ಜಿಲ್ಲೆಯಲ್ಲೇ ಅಮರಾವತಿ ದೊಡ್ಡ ಜಿಪಂ ಕ್ಷೇತ್ರ
ಕ್ಷೇತ್ರ ಮೂರಾದರೂ ಎರಡು ಹೊಸತು, ಐಹೊಳೆ ಬದಲು ಸೂಳಿಭಾವಿ ಉದಯ
Team Udayavani, Mar 14, 2021, 2:38 PM IST
ಬಾಗಲಕೋಟೆ: ಅವಿಭಜಿತ ಹುನಗುಂದ ತಾಲೂಕಿನಲ್ಲಿ 6 ಕ್ಷೇತ್ರ ಹೊಂದಿದ್ದ ಜಿಪಂ ಸ್ಥಾನಗಳು, ಇದೀಗ ಏಳಕ್ಕೆ ಏರಿಕೆಯಾಗಿವೆ. ಇಳಕಲ್ಲ ಪ್ರತ್ಯೇಕಗೊಂಡ ಬಳಿಕ ಹುನಗುಂದ ತಾಲೂಕಿನಲ್ಲಿ ಮೂರು ಕ್ಷೇತ್ರಗಳ ಪುನರ್‌ವಿಂಗಡಣೆ ಮಾಡಿದ್ದು, ಈ ತಾಲೂಕು ವ್ಯಾಪ್ತಿಯಲ್ಲಿ ಅಮರಾವತಿ, ಸೂಳಿಭಾವಿ ಎರಡು ಹೊಸ ಕ್ಷೇತ್ರ ಉದಯವಾಗಲಿವೆ !
ಹೌದು, ದೇಶ-ವಿದೇಶಿಗರನ್ನೂ ಕೈಬೀಸಿ ಕರೆಯುವ ಐಹೊಳೆ ಎಂಬ ಐತಿಹಾಸಿಕ ಗ್ರಾಮ, ಕಳೆದ 2015ರಲ್ಲಿ ಜಿ.ಪಂ. ಕ್ಷೇತ್ರದ ಸ್ಥಾನಮಾನ ಹೊಂದಿತ್ತು. ಇದು ಹುನಗುಂದತಾಲೂಕು ವ್ಯಾಪ್ತಿಯಲ್ಲಿದ್ದು, ಇಡೀ ಕ್ಷೇತ್ರದ ಹಳ್ಳಿಗಳು ಮಾತ್ರ ಬಾಗಲಕೋಟೆ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯಲ್ಲಿದ್ದವು. ಆದರೆ, ಈ ಬಾರಿ ಐಹೊಳೆ ರದ್ದುಪಡಿಸಿ, ಸೂಳಿಭಾವಿರಚನೆ ಮಾಡಲಾಗುತ್ತಿದೆ. ಇದರಿಂದ ಈ ಕ್ಷೇತ್ರಪ್ರತಿನಿಧಿಸಿ, ಈಗ ಜಿಪಂ ಅಧ್ಯಕ್ಷರೂ ಆಗಿರುವ ಬಾಯಕ್ಕ ಮೇಟಿ ಕ್ಷೇತ್ರ ಕಳೆದುಕೊಂಡಿದ್ದಾರೆ. ಐಹೊಳೆ ಪುನಃ ರಚನೆಯಾಗಿದ್ದರೂ ಮೀಸಲಾತಿಯಿಂದ ಅವರು ಪುನಃ ಸ್ಪರ್ಧೆಗೆಅವಕಾಶ ದೊರೆಯುವ ಸಾಧ್ಯತೆಗಳೂ ಇರಲಿಲ್ಲ. ಹೀಗಾಗಿ ಐದು ವರ್ಷ ಜಿಪಂ ಸದಸ್ಯೆಯಾಗಿ, ಅಧ್ಯಕ್ಷೆಯಾಗಿದ್ದಬಾಯಕ್ಕ, ಇದೀಗ ಬೇರೊಂದು ಕ್ಷೇತ್ರದತ್ತ ಮುಖ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಐದು ವರ್ಷ ಅಧ್ಯಕ್ಷ ಸ್ಥಾನ ನೀಡಿದ ತಾಲೂಕು: ಪ್ರಸ್ತುತ 2016-21ರ ಜಿಪಂ
ಅವಧಿಯಲ್ಲಿ ಇಬ್ಬರು ಅಧ್ಯಕ್ಷರನ್ನು ನೀಡಿದ ತಾಲೂಕು ಹುನಗುಂದ. ಧನ್ನೂರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮಾಜಿಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿವೀಣಾ ಕಾಶಪ್ಪನವರ ಮೊದಲ ಅವಧಿಗೆಅಧ್ಯಕ್ಷರಾಗಿದ್ದರು. ಅವರ ಬಳಿಕ ಇದೇತಾಲೂಕಿನ ಐಹೊಳೆ ಕ್ಷೇತ್ರ ಪ್ರತಿನಿಧಿಸಿದ ಬಾಯಕ್ಕ ಮೇಟಿ ಅಧ್ಯಕ್ಷರಾದರು. ಹೀಗಾಗಿಇಡೀ ಐದು ವರ್ಷಗಳ ಕಾಲ ಇದೇತಾಲೂಕಿನ ಸದಸ್ಯರು ಅಧ್ಯಕ್ಷರಾಗುವ ಯೋಗ ಪಡೆದಿದ್ದರು.
ಅಮರಾವತಿ ಜಿಲ್ಲೆಗೇ ದೊಡ್ಡ ಕ್ಷೇತ್ರ:
ಕಳೆದ ಬಾರಿ ಜಿಪಂ ಕ್ಷೇತ್ರ ಹೊಂದಿದ್ದ ಧನ್ನೂರ, ಈ ಬಾರಿ ಮತಕ್ಷೇತ್ರದ ಸ್ಥಾನಮಾನ ಕಳೆದುಕೊಂಡಿದೆ. ಅದರ ಬದಲು ಅಮರಾವತಿಹೊಸದಾಗಿ ರಚಿಸಲಾಗುತ್ತಿದ್ದು, ಇದೇ ಕ್ಷೇತ್ರವ್ಯಾಪ್ತಿಯಡಿ ಮಾಜಿ ಶಾಸಕ ವಿಜಯಾನಂದಕಾಶಪ್ಪನವರ ಹುಟ್ಟೂರ ಹಾವರಗಿ ಕೂಡಬರಲಿದೆ. ಹೀಗಾಗಿ ಈ ಕ್ಷೇತ್ರದ ಚುನಾವಣೆಪ್ರತಿಷ್ಠೆಯಾಗಲಿದ್ದು, ಜತೆಗೆ ಇಡೀ ಜಿಲ್ಲೆಯಲ್ಲಿಅತಿಹೆಚ್ಚು ಗ್ರಾಮ ಹೊಂದಿರುವ ಹಾಗೂಹೆಚ್ಚು ಮತದಾರರನ್ನು ಹೊಂದಿರುವದೊಡ್ಡ ಕ್ಷೇತ್ರವಾಗಿ ರೂಪುಗೊಳ್ಳಲಿದೆ ಎಂಬ ಮಾತು ಕೇಳಿ ಬರುತ್ತಿದೆ.
9 ತಾಪಂ ಕ್ಷೇತ್ರಗಳು !: ಕಳೆದ ಬಾರಿ ಅಖಂಡ ಹುನಗುಂದ ತಾಲೂಕು ಪಂಚಾಯಿತಿವ್ಯಾಪ್ತಿಯಡಿ ಒಟ್ಟು 21 ತಾಪಂ ಕ್ಷೇತ್ರಗಳಿದ್ದವು. ಈ ಬಾರಿ ಇಳಕಲ್ಲ ಪ್ರತ್ಯೇಕ ತಾಲೂಕಾಗಿದ್ದು,ಹುನಗುಂದ ಮತ್ತು ಇಳಕಲ್ಲ ತಲಾ 9 ತಾ.ಪಂ.ಕ್ಷೇತ್ರಗಳ ವಿಂಗಡಣೆ ಮಾಡಲಾಗಿದೆ.ಈ ಬಾರಿಹುನಗುಂದ ತಾಲೂಕಿನಡಿ ಕೂಡಲಸಂಗಮ,ಚಿತ್ತರಗಿ, ಗಂಜಿಹಾಳ, ಅಮರಾವತಿ, ಧನ್ನೂರ,ನಾಗೂರ, ಸೂಳಿಭಾವಿ, ಐಹೊಳೆ, ಹಿರೇಮಾಗಿತಾಪಂ ಕ್ಷೇತ್ರಗಳ ಸ್ಥಾನ ಪಡೆಯಲಿವೆ.
ಮೀಸಲಾತಿಯದ್ದೇ ತಂತ್ರ: ಜಿಪಂ, ತಾಪಂ ಕ್ಷೇತ್ರಗಳ ಪುನರ್‌ವಿಂಗಡಣೆಯಲ್ಲಿ ಸಾಕಷ್ಟು ರಾಜಕೀಯ ಪ್ರಭಾವದ ಕೈ ಮೇಲಾಗುವುದು ವಾಡಿಕೆ. ಅದರ ಬಳಿಕ ಆಯಾ ಕ್ಷೇತ್ರಗಳ ಸದಸ್ಯ ಸ್ಥಾನಗಳಿಗೆನಿಗದಿಯಾಗುವ ಮೀಸಲಾತಿಯದ್ದೇ ದೊಡ್ಡತಂತ್ರಗಾರಿಕೆ ನಡೆಸುವುದು ರಾಜಕೀಯ ಕ್ಷೇತ್ರದಬಹುದೊಡ್ಡ ಚಾಣಾಕ್ಷéತನ ಎಂಬ ಮಾತಿದೆ.ಹೀಗಾಗಿ ಜಿಪಂ ಕ್ಷೇತ್ರಗಳ ವ್ಯಾಪ್ತಿಯಲ್ಲಿಅತಿಹೆಚ್ಚು ಜನಸಂಖ್ಯೆ ಹೊಂದಿರುವ,ತಮ್ಮ ರಾಜಕೀಯ ಹಿಂಬಾಲಕರಿಗೆ ಅವಕಾಶ ದೊರೆಕಿಸಿಕೊಡುವ ನಿಟ್ಟಿನಲ್ಲಿಮೀಸಲಾತಿ ನಿಗದಿ ಕುರಿತು ಚಾಣಾಕ್ಷéತನಮೆರೆಯುವುದು ರಾಜಕಾರಣಿಗಳ ತಂತ್ರಗಾರಿಕೆ. ಹೀಗಾಗಿ ಹುನಗುಂದ ಕ್ಷೇತ್ರದಲ್ಲಿ ವಿಜಯಾನಂದ ಕಾಶಪ್ಪನವರಿಗೆಸಾಧ್ಯವಾದಷ್ಟು ಅನಾನುಕೂಲತೆ ಸೃಷ್ಟಿಸುವನಿಟ್ಟಿನಲ್ಲಿ ಮೀಸಲಾತಿ ಕೈಚಳಕ ನಡೆಯಲಿದೆ ಎಂಬ ಮಾತು ಕೇಳಿ ಬರುತ್ತಿದೆ.
ಅಮರಾವತಿ ಜಿಪಂ ಕ್ಷೇತ್ರ :
ಹುನಗುಂದ ತಾಲೂಕಿನಡಿ ದೊಡ್ಡ ಕ್ಷೇತ್ರವಾಗಿ ಪುನರ್‌ವಿಂಗಡಣೆಯಾಗಲಿರುವ ಈ ಕ್ಷೇತ್ರದಲ್ಲಿ ಧನ್ನೂರ, ಧನ್ನೂರ ಪು.ಕೆ, ಅಡಿಹಾಳ, ಇದ್ದಲಗಿ, ಕಮದತ್ತ,ಎಮ್ಮೆಟ್ಟಿ, ಮರೋಳ, ಮರೋಳ ಪು.ಕೆ, ಕೊಪ್ಪ ಎಸ್.ಎಂ, ಹುಲ್ಲಳ್ಳಿ, ಹುಲ್ಲಳ್ಳಿಪು.ಕೆ, ಹಾವರಗಿ, ಹಾವರಗಿ ಪು.ಕೆ, ಅನಪಕಟ್ಟಿ, ಇಂದವಾರ, ಇಂದವಾರ ಪು.ಕೆ, ಕಮಲದಿನ್ನಿ, ಕಮಲದಿನ್ನಿ ಪು.ಕೆ, ಕೌಜಗನೂರ,ಕೌಜಗನೂರ ಪು.ಕೆ, ಲವಳಸರ, ವಡೆಯರಗೋನಾಳ,ವಡೆಯರಗೋನಾಳ ಪು.ಕೆ, ದಾಸಬಾಳ, ದಾಸಬಾಳ ಪು. ಕೆ, ಕೆಸರಪೆಂಟಿ, ಅಮರಾವತಿ, ತಿಮ್ಮಾಪುರ, ರಾಮವಾಡಗಿ,ಬಿಂಜವಾಡಗಿ, ಘಟ್ಟಿಗನೂರ, ಹಗೇದಾಳ, ಬೇಕಮಲದಿನ್ನಿ, ರೇವಡಿಹಾಳ,ಕಡಿವಾಲ ಇನಾಂ, ಚಿಂತಕಮಲದಿನ್ನಿ, ಜಾಲಕಮಲದಿನ್ನಿ, ಮನ್ಮಥನಾಳ, ನಾಗೂರ,ಯಡಹಳ್ಳಿ, ಹಿರೇಬಾದವಾಡಗಿ, ಬನ್ನಿಹಟ್ಟಿ, ಚಿಕ್ಕಬಾದವಾಡಗಿ, ಚಿತ್ತವಾಡಗಿ, ವೀರಾಪುರ, ರಕ್ಕಸಗಿ, ಬೇವಿನಮಟ್ಟಿ, ಚಿಕ್ಕಯರನಕೇರಿ, ಹಿರೇಯರನಕೇರಿ, ಹೊನ್ನರಹಳ್ಳಿ, ಹುಲಗಿನಾಳ, ಕಲ್ಲಗೋನಾಳ.
ಅಂದಾಜು ಮತದಾರರು : 41,956
ಸೂಳಿಭಾವಿ ಜಿ.ಪಂ. ಕ್ಷೇತ್ರ :
ಈ ಹಿಂದೆ ಮೊದಲ ಬಾರಿಗೆ ಜಿ.ಪಂ. ಕ್ಷೇತ್ರ ಸ್ಥಾನಮಾನ ಪಡೆದ ಐಹೊಳೆಕ್ಷೇತ್ರ ಈ ಬಾರಿ ಮಾಯವಾಗಿದ್ದು, ಅದರ ಬದಲಾಗಿ ಸೂಳಿಭಾವಿ ಕ್ಷೇತ್ರ ರಚನೆಗೆ ತಯಾರಿ ಮಾಡಿಕೊಳ್ಳಲಾಗಿದೆ. ಈ ಕ್ಷೇತ್ರದಡಿ ಸೂಳಿಭಾವಿ, ಐಹೊಳೆ, ನಿಂಬಲಗುಂದಿ, ಕಳ್ಳಿಗುಡ್ಡ, ಹೂವಿನಹಳ್ಳಿ, ಮುಳ್ಳೂರ, ರಾಮಥಾಳ, ಹಿರೇಮಾಗಿ, ಇನಾಂಬೂದಿಹಾಳ, ಬೇವಿನಾಳ, ಮಾದಾಪುರ, ಮೂಗನೂರ, ಅಂಬ್ಲಿಕೊಪ್ಪ, ಬಸರಿಕಟ್ಟಿ, ಬಸವನಾಳ, ಬೂದಿಹಾಳ ಎಸ್.ಕೆ, ಕಡಿವಾಲ ಕಲ್ಲಾಪುರ, ಸುರಳಿಕಲ್ಲ, ಯರನಾಯಕನಾಳ.
ಅಂದಾಜು ಮತದಾರರು : 30,803
ಕೂಡಲಸಂಗಮ ಜಿಪಂ ಕ್ಷೇತ್ರ :
ಈ ಕ್ಷೇತ್ರದಡಿ ಕೂಡಲಸಂಗಮ, ಕೂಡಲಸಂಗಮ ಪು.ಕೆ, ಕೂಡಲಸಂಗಮ ಅರ್ಚಕ ಪು.ಕೆ, ಕೆಂಗಲ್ ಕಡಪಟ್ಟಿ, ಖಜಗಲ್ಲ, ವರಗೋಡದಿನ್ನಿ, ಬಿಸಲದಿನ್ನಿ, ಕಟಗೂರ, ತುರಡಗಿ, ವಳಕಲದಿನ್ನಿ, ಚೌಡಕಮಲದಿನ್ನಿ, ಚಿತ್ತರಗಿ, ಗಂಗೂರ,ಹಡಲಗಲಿ, ಬೆಳಗಲ್ಲ, ಬಿಸನಾಳಕೊಪ್ಪ, ಕಿರಸೂರ, ಮೇದಿನಾಪುರ, ಹೂವನೂರ, ಗಂಜಿಹಾಳ, ನಂದನೂರ, ಹಿರೇಮಳಗಾವಿ, ಚಿಕ್ಕಮಳಗಾವಿ, ಚಿಕ್ಕಮಾಗಿ, ಖೈರವಾಡಗಿ, ಪಾಪಥನಾಳ.
ಅಂದಾಜು ಮತದಾರರು : 29,441
–ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
ಕಾಸರಗೋಡು: ಬೈಕ್ ಢಿಕ್ಕಿ; ವಿದ್ಯಾರ್ಥಿಗೆ ಗಂಭೀರ ಗಾಯ
Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!
Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.