ವೀರ ಯೋಧರನ್ನು ನಿತ್ಯವೂ ಸ್ಮರಿಸಿ: ಮೇಟಿ
ನಾವೆಲ್ಲ ಅವರನ್ನು ನಿತ್ಯವೂ ಸ್ಮರಿಸಬೇಕು. ಅವರ ಸೇವೆ ಮರೆಯಲಾಗದು
Team Udayavani, Jul 27, 2022, 6:19 PM IST
ಬಾಗಲಕೋಟೆ: ದೇಶ ರಕ್ಷಣೆಗಾಗಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಪ್ರಾಣಾರ್ಪಣೆ ಮಾಡಿದ ವೀರಯೋಧರ ಬಲಿದಾನ ಮತ್ತು ಅವರ ಕುಟುಂಬದ ತ್ಯಾಗಕ್ಕೆ ಭಾರತೀಯರೆಲ್ಲರೂ ಸದಾ ಋಣಿಗಳು ಎಂದು ಮಾಜಿ ಸಚಿವ ಎಚ್.ವೈ. ಮೇಟಿ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ಗಡಿಯಲ್ಲಿ ಸೈನಿಕರು ತಮ್ಮ ಜೀವದ ಹಂಗು ತೊರೆದು, ನಮ್ಮೆಲ್ಲರ ರಕ್ಷಣೆ ಮಾಡುತ್ತಾರೆ. ನಾವೆಲ್ಲ ಅವರನ್ನು ನಿತ್ಯವೂ ಸ್ಮರಿಸಬೇಕು. ಅವರ ಸೇವೆ ಮರೆಯಲಾಗದು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್ ಹದ್ಲಿ ಮಾತನಾಡಿ, ಪಾಕಿಸ್ತಾನವನ್ನು ಸದೆಬಡಿದು ಕಾರ್ಗಿಲ್‌ನಲ್ಲಿ ಸಂಭ್ರಮದ ವಿಜಯಪತಾಕೆ ಹಾರಿಸಿದ ಸ್ಮರಣೀಯ ದಿನ. ನಮ್ಮ ದೇಶದ ಸೈನಿಕರು ತಮ್ಮ ಶೌರ್ಯ, ಸಾಹಸವನ್ನು ಮೆರೆದ ದಿನ. ಈ ಹೋರಾಟದಲ್ಲಿ ಮಡಿದು ಹುತಾತ್ಮರಾದ ನಮ್ಮ ಜಿಲ್ಲೆಯ ಯೋಧ ಶಿವಬಸಯ್ಯ ಕುಲಕರ್ಣಿ ಅವರು ನಮ್ಮ ಹೆಮ್ಮೆ. ಕಾರ್ಗಿಲ್ ಯುದ್ಧದಲ್ಲಿ ತನ್ನೆರಡು ಕೈಕಾಲು ಕಳೆದುಕೊಂಡ ವೀರ ಯೋಧ ರಂಗಪ್ಪ ಆಲೂರ ನಮ್ಮ ಮಧ್ಯೆಯೇ ಇರುವುದು ಮರೆಯಲಾಗದ ಅನುಭವ ಎಂದರು.
ಜಿಲ್ಲಾ ಮಾಧ್ಯಮ ವಕ್ತಾರ ಸಿಕಂದರ ಅಥಣಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು. ಬ್ಲಾಕ್ ಅಧ್ಯಕ್ಷ ರಜಾಕ ಬೆಣೂರ, ಹಾಜಿಸಾಬ ದಂಡಿನ, ಚೆನ್ನವೀರ ಅಂಗಡಿ, ಬಾಬು ಇಟಗಿ, ಪ್ರೇಮನಾಥ ಗರಸಂಗಿ, ಮಲ್ಲು ಲಮಾಣಿ, ರೇಣುಕಾ ನ್ಯಾಮಗೌಡ, ಶೈಲಾ ಪಾಟೀಲ, ರೇಣುಕಾ ನಾರಾಯಣಕರ, ಜಮೇಲಾ ಮನಿಯಾರ, ಜೈಬುನಿ ಇಲಕಲ್ಲ, ಶಮಶಾದ ಗೋಡೆಸವಾರ, ಇಬ್ರಾಹಿಂ ಕಲಾದಗಿ, ಶಫೀಕ ದೊಡಕಟ್ಟಿ, ರಮೇಶ ಕೋಳಾರ, ಶಬ್ಬೀರ ನದಾಪ, ಅಮೀನಸಾಬ ರಕ್ಕಸಗಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Soldier: ಕಾಶ್ಮೀರದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ; ಮಹಾಲಿಂಗಪುರದ ಯೋಧ ಹುತಾತ್ಮ
Mudhol: ಮರಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿ; ಓರ್ವ ಸಾವು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ
ಬಹದ್ದೂರ ಬಂಡಿ ಏತ ನೀರಾವರಿ ಪರೀಕ್ಷೆ ? ತುಂಗಾಭದ್ರಾ ಹಿನ್ನೀರಿನಲ್ಲಿ ಜಾಕ್ ವೆಲ್
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
Varthur Prakash: ವರ್ತೂರು ಪ್ರಕಾಶ್‌ಗೆ 3 ತಾಸು ಗ್ರಿಲ್, 38 ಪ್ರಶ್ನೆ!
Blackmail: ಸ್ನೇಹಿತೆಯ ವಿಡಿಯೋ, ಫೋಟೋ ಇಟ್ಟುಕೊಂಡು ಹಣಕ್ಕೆ ಬ್ಲ್ಯಾಕ್‌ಮೇಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.