ಆಲಮಟ್ಟಿ ಜಲಾಶಯ ಬಹುತೇಕ ಭರ್ತಿ


Team Udayavani, Jul 29, 2019, 8:35 AM IST

bk-tdy-2

ಆಲಮಟ್ಟಿ: ಕೃಷ್ಣೆ ಉಗಮ ಸ್ಥಾನ ಹಾಗೂ ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಆಲಮಟ್ಟಿ ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಬರುತ್ತಿರುವುದರಿಂದ ಬಹುತೇಕ ಭರ್ತಿಗೊಂಡಿದೆ.

ಮುಂಜಾಗ್ರತಾ ಕ್ರಮವಾಗಿ ಜಲಾಶಯದ 12 ಗೇಟುಗಳಿಂದ ಹಾಗೂ ವಿದ್ಯುದ್ದಾಗಾರಗಳಿಂದ ಬಸವಸಾಗರ ಜಲಾಶಯಕ್ಕೆ ನದಿ ಮೂಲಕ ನೀರು ಬಿಡಲಾಗುತ್ತಿದೆ.

2019ನೇ ಸಾಲಿನಲ್ಲಿ ಇದೇ ಪ್ರಥಮ ಬಾರಿಗೆ ಜಲಾಶಯ ಸಂಪೂರ್ಣ ತುಂಬಿದ್ದರಿಂದ ರವಿವಾರ ಬೆಳಗ್ಗೆಯಿಂದ 6 ಗೇಟ್ ಮತ್ತು ಸಂಜೆ 12 ಗೇಟ್ ಹಾಗೂ ಕೆಪಿಸಿಎಲ್ಗಳಿಂದ ನದಿ ಪಾತ್ರಕ್ಕೆ ನೀರು ಹರಿಸಲಾಗುತ್ತಿದೆ.

ಗರಿಷ್ಠ 519.60 ಮೀ ಎತ್ತರದ ಜಲಾಶಯ ಗರಿಷ್ಠ 123.81 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ರವಿವಾರ ಬೆಳಗ್ಗೆ 519.350 ಮೀ. ಎತ್ತರದಲ್ಲಿ 118.727 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು.

ರವಿವಾರ ಜಲಾಶಯಕ್ಕೆ 80 ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, ಜಲಾಶಯದ 12 ಗೇಟುಗಳ ಮತ್ತು ಕೆಪಿಸಿಎಲ್ ಹಾಗೂ ಎಲ್ಲ ಕುಡಿಯುವ ನೀರಿನ ಘಟಕ ಮತ್ತು ಆಲಮಟ್ಟಿ ಎಡದಂಡೆ ಶಾಖಾ ಕಾಲುವೆ ಮತ್ತು ಚಿಮ್ಮಲಗಿ ಏತ ನೀರಾವರಿ ಯೋಜನೆಗಳಿಗೆ 297 ಕ್ಯೂಸೆಕ್‌, ಆಲಮಟ್ಟಿ ಬಲದಂಡೆ ಶಾಖಾ ಕಾಲುವೆ ಹಾಗೂ ತಿಮ್ಮಾಪುರ ಏತ ನೀರಾವರಿ ಯೋಜನೆಯ ಡಿಸಿ-1 ಮತ್ತು 2ಗಳಿಗೆ 103 ಕ್ಯೂಸೆಕ್‌, ಮುಳವಾಡ ಏತ ನೀರಾವರಿ ಯೋಜನೆಯ ಪೂರ್ವ ಹಾಗೂ ಪಶ್ಚಿಮ ಕಾಲುವೆಗಳಿಗೆ 258 ಕ್ಯೂಸೆಕ್‌, ಸೊನ್ನ, ರೊಳ್ಳಿಮನ್ನಿಕೇರಿ ಯೋಜನೆಗೆ 20 ಕ್ಯೂಸೆಕ್‌ ಸೇರಿ ಒಟ್ಟು ಕಾಲುವೆಗಳ ಮೂಲಕ 678 ಕ್ಯೂಸೆಕ್‌ ಸೇರಿ ಒಟ್ಟು ಜಲಾಶಯದಿಂದ 1,01,078 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ.

ಈಗ ಅ.ಸಂಖ್ಯೆ-1ರಿಂದ 6ವರೆಗಿನ ಗೇಟುಗಳನ್ನು ಬಂದ್‌ ಮಾಡಿ 7ರಿಂದ 18 ಗೇಟ್‌ಗಳನ್ನು ಒಂದು ಮೀಟರ್‌ವರೆಗೆ ಎತ್ತರಿಸಿ ನೀರು ಹರಿಸುತ್ತಿದ್ದು ಇನ್ನುಳಿದ 8 ಗೇಟ್‌ಗಳನ್ನು ಬಂದ್‌ ಮಾಡಲಾಗಿದೆ. ಜಲಾಶಯದ ಬಲಭಾಗದ ಆಲಮಟ್ಟಿ ವಿದ್ಯುತ್‌ ಉತ್ಪಾದನಾ ಕೇಂದ್ರದ ಮೂಲಕ 42,000 ಕ್ಯೂಸೆಕ್‌ ನೀರನ್ನು ಬಿಡುತ್ತಿರುವುದರಿಂದ ಅಲ್ಲಿನ ಎಲ್ಲ ಆರು ಘಟಕಗಳಿಂದ 270 ಮೆಗಾವ್ಯಾಟ್ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ನಾಳೆ ಒಳಗೆ ಒಳಹರಿವು ಇನ್ನಷ್ಟು ಹೆಚ್ಚಿದರೆ ಜಲಾಶಯದ ಗೇಟ್‌ಗಳ ಎತ್ತರ ಇನ್ನಷ್ಟು ಹೆಚ್ಚಿಸಿ ಹೊರಹರಿವು ಹೆಚ್ಚಿಸಲಾಗುವುದು ಎಂದು ಕೃಷ್ಣಾ ಭಾಗ್ಯ ಜಲ ನಿಗಮದ ಮೂಲಗಳು ತಿಳಿಸಿವೆ.

ಆಲಮಟ್ಟಿ ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯದಿಂದ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ನೀರು ಹರಿಬಿಡುತ್ತಿರುವುದರಿಂದ ನಾರಾಯಣಪುರ ಬಸವಸಾಗರ ಹಿನ್ನೀರಿನಿಂದ ಬಾಧಿತಗೊಳ್ಳುತ್ತಿದ್ದ ಗ್ರಾಮಗಳ ಜಮೀನುಗಳ ರೈತರ ಜಮೀನುಗಳಲ್ಲಿ ನೀರು ನುಗ್ಗುವ ಆತಂಕ ಮೂಡುವಂತಾಗಿದೆ.

ಕಳೆದ ಬಾರಿ ಇದೇ ದಿನ ಜಲಾಶಯದಲ್ಲಿ 519.03 ಮೀ. ಎತ್ತರದಲ್ಲಿ 95.812 ಟಿಎಂಸಿ ಅಡಿ ಸಂಗ್ರಹವಾಗಿ ಒಳ ಹರಿವು 92,657 ಕ್ಯೂಸೆಕ್‌ ಜಲಾಶಯದಿಂದ 53,708 ಕ್ಯೂಸೆಕ್‌ ನೀರು ಹೊರ ಬಿಡಲಾಗುತ್ತಿತ್ತು. ಆತಂಕದಲ್ಲಿ ರೈತರು: ಆಲಮಟ್ಟಿ ಜಲಾಶಯದಿಂದ ಲಕ್ಷಾಂತರ ಕ್ಯೂಸೆಕ್‌ ನೀರನ್ನು ನದಿ ಪಾತ್ರಕ್ಕೆ ಹರಿ ಬಿಡುತ್ತಿರುವುದರಿಂದ ನದಿ ಪಾತ್ರದ ಜಿಲ್ಲೆಯ ಅರಳದಿನ್ನಿ, ಯಲಗೂರ, ಕಾಶಿನಕುಂಟಿ, ಬಳಬಟ್ಟಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಮನಹಳ್ಳಿ, ನಾಗಸಂಪಗಿ, ನಾಯನೇಗಲಿ, ಸುತಗುಂಡಾರ ಸೇರಿ ಸುಮಾರು 20 ಗ್ರಾಮಗಳ ರೈತರ ಬೆಳೆ ಪ್ರತಿ ವರ್ಷವೂ ನೆರೆ ಹಾವಳಿಯಿಂದ ಹಾನಿಗೊಳಗಾಗುತ್ತಿದೆ.

• 12 ಗೇಟ್‌ಗಳಿಂದ ಹೊರಕ್ಕೆ ನೀರು 

ರವಿವಾರ ಸಂಗ್ರಹಗೊಂಡಿದೆ 118.727 ಟಿಎಂಸಿ ಅಡಿ ನೀರು

• ಜಲಾಶಯದಿಂದ ಬಿಡಲಾಗುತ್ತಿದೆ 1,01,078 ಕ್ಯೂಸೆಕ್‌ ನೀರು

• ಹಿನ್ನೀರಿನಿಂದ ಬಾಧಿತ ಜಮೀನುಗಳಿಗೆ ನೀರು ನುಗ್ಗುವ ಆತಂಕ

• ಒಳಹರಿವು ಇನ್ನಷ್ಟು ಹೆಚ್ಚಿದರೆ ಹೊರಹರಿವು ಹೆಚ್ಚಳ ಸಾಧ್ಯತೆ

 

•ಶಂಕರ ಜಲ್ಲಿ

ಟಾಪ್ ನ್ಯೂಸ್

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Untitled-1

Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.