ಅಕ್ಷರ ದಾಸೋಹ ಸಿಬ್ಬಂದಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ
Team Udayavani, Aug 12, 2020, 1:09 PM IST
ಬಾಗಲಕೋಟೆ: ಅಕ್ಷರ ದಾಸೋಹ ಯೋಜನೆಯಡಿ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಅಡುಗೆ ಮಾಡುವ ಸಿಬ್ಬಂದಿ ತಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಡಳಿತ ಭವನದ ಎದುರು ಮಂಗಳವಾರದಿಂದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಧರಣಿ ವೇಳೆ ಅಡುಗೆ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ರೇಖಾ ವಡಗೇರಿ ಮಾತನಾಡಿ, ಏಪ್ರಿಲ್ ತಿಂಗಳಿನಿಂದ ಶಾಲೆ ಆರಂಭವಾಗುವವರೆಗೆ ಅಡುಗೆ ಸಿಬ್ಬಂದಿಗೆ ವೇತನ ಪಾವತಿ ನೀಡಬೇಕು. ತಮ್ಮ ಹುದ್ದೆಗಳನ್ನು ಕಾಯಂಗೊಳಿಸಬೇಕು. ಶಾಸನಬದ್ಧ ಸೌಲಭ್ಯಗಳನ್ನು ಜಾರಿಗೊಳಿಸಿ ನಮಗೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕು. 6 ತಿಂಗಳ ವರೆಗೆ ಪಡಿತರವನ್ನು ಉಚಿತವಾಗಿ ಒದಗಿಸಬೇಕು. ಬಿಸಿಯೂಟ ನೌಕರರಿಗೆ ಲಾಕ್‌ಡೌನ್ ವೇಳೆ 7500 ರೂ ನಂತೆ ಮುಂದಿನ 6 ತಿಂಗಳವರೆಗೆ ವೇತನ ನೀಡಬೇಕು ಎಂದು ಒತ್ತಾಯಿಸಿದರು.
ಬಿಸಿಯೂಟ ತಯಾರಿಕೆ ಸಿಬ್ಬಂದಿಗೆ ಎಲ್‌ಐಸಿ ಪಿಂಚಣಿ ನಿಗದಿ ಮಾಡಬೇಕು. ಕೋವಿಡ್ -19ನ್ನು ವೈದ್ಯಕೀಯ ತುರ್ತು ಪರಿಸ್ಥಿತಿ ಎಂದು ಪರಿಗಣಿಸಿ ಹಾಗೂ ಕುಟುಂಬ ಸದಸ್ಯರ ಚಿಕಿತ್ಸೆ ವೆಚ್ಚ ಸರ್ಕಾರವೇ ಭರಿಸಬೇಕು. ಕೋವಿಡ್ ವೇಳೆ ಕ್ವಾರಂಟೈನ್‌ನಲ್ಲಿದ್ದವರಿಗೆ ಅಡುಗೆ ಮಾಡಿ ಬಡಿಸುತ್ತಿರುವ ನೌಕರರಿಗೆ ತಕ್ಚಣವೇ ವೇತನ ಪಾವತಿಯಾಗಬೇಕು ಆಗ್ರಹಿಸಿದರು.
ಸಂಘಟನೆಯ ಸಹ ಕಾರ್ಯದರ್ಶಿ ಅನುಸುಯಾ, ರಂಗಮ್ಮ, ಗೀತಾ, ಶೈಲಜಾ, ಪ್ರೇಮಾ, ಶಾಂತಾ, ಶಕುಂತಲಾ, ಸುವರ್ಣ ಧರಣಿಯ ನೇತೃತ್ವ ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahalingpur: ಎರಡು ವರ್ಷದ ಮಹಾಲಿಂಗಪುರದ ನೂತನ ಬಸ್ ನಿಲ್ದಾಣದಲ್ಲಿ ನೂರೆಂಟು ಸಮಸ್ಯೆಗಳು
ಬಾಗಲಕೋಟೆ: ಕುಳಗೇರಿ ಕೆರೆಗೆ ಸೋಮನಕೊಪ್ಪ ಚರಂಡಿ ನೀರು!
Kulageri Cross: ಹೂಳು ತುಂಬಿದ ಕಾಲುವೆ…ಪೋಲಾಗುತ್ತಿದೆ ಮಲಪ್ರಭಾ ಎಡದಂಡೆ ಕಾಲುವೆ ನೀರು…
New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
MUST WATCH
ಹೊಸ ಸೇರ್ಪಡೆ
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್; ಹೊರಗೆ ಹೋದದ್ದು ಇವರೇ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.