ಗೋವಿನ ಜೋಳದ ಬೆಳೆಗೆ ಸೈನಿಕ ಹುಳುವಿನ ಬಾಧೆ
ಎಲೆಗಳನ್ನು ತಿಂದು ಗಟ್ಟಿಯಾದ ಹಿಕ್ಕೆಗಳನ್ನು ಎಲೆಗಳ ಮೇಲೆ ಮತ್ತು ಸುಳಿಯಲ್ಲಿ ಕಾಣಬಹುದು
Team Udayavani, Aug 3, 2021, 6:24 PM IST
ಬಾಗಲಕೋಟೆ: ಜಿಲ್ಲೆಯ ವಿವಿಧ ತಾಲೂಕಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆದಿರುವ ಗೋವಿನ ಜೊಳದ ಬೆಳೆಯಲ್ಲಿ ಪರಕೀಯ ಹಾಗೂ ಆಕ್ರಮಣಕಾರಿ ಕೀಟ ನ್ಪೋಡಾಪ್ಟೀರಾ ಫ್ರೂಜಿಫೆರಡಾ ಹಾವಳಿ ಕಂಡುಬಂದಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದ್ದಾರೆ.
ಈ ಕೀಟವು ಬೆಳೆಯ ಸುಳಿಯಲ್ಲಿ ಇದ್ದು, ಹಗಲು ರಾತ್ರಿ ಇಡೀ ಚಟುವಟಿಕೆಯಿಂದ ಕೂಡಿದ್ದು ಎಲೆ ತಿನ್ನುತ್ತಾ ಹಾನಿ ಮಾಡುತ್ತಿದೆ. ಈ ಕೀಟವು ಲೆಪಿಡಾಪ್ಟೀರಾ ಗುಂಪಿಗೆ ಸೇರಿದ್ದು ಅಂತಾರಾಷ್ಟೀಯವಾಗಿ ಕೀಟ ತಜ್ಞರು ಇದನ್ನು ಫಾಲ್ ಆರ್ಮಿವರ್ಮ ಎಂದು ಗುರುತಿಸುತ್ತಾರೆ. ಈ ಕೀಟವು ವಿಶೇಷವಾಗಿ ಆಹಾರ ಧಾನ್ಯಗಳ ಬೆಳೆಗಳಾದ ಗೋವಿನ ಜೋಳ, ಜೋಳ ಹಾಗೂ ಇತರ ಬೆಳೆಗಳನ್ನು ಬಾಧಿಸುತ್ತಿದೆ.
ಸದ್ಯದ ಪರಿಸ್ಥಿತಿಯಲ್ಲಿ ಮೋಡ ಕವಿದ ಹಾಗೂ ತುಂತುರ ಮಳೆಯಿಂದ ಕೂಡಿದ ವಾತಾವರಣ ಇರುವುದರಿಂದ ಈ ಕೀಟದ ಪಸರಿಸಿರುವಿಕೆ ಇನ್ನೂ ಹೆಚ್ಚಾಗಿರುತ್ತದೆ. ಈ ಕೀಟವು ತನ್ನ ಜೀವನ ಚಕ್ರವನ್ನು 30-40 ದಿವಸಗಳಲ್ಲಿ ಪೂರ್ಣಗೊಳಿಸಬಲ್ಲದಾಗಿದ್ದು ಪ್ರೌಢ ಪತಂಗವು ಒಂದು ರಾತ್ರಿಯಲ್ಲಿ ಕನಿಷ್ಠ 100 ಕಿ.ಮೀ ದೂರವನ್ನು ಕ್ರಮಿಸಬಲ್ಲದು ಎಂದು ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರಜ್ಞ ಡಾ| ಅರ್ಜುನ ಸೂಲಗಿತ್ತಿ ತಿಳಿಸಿದ್ದಾರೆ.
ಬಾಧೆಯ ಲಕ್ಷಣಗಳು: ತತ್ತಿಯಿಂದ ಹೊರಬಂದ ಮರಿಹುಳುಗಳು ಸಮೂಹವಾಸಿಯಾಗಿದ್ದು ಮೊದಲು ಮೊಟ್ಟೆಯ, ತತ್ತಿಯ ಸಿಪ್ಪೆಯನ್ನೆ ತಿಂದು ಬದುಕುತ್ತವೆ. ತದನಂತರ ಗೋವಿನ ಜೋಳದ ಸುಳಿಯಲ್ಲಿ ಉಳಿದುಕೊಂಡು ಸಸ್ಯಗಳ ಹರಿತ್ತನ್ನು ಕೆರೆದು ತಿಂದು ಬದುಕುತ್ತವೆ. ಇಂತಹ ಎಲೆಗಳು ಜಾಳು ಜಾಳಾಗಿದ್ದು ಅಸ್ಥಿಪಂಜರದಂತೆ ಗೋಚರಿಸಿ ಎಲೆಗಳಲ್ಲಿ ದೊಡ್ಡ ದೊಡ್ಡ ಹಾಗೂ ಸಾಲಿನಲ್ಲಿರುವ ಕಿಡಕಿಗಳನ್ನು ಅಥವಾ ರಂಧ್ರಗಳನ್ನು ಕೊರೆಯುತ್ತದೆ. ನಂತರದ ದಿನಗಳಲ್ಲಿ ಮರಿಗಳು ದೊಡ್ಡವಾದಾಗ ಸುಳಿ ಮತ್ತು ಎಲೆಗಳನ್ನು ತಿಂದು ಗಟ್ಟಿಯಾದ ಹಿಕ್ಕೆಗಳನ್ನು ಎಲೆಗಳ ಮೇಲೆ ಮತ್ತು ಸುಳಿಯಲ್ಲಿ ಕಾಣಬಹುದು.
ಸಮಗ್ರ ಕೀಟ ನಿರ್ವಹರ್ಣಾ ಕ್ರಮಗಳು: ಬೆಳೆ ಕಟಾವಾದ ನಂತರ ಮಾಗಿ ಉಳುಮೆ ಮಾಡುವುದರಿಂದ ಕೋಶಗಳನ್ನು ಮಣ್ಣಿನ ಮೇಲ್ಪದರಕ್ಕೆ ತಂದು ಹಕ್ಕಿಗಳಿಗೆ ಹಾಗೂ ಬಿಸಿಲಿನ ಪ್ರಖರತೆಗೆ ಒಡ್ಡಿ ನಿಯಂತ್ರಿಸಬಹುದು. ಶಿಫಾರಸು ಮಾಡಿದ ಅವಧಿಯಲ್ಲಿ ಬಿತ್ತನೆ ಕಾರ್ಯಕ್ರಮ ಪೂರ್ಣಗೊಳಿಸುವುದು. ಹಂತ ಹಂತವಾಗಿ ಬಿತ್ತನೆಯಾದಲ್ಲಿ ಕೀಟಕ್ಕೆ ನಿರಂತರವಾಗಿ ಆಹಾರ ಲಭ್ಯವಾಗಲಿದ್ದು, ಹಲವಾರು ಸಂತತಿಗಳನ್ನು ಬೆಳೆಯ ಹಂತದಲ್ಲಿ ಕಾಣಬಹುದು, ಇದರಿಂದ ನಷ್ಟದ ಪ್ರಮಾಣ ಹೆಚ್ಚಾಗುವುದು. ಮೋಹಕ ಬಲೆಗಳನ್ನು ಪ್ರತಿ ಎಕರೆಗೆ 10-12ರಂತೆ ಹಾಕಿ ಚಿಟ್ಟೆಗಳನ್ನು ಆಕರ್ಷಿಸಿ ನಾಶಪಡಿಸಬೇಕು ಮತ್ತು ಪೀಡೆ ಸಮೀಕ್ಷೆ ಕೈಗೊಂಡು ಕೀಟದ ಉಪಸ್ಥಿ ಮತ್ತು ಹರಡುವಿಕೆ ಬಗ್ಗೆ ನಿಗಾ ವಹಿಸುವುದು.
ಕೀಟಬಾಧೆ ತಿವ್ರತೆ ಕಡಿಮೆ ಇದ್ದಾಗ ಅಥವಾ ಮರಿಹುಳುಗಳ ನಿರ್ವಹಣೆಗೆ ಜೈವಿಕ ಕೀಟನಾಶಕವಾದ ನೊಮೊರಿಯಾ ರಿಲೈಯೆ, ಶಿಲೀಂಧ್ರವನ್ನು 2 ಗ್ರಾಂ ಅಥವಾ
ಬ್ಯಾಸಿಲಸ್ ಥುರಿಂಜಿಯಸ್ 2 ಗ್ರಾಂ ಅಥವಾ ಶೇ 5 ರ ಬೇವಿನ ಬೀಜದ ಕಷಾಯ, ಅಜಾಡಿರೆಕ್ಟಿನ 1500 ಪಿಪಿಎಮ್ 5ಮಿ.ಲೀ ಪ್ರತಿ ಲೀಟರ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು. ಕೀಟದ ಬಾಧೆ ಶೇ 10 ಕಿಂತ ಹೆಚ್ಚಿಗೆ ಇರುವಾಗ 0.25 ಗ್ರಾಂ ಇಮಾಮೆಕ್ಟಿನ್ ಬೆಂಜೋಯೇಟ್ 5% ಎಸ್.ಜಿ. ಅಥವಾ ಕೋರ್‍ಯಾಂಟ್ರಿನಿಲಿಪೊಲ್ 18.5 ಎಸ್.ಸಿ 0.2 ಮಿ.ಲೀ ಆಥವಾ ಸ್ಪಿನೋಟೊರಮ 11.7 ಎಸ್.ಸಿ 0.5 ಮಿ.ಲೀ ಪ್ರತಿ ಲೀಟರ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.