ನೀರಿಲ್ಲದ ಕಾಲುವೆಗೆ ಬರಲಿದೆ ಆಲಮಟ್ಟಿ ಹಿನ್ನೀರು!
525 ಕೋಟಿಗೆ ಅಸ್ತುಕೆರೂರ ಏತ ನೀರಾವರಿಗೆ ಬಂತು ಅನುದಾನಸಿದ್ದರಾಮಯ್ಯ-ನಿರಾಣಿ ಪ್ರಯತ್ನಕ್ಕೆ ಫಲ
Team Udayavani, Mar 10, 2021, 5:28 PM IST
ಬಾಗಲಕೋಟೆ: ಜಿಲ್ಲೆಯ ನಾಲ್ಕು ತಾಲೂಕು, ಮೂರುವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯ ಸುಮಾರು 16 ಸಾವಿರಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಕೆರೂರ ಏತ ನೀರಾವರಿ ಯೋಜನೆಗೆ ರಾಜ್ಯ ಸರ್ಕಾರಕ್ಕೆ 525 ಕೋಟಿಅನುದಾನ ನೀಡಿದೆ. ಮೊದಲ ಹಂತದಲ್ಲಿ 310 ಕೋಟಿಅನುದಾನ ಬಿಡುಗಡೆಗೆ ಆಡಳಿತಾತ್ಮಕ ಒಪ್ಪಿಗೆ ಕೂಡ ದೊರೆತಿದ್ದು, ಇದರಿಂದ ಜಿಲ್ಲೆಯ ರೈತರ ಮೊಗದಲ್ಲಿ ಹರ್ಷ ತಂದಿದೆ.
ಹೌದು, ಮಲಪ್ರಭಾ ಎಡದಂಡೆ ಹಾಗೂ ಘಟಪ್ರಭಾ ಬಲದಂಡೆ ಕಾಲುವೆಗಳು ನಿರ್ಮಾಣಗೊಂಡು 17 ವರ್ಷಕಳೆದಿವೆ. ಈ ಕಾಲುವೆಗಾಗಿ ಭೂಮಿ ಕೊಟ್ಟ ರೈತರು, ಇಂದಿಗೂನೀರು ಬರಲಿದೆ ಎಂದು ಬಕಪಕ್ಷಿಯಂತೆ ಕಾದು ಸುಸ್ತಾದರೆ ಹೊರತು ನೀರೇ ಬರಲಿಲ್ಲ. ನವಿಲುತೀರ್ಥ ಡ್ಯಾಂನಿಂದಮಲಪ್ರಭಾ ಎಡದಂಡೆ (ಬಾಳೇಕುಂದ್ರಿ ಕಾಲುವೆ) ಹಾಗೂಹಿಡಕಲ್ ಡ್ಯಾಂನಿಂದ ಘಟಪ್ರಭಾ ಬಲದಂಡೆ ಕಾಲುವೆಗೆ ನೀರಾವರಿ ಕಲ್ಪಿಸಲು ಕರ್ನಾಟಕ ನೀರಾವರಿ ನಿಗಮದಿಂದ ಯೋಜನೆ ಕೈಗೊಂಡಿದೆ. ಆದರೆ, ಗೋಕಾಕ ತಾಲೂಕಿನ ಕೊನೆಹಳ್ಳಿಗಳು ಮತ್ತು ಬಾದಾಮಿ ತಾಲೂಕು ಕಾಕನೂರವರೆಗೆ ಮಾತ್ರ ಈ ಎರಡೂ ಕಾಲುವೆ ಜಾಲಕ್ಕೆ ನೀರು ಬರುತ್ತಿತ್ತು. ಕಾಲುವೆಯ ಕೊನೆ ಅಂಚಿನವರೆಗೂ ಒಮ್ಮೆಯೂ ನೀರುಹರಿದಿಲ್ಲ. ಹೀಗಾಗಿ ಹೊಲದಲ್ಲಿ ನೀರಾವರಿ ಕಾಲುವೆ ಇದ್ದರೂರೈತರು ಮಾತ್ರ ನೀರಿಲ್ಲದೇ ಒಣ ಕಾಲುವೆ ನೋಡುತ್ತ ಕಾಲ ಕಳೆಯುವ ಪ್ರಸಂಗವಿತ್ತು.
ನೀರಾವರಿ ವಂಚಿತ: 199.03 ಉದ್ದದ ಘಟಪ್ರಭಾ ಬಲದಂಡೆ ಕಾಲುವೆಯ ನಿರ್ಮಾಣ ಕಾರ್ಯ 2004ರಲ್ಲಿಪೂರ್ಣಗೊಂಡಿದೆ. ಅಂದಿನಿಂದ ಇಂದಿನವರೆಗೆಕಾಲುವೆಯ 169 ಕಿ.ಮೀವರೆಗೆ ಮಾತ್ರ ನೀರು ಹರಿಸಲುಸಾಧ್ಯವಾಗುತ್ತಿದ್ದು, ಉಳಿದ 30 ಕಿ.ಮಿ. ಭಾಗದ ಕಾಲುವೆಹಾಗೂ ಉಪಕಾಲುವೆಗಳಿಗೆ ನೀರು ಹರಿಸಿಲ್ಲ. ಜಿಲ್ಲೆಯ ಬಾಗಲಕೋಟೆ, ಬಾದಾಮಿ, ಬೀಳಗಿ ವಿಧಾನಸಭೆ ಕ್ಷೇತ್ರವ್ಯಾಪ್ತಿ 16,800 ಹೆಕ್ಟೇರ್ ಭೂಪ್ರದೇಶ ನೀರಾವರಿಯಿಂದ ವಂಚಿತವಾಗಿತ್ತು.
ಈ ಸಮಸ್ಯೆಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವ ಅನಿವಾರ್ಯತೆ ಕುರಿತು ಈ ಭಾಗದ ರೈತರು ಹಲವು ಬಾರಿ ಮನವಿ ಮಾಡಿದ್ದರು. ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದ ಶಾಸಕರಾದ ದಿನವೇ ರೈತರು ಮನವಿ ಕೊಟ್ಟಿದ್ದರು. ಅಲ್ಲದೇ ಬೀಳಗಿ ಕ್ಷೇತ್ರದಿಂದ ಆಯ್ಕೆಯಾದಸಚಿವ ಮುರುಗೇಶ ನಿರಾಣಿ ಕೂಡ ಎರಡು ವರ್ಷಗಳಿಂದ ಈ ಯೋಜನೆಗಾಗಿ ಪ್ರಯತ್ನಿಸುತ್ತಿದ್ದರು. ಅದಕ್ಕಾಗಿ ಡಿಸಿಎಂಕಾರಜೋಳ, ಬಾಗಲಕೋಟೆ ಶಾಸಕ ಚರಂತಿಮಠ,ಸಿದ್ದರಾಮಯ್ಯ ಹಾಗೂ ಸಂಸದ ಪಿ.ಸಿ. ಗದ್ದಿಗೌಡರ ಅವರೂವೈಯಕ್ತಿಕ ಪತ್ರದ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು.
ಇವರೆಲ್ಲರ ಸಂಘಟಿತ ಪ್ರಯತ್ನ, ನಿರಾಣಿ ಮತ್ತುಸಿದ್ದರಾಮಯ್ಯ ಅವರ ನಿರಂತರ ಕಾಳಜಿಯ ಫಲವಾಗಿ ಕಳೆದ ವರ್ಷದ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ಕೆರೂರ ಏತ ನೀರಾವರಿ ಯೋಜನೆಗೆ ಇದೇ ಮಾರ್ಚ್ 6ರಂದುಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಹೆರಕಲ್ ಬಳಿ ಜಾಕವೆಲ್: ಸಮುದ್ರ ಮಟ್ಟದಿಂದ 515 ಮೀ. ಎತ್ತರದಲ್ಲಿರುವ ಘಟಪ್ರಭಾ ನದಿ ಬಲದಂಡೆಯಹಳೆ ಹೆರಕಲ್ ಗ್ರಾಮದ ಬಳಿ ಜಾಕವೆಲ್ ಕಂ. ಪಂಪ್‌ಹೌಸ್ ನಿರ್ಮಿಸಿ ಆಲಮಟ್ಟಿ ಹಿನ್ನಿರಿನಿಂದ ನೀರನ್ನು ಎತ್ತಿ 28.40 ಕಿ.ಮೀ.ಎಂ.ಎಸ್. ಪೈಪ್‌ಲೈನ್ ಮೂಲಕ ಹೆರಕಲ್-ಅನಗವಾಡಿ ರಸ್ತೆ ಹೆದ್ದಾರಿ ಬದಿಯಲ್ಲಿ ಹಾಗೂ ವಿಜಯಪುರ-ಹುಬ್ಬಳ್ಳಿರಾಷ್ಟ್ರೀಯ ಹೆದ್ದಾರಿ 218 ರಸ್ತೆ ಬದಿಯಲ್ಲಿ ಸಮುದ್ರ ಮಟ್ಟದಿಂದ 584.40 ಮೀ ಎತ್ತರದಲ್ಲಿರುವ ಹೂಲಗೇರಿಬಳಿ ಡಿಲೆವರಿ ಚೆಂಬರ್ ನಿರ್ಮಿಸಿ 169.00ಕಿಮೀ ಬಲದಂಡೆಕಾಲುವೆಗೆ ನೀರು ಹರಿಸುವ ಮೂಲಕ ಮುಂದಿನ ಅಚ್ಚುಕಟ್ಟಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿತಗೊಂಡಿದೆ.
ಈ ಯೋಜನೆಯಿಂದಾಗಿ 169 ಕಿ.ಮೀ. ಘಟಪ್ರಭಾ ಬಲದಂಡೆ ಕಾಲುವೆ ಹಾಗೂ ಕೆರಕಲಮಟ್ಟಿ, ಮುಚಖಂಡಿ, ಬಾಗಲಕೋಟೆ, ಮಲ್ಲಾಪುರ, ಕಮತಗಿ, ಇಂಗಳಗಿ ವಿತರಣಾ ಕಾಲುವೆಗಳಿಗೂ ನೀರು ಸರಬರಾಜು ಮಾಡಲು ಸಾಧ್ಯವಿದೆ.
ಬಾದಾಮಿ, ಬಾಗಲಕೋಟೆ, ಬೀಳಗಿ ಕ್ಷೇತ್ರದ ಹೂಲಗೇರಿ, ಕಗಲಗೊಂಬ, ಸೂಳಿಕೇರಿ, ನೀರಲಕೇರಿ, ಶಿರೂರ, ಕಮತಗಿ, ಮಲ್ಲಾಪುರ, ನೀಲನಗರ, ಇಂಗಳಗಿ, ಕೆರಕಲಮಟ್ಟಿ, ಗಂಗನಬೂದಿಹಾಳ, ಬಂದಕೇರಿ, ಜಲಗೇರಿ ತಾಂಡಾ,ಕಲಬಂದಕೇರಿ, ಮುಚಖಂಡಿ, ಬಾಗಲಕೋಟೆ ಸೇರಿದಂತೆ 17 ಹಳ್ಳಿಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ.
ಬಜೆಟ್‌ಗೂ ಮುನ್ನ ಹಣ: ಪ್ರಸಕ್ತ ಸಾಲಿನ ರಾಜ್ಯದ ಬಜೆಟ್ ಅನ್ನು ಸೋಮವಾರವಷ್ಟೇ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಅದಕ್ಕೂ ಮುನ್ನ ಅಂದರೆ ಮಾ. 6ರಂದು ಕೆರೂರ ಏತ ನೀರಾವರಿ ಯೋಜನೆಗೆ ಹಣ ನೀಡಲು ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಕೆರೂರ ಏತ ನೀರಾವರಿ ಯೋಜನೆಗೆ ಒಟ್ಟು 525 ಕೋಟಿ ಹಣದ ಅವಶ್ಯಕತೆ ಇದ್ದು,ಈ ಕುರಿತು ಸಮಗ್ರ ಯೋಜನಾ ವರದಿ ಸಲ್ಲಿಕೆಯಾಗಿದೆ.ಈ ಯೋಜನೆಯನ್ನು ಮೂರು ಹಂತದಲ್ಲಿ ಪೂರ್ಣಗೊಳಿಸಲು ಸರ್ಕಾರ ನಿರ್ಧರಿಸಿದ್ದು, ಮೊದಲ ಹಂತದಲ್ಲಿ 310 ಕೋಟಿ, 2ನೇ ಹಂತದಲ್ಲಿ 110 ಕೋಟಿ ಹಾಗೂ 3ನೇ ಹಂತದಲ್ಲಿ 105 ಕೋಟಿ ಅನುದಾನ ನೀಡಲಾಗುತ್ತಿದೆ. ಸಧ್ಯ ಮೊದಲ ಹಂತದ 310 ಕೋಟಿ ಮೊತ್ತದ ಟೆಂಡರ್ ಕರೆಯಲು ಆದೇಶ ಕೂಡ ನೀಡಲಾಗಿದೆ.
ಸೂಕ್ಷ್ಮ ನೀರಾವರಿ ಪದ್ಧತಿ ಅಳವಡಿಕೆ: ಕೆರೂರ ಏತ ನೀರಾವರಿಯೋಜನೆಯನ್ನು ಸೂಕ್ಷ್ಮ ನೀರಾವರಿ ಪದ್ಧತಿಗೆ ಅಳವಡಿಸಲುನಿರ್ಧರಿಸಲಾಗಿದೆ. ಈ ಮೊದಲು ಈ ಯೋಜನೆಗೆ 3.10 ಟಿಎಂಸಿ ಅಡಿ ನೀರಿನ ಬೇಡಿಕೆ ಸಲ್ಲಿಸಲಾಗಿತ್ತು. ಕಾಲುವೆಮೂಲಕ ನೀರಾವರಿ ಕಲ್ಪಿಸುವ ಬದಲು ಸೂಕ್ಷ್ಮ ನೀರಾವರಿ ಪದ್ಧತಿಯಿಂದ ನೀರಿನ ಉಳಿತಾಯ ಕೂಡ ಆಗಲಿದೆ. ಅಲ್ಲದೇಬಾದಾಮಿ, ಬಾಗಲಕೋಟೆ ಹಾಗೂ ಬೀಳಗಿ ಮತಕ್ಷೇತ್ರವ್ಯಾಪ್ತಿಯ 16 ಸಾವಿರ ಹೆಕ್ಟೇರ್ ಭೂಮಿಗೆ ಸೂಕ್ಷ್ಮ ನೀರಾವರಿ ಪದ್ಧತಿ ಒದಗಿಲು ಈ ಯೋಜನೆಯಡಿ ಒಟ್ಟು 2 ಟಿಎಂಸಿ ಅಡಿ ನೀರನ್ನು ಕೃಷ್ಣಾ ಭಾಗ್ಯ ಜಲ ನಿಗಮ, 3ನೇ ಹಂತದ ಯೋಜನೆಯಡಿ ಒಪ್ಪಿಗೆ ನೀಡಿದೆ.
ಕೆರೂರ ಏತ ನೀರಾವರಿ ಯೋಜನೆಯಿಂದ ಬಾದಾಮಿ,ಬೀಳಗಿ ಕ್ಷೇತ್ರದ 16 ಸಾವಿರ ಎಕರೆ ಭೂಮಿ ನೀರಾವರಿಗೆ ಒಳಪಡಲಿದೆ. ಈ ಯೋಜನೆಗಾಗಿ ಹಲವು ವರ್ಷಗಳಿಂದ ನಿರಂತರ ಪ್ರಯತ್ನನಡೆದಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕಬಜೆಟ್‌ನಲ್ಲಿ ಘೋಷಣೆ ಕೂಡ ಆಗಿತ್ತು. ಪ್ರವಾಹ,ಕೊರೊನಾ ಹಿನ್ನೆಯಲ್ಲಿ ಅನುದಾನ ನೀಡಲು ಆಗಿರಲಿಲ್ಲ.ಇದೀಗ ಯೋಜನೆಗೆ ಮೊದಲ ಹಂತದಲ್ಲಿ 310ಕೋಟಿ ಮಂಜೂರು ಮಾಡಿದ್ದು, ಶೀಘ್ರವೇ ಕಾಮಗಾರಿ ಆರಂಭಗೊಳ್ಳಲಿದೆ. ಈ ಭಾಗದ ರೈತರ ಬಹುದಿನಗಳ ಬೇಡಿಕೆ ಈಡೇರಿದೆ. -ಮುರುಗೇಶ ನಿರಾಣಿ, ಗಣಿ ಮತ್ತು ಭೂ ವಿಜ್ಞಾನ ಸಚಿವ
ರೈತರ ಇದೊಂದು ಬಹುದಿನಗಳ ಬೇಡಿಕೆ ಇದಾಗಿತ್ತು.ಸಿದ್ದರಾಮಯ್ಯ ಅವರು ಬಾದಾಮಿಕ್ಷೇತ್ರದಿಂದ ಆಯ್ಕೆಯಾದ ದಿನದಿಂದಲೂ ಇದಕ್ಕಾಗಿ ನಿರಂತರ ಪ್ರಯತ್ನಿಸುತ್ತಿದ್ದರು.2019-20ನೇ ಸಾಲಿನ ಘೋಷಣೆಯಾಗಿದ್ದರೂ ಯೋಜನೆಗೆ ಹಣ ಕೊಟ್ಟಿರಲಿಲ್ಲ. ಈ ಬಾರಿ ನೀರಾವರಿಸಚಿವರಾಗಿದ್ದ ರಮೇಶ ಜಾರಕಿಹೊಳಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ನಿರಂತರ ಒತ್ತಡತಂದು, ಹಣ ತರುವಲ್ಲಿ ಸಿದ್ದರಾಮಯ್ಯನವರುಯಶಸ್ವಿಯಾಗಿದ್ದಾರೆ. ಇದರಿಂದ ಕ್ಷೇತ್ರದ ರೈತರಭೂಮಿಗೆ ನೀರು ದೊರೆಯಲಿದೆ. ಹೊಳಬಸು ಶೆಟ್ಟರ, ಕಾಂಗ್ರೆಸ್ ಮುಖಂಡ, ಸಿದ್ದರಾಮಯ್ಯ ಅವರ ಆಪ್ತ, ಗುಳೇದಗುಡ್ಡ
-ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.