ಲಿಯೇ ಬಗೆಹರಿಸಿಕೊಂಡು ನೀರಾವರಿಗೆ ಆದ್ಯತೆ ನೀಡಿ ಸಂಪೂರ್ಣ ನೀರಾವರಿ ಗ್ರಾಮವಾಗಿಸಿಕೊಳ್ಳಲು ತಿಳಿಸಿದರು. ನಂತರ ಜಿಲ್ಲಾಧಿಕಾರಿಗಳು ಗ್ರಾಮಸ್ಥರ ಕುಂದು ಕೊರತೆ ಗಮನಿಸಲು ಖುದ್ದಾಗಿ ಗ್ರಾಮ ಸಂಚಾರ ನಡೆಸಿದರು. ಗ್ರಾಮ ಸಂಚಾರದಲ್ಲಿ ಸ್ಮಶಾನ ಜಾಗ, ರಸ್ತೆ, ಕುಡಿಯುವ ನೀರು, ಚರಂಡಿ ಸೇರಿದಂತೆ ಇತರೆ ಮೂಲಭೂತ ಸೌಲಭ್ಯವೀಕ್ಷಿಸಿದರು. ಚರಂಡಿ ಗ್ರಾಮದ ಸ್ವತ್ಛತೆ ಕೈಗೊಳ್ಳಲು ಸೂಚಿಸಿದರು.
ಬೆನಕಟ್ಟಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ವಿ.ಪಿ. ಯಡಹಳ್ಳಿ, ಸದಸ್ಯರಾದ ಮಲ್ಲಪ್ಪ ಜಮುನಾಳ, ಮುತ್ತಪ್ಪ ಹುನಸಿಕಟ್ಟಿ, ಪಾರ್ವತೆವ್ವ ಮಾದರ, ಹನಮಂತ ಪಲ್ಲೇದ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಡಿಡಿಎಲ್ ಆರ್ ಮಹಾಂತೇಶ ಮುಳಗುಂದ, ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.