ಐಹೊಳೆ ಪ್ರವಾಸಿ ತಾಣಗಳು ಪುನರಾರಂಭ ; ಮಕ್ಕಳಿಗೆ- ವೃದ್ದರಿಗೆ ಅವಕಾಶವಿಲ್ಲ
ಇ-ಟಿಕೆಟ್ ಮೂಲಕ ವ್ಯವಹಾರ ; ಮೊದಲ ದಿನ ಪ್ರವಾಸಿಗರ ಸಂಖ್ಯೆ ಕ್ಷೀಣ
Team Udayavani, Jul 7, 2020, 1:04 AM IST
ಅಮೀನಗಡ (ಬಾಗಲಕೋಟೆ): ದೇವಾಲಯಗಳ ವಾಸ್ತುಶೈಲಿಗಳ ತೊಟ್ಟಿಲು, ಪ್ರಯೋಗಾಲಯ ಎಂದೇ ಖ್ಯಾತಿ ಪಡೆದಿರುವ ಐತಿಹಾಸಿಕ ಐಹೊಳೆ ಪ್ರವಾಸಿ ತಾಣಗಳು ಮೂರುವರೆ ತಿಂಗಳ ನಂತರ ಸೋಮವಾರ ಪುನರಾರಂಭಗೊಂಡವು.
ದೇಶದ್ಯಾಂತ ಕೋವಿಡ್ 19 ವೈರಸ್ ಭೀತಿಯಿಂದ ಲಾಕಡೌನ್ ಇದ್ದ ಹಿನ್ನೆಲೆಯಲ್ಲಿ ಮುಂಜಾಗೃತವಾಗಿ ಸರ್ಕಾರ ಐಹೊಳೆಯ ಪ್ರವಾಸಿ ತಾಣಗಳಿಗೆ ಮಾ.15ರಿಂದ ಪ್ರವಾಸಿಗರಿಗೆ ನಿರ್ಭಂದ ಮಾಡಿ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗಿತ್ತು.
ಈಗ ಲಾಕ್ ಡೌನ್ ಸಡೀಲವಾದ ಹಿನ್ನೆಲೆಯಲ್ಲಿ ಬರೋಬ್ಬರಿ 112 ದಿನಗಳ ನಂತರ ಪ್ರವಾಸಿ ತಾಣಗಳು ಪುನರಾರಂಭಗೊಂಡಿವೆ ಇದರಿಂದ ಪ್ರವಾಸಿಗರಿಗೆ ಹಾಗೂ ಪ್ರವಾಸೋದ್ಯಮವನ್ನು ನಂಬಿ ಬದುಕು ಕಟ್ಟಿಕೊಂಡ ಗೈಡ್ ಗಳಿಗೆ ಸಂತಸವಾಗಿದೆ.
ಪ್ರವಾಸಿ ತಾಣಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ ಆದರೆ ನಿರೀಕ್ಷೆಯಂತೆ (ಜು.6) ಮೊದಲ ದಿನ ಪ್ರವಾಸಿ ತಾಣಗಳಿಗೆ ಬೇಟಿ ನೀಡುವ ಪ್ರವಾಸಿಗರ ಸಂಖ್ಯೆ ತೀವ್ರ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು ಪ್ರವಾಸಿ ತಾಣಗಳಲ್ಲಿ ಕಂಡು ಬಂತು.
ಕಡ್ಡಾಯ ತಪಾಸಣೆ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಆದೇಶದಂತೆ ಜು.6 ರಂದು ಸೋಮವಾರ ಪ್ರಾರಂಭವಾದ ರಾಷ್ಟ್ರೀಯ ಐತಿಹಾಸಿಕ ಪ್ರವಾಸಿ ತಾಣ ಐಹೊಳೆಗೆ ಬೇಟಿ ನೀಡುವ ಪ್ರವಾಸಿಗರಿಗೆ ಕಡ್ಡಾಯವಾಗಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಮತ್ತು ಪ್ರವಾಸಿ ತಾಣಗಳಿಗೆ ಪ್ರವೇಶಿಸುವ ಮುನ್ನ ಸ್ಯಾನಿಟೈಸರ್ ಬಳಕೆ, ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ ಕಡ್ಡಾಯವಾಗಿ ಪ್ರತಿಯೊಬ್ಬ ಪ್ರವಾಸಿಗರನ್ನು ತಪಾಸಣೆ ಮಾಡಿ ಪ್ರವಾಸಿ ತಾಣಗಳ ಪ್ರವೇಶಕ್ಕೆ ಅವಕಾಶ ಒದಗಿಸಲಾಗಿದೆ
ಒಟ್ಟಾರೆ ಸುದೀರ್ಘ 112 ದಿನಗಳ ನಂತರ ಕುಗ್ಗಿ ಹೋಗಿದ್ದ ಪ್ರವಾಸೋದ್ಯಮ ಚೇತರಿಕೆ ಕಾಣುವ ಅವಕಾಶ ಸಿಕ್ಕಿದೆ ಮತ್ತು ಐತಿಹಾಸಿಕ ಆಕರ್ಷಣೆಯ ಪ್ರವಾಸಿ ಕೇಂದ್ರ ಐಹೊಳೆ ಓಪನ್ ಆಗಿದ್ದು ಪ್ರವಾಸಿಗರಿಗೆ ಕೈಬೀಸಿ ಕರೆಯುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.