ಆರೋಗ್ಯಮೇಳ ಪ್ರಯೋಜನ ಪಡೆಯಲು ಸಲಹೆ
Team Udayavani, Apr 20, 2022, 12:36 PM IST
ಜಮಖಂಡಿ: ಜನರು ಅನೇಕ ಕಾಯಿಲೆಗಳಿಂದ ಆರೋಗ್ಯದ ತೊಂದರೆ ಅನುಭವಿಸುತ್ತಿದ್ದಾರೆ. ಸರಕಾರ ಜನರ ಹಿತ ಕಾಪಾಡಲು ಉಚಿತ ಆರೋಗ್ಯಮೇಳ ನಡೆಸಬೇಕೆಂದು ಸೂಚನೆ ನೀಡಿದೆ. ಸಾರ್ವಜನಿಕರು ಉಚಿತ ಆರೋಗ್ಯ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ಸರಕಾರಿ ಪಿ.ಬಿ. ಹೈಸ್ಕೂಲ್ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನದ ಸಹಯೋಗದಲ್ಲಿ 75ನೇ ವರ್ಷದ ಅಮೃತ ಮಹೋತ್ಸವದ ತಾಲೂ ಕುಮಟ್ಟದ ಉಚಿತ ಆರೋಗ್ಯಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮನೆಗಳಲ್ಲಿ ಶುಚಿಯಾದ ತಿಂಡಿ ತಿನಿಸುಗಳನ್ನು ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಆರೋಗ್ಯದ ತೊಂದರೆ ಅನುಭವಿಸುತ್ತಿರುವ ಜನರು ಉಚಿತ ಆರೋಗ್ಯಮೇಳದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ತಾಲೂಕು ವೈದ್ಯಾಧಿಕಾರಿ ಡಾ|ಜಿ. ಎಸ್.ಗಲಗಲಿ ಮಾತನಾಡಿ, ಕೇಂದ್ರ- ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಆರೋಗ್ಯಮೇಳ ಹಮ್ಮಿಕೊಳ್ಳಲಾಗಿದೆ. ವಿವಿಧ ರೋಗಗಳಿಗೆ ಸಂಬಂಧಿತ ವೈದ್ಯರು, ತಜ್ಞರು, ವೈದ್ಯಕೀಯ ಕಾಲೇಜು ಆರೋಗ್ಯ ಸಿಬ್ಬಂದಿಯವರು ಉಚಿತವಾಗಿ ಜನರ ಆರೋಗ್ಯ ತಪಾಸಣೆ ಮಾಡಲಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನರ ಆರೋಗ್ಯದ ಸೇವೆಗೆ ಸರ್ಕಾರಿ ಯೋಜನೆಗಳನ್ನು ಬಳಕೆ ಮಾಡಲಾಗಿದೆ. ಟೆಲಿಮೆಡಿಕಲ್, ಆಯುಷ್ಮಾನ್ ಭಾರತ್-ಇ- ಸಂಜೀವಿನಿ ಆರೋಗ್ಯ ಸೇವೆಗಳನ್ನು ಜನರು ಪಡೆದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಆರಕ್ಕೂ ಹೆಚ್ಚು ಆರೋಗ್ಯದ ಮಳಿಗೆಗಳ ಮೂಲಕ ಆರೋಗ್ಯ, ಅಂಗನವಾಡಿ, ಆಶಾ, ಸಂಘ-ಸಂಸ್ಥೆಗಳವರು ಜನರಿಗೆ ಆರೋಗ್ಯ, ಪೌಷ್ಟಿಕ ಆಹಾರ, ತರಕಾರಿಗಳ, ಹಣ್ಣು, ಸಿರಿಧಾನ್ಯಗಳ ಮಾಹಿತಿ ನೀಡುವ ವಿವಿಧ ರೋಗಗಳ ಹರಡುವಿಕೆ ಕುರಿತು ಜಾಗೃತಿ ಮೂಡಿಸಿದರು.
ವೇದಿಕೆಯಲ್ಲಿ ಹಿರಿಯ ತಜ್ಞ ಡಾ| ಎಚ್.ಜಿ.ದಡ್ಡಿ, ತಹಶೀಲ್ದಾರ್ ಪ್ರಶಾಂತ ಚನಗೊಂಡ, ತಾಪಂ ಅಧಿ ಕಾರಿ ಶ್ರವಣ ನಾಯಕ, ಸರಕಾರಿ ಮುಖ್ಯ ವೈದ್ಯಾಧಿ ಕಾರಿ ಡಾ| ವೆಂಕಟರಾಜು, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಯಮನೂರ ಮೂಲಂಗಿ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.