ಮಹಾಲಿಂಗಪುರ: ಅಮರನಾಥ ಯಾತ್ರಿಕರಿಗೆ ತಾಯ್ನಾಡಿನಲ್ಲಿ ಭವ್ಯ ಸ್ವಾಗತ


Team Udayavani, Jul 15, 2023, 7:55 PM IST

amarnath piligrim

ಮಹಾಲಿಂಗಪುರ : ಇದೇ ಜುಲೈ 3 ರಂದುಮಹಾಲಿಂಗಪುರ ದಿಂದ ಇದೇ ಪ್ರಥಮ ಬಾರಿಗೆ ಅಮರನಾಥ ಯಾತ್ರೆಗೆ ತೆರಳಿದ್ದ ಪಟ್ಟಣದ 6 ಜನ ಯಾತ್ರಿಕರು ಯಶಸ್ವಿಯಾಗಿ ಯಾತ್ರೆಯನ್ನು ಮುಗಿಸಿಕೊಂಡು ಸುರಕ್ಷಿತವಾಗಿ ಮರಳಿದ್ದಾರೆ.

ಶನಿವಾರ ಮಹಾಲಿಂಗಪುರಕ್ಕೆ ಬಂದ ಯಾತ್ರಿಕರನ್ನು ಅವರ ಗೆಳೆಯರ ಬಳಗದವರು ಬಸ್ ನಿಲ್ದಾಣದಲ್ಲಿ ಹೂಮಾಲೆ ಹಾಕಿ , ಸಿಹಿತಿನ್ನಿಸಿ ಭವ್ಯವಾಗಿ ಸ್ವಾಗತ ಕೋರಿದರು. ‌ಮಹಾಲಿಂಗಪುರದ ಮಲ್ಲಪ್ಪ ಭಾವಿಕಟ್ಟಿ, ಬಸವರಾಜ ಬಂಡಿವಡ್ಡರ, ಸಂಜು ಜಮಖಂಡಿ, ಶಂಕರ ಪಾತ್ರೋಟ, ಬೆಳಗಾವಿ ಹತ್ತಿರದ ಸುಳೆಭಾಂವಿಯ ಮಹಾಲಿಂಗ ನೀಲನ್ನವರ, ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಯೋಧ ಮಹಾದೇವಪ್ಪ ತಳ್ಳಿ ಸೇರಿದಂತೆ ಒಟ್ಟು 6 ಜನರು ಜುಲೈ 3 ರಂದು ಸಂಜೆ ಕುಡಚಿಯಿಂದ ರೈಲ್ವೆ ಮೂಲಕ ಮುಂಬೈಗೆ ತೆರಳಿ, ಜುಲೈ 5 ರಂದು ಮುಂಬೈಯಿಂದ ಜಮ್ಮು ಕಾಶ್ಮೀರದ ಶ್ರೀನಗರವರೆಗೆ ವಿಮಾನ ಮೂಲಕ ಅಮರನಾಥ ಯಾತ್ರೆಗೆ ತೆರಳಿದ್ದರು.

ಭಾರಿ ಮಳೆ ಮತ್ತು ಅಮರನಾಥ ಯಾತ್ರೆಯ ಮಾರ್ಗ ಮಧ್ಯೆ ಭೂಕುಸಿತ ಹಿನ್ನೆಲೆಯಲ್ಲಿ ಮೂರು ದಿನ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಅಮರನಾಥ ಯಾತ್ರೆಯ ಮಧ್ಯದಲ್ಲಿರುವ ಡೊಮಾಲ್ ದ ವಿಶಾಲ ಭಂಡಾರ ಶಿವ ಆಶ್ರಯದಲ್ಲಿ 3 ದಿನ ವಾಸ್ತವ್ಯ ಇದ್ದರು. ಜುಲೈ 10 ರಂದು ಅಮರನಾಥ ದರ್ಶನ ಪಡೆದು ಜುಲೈ 11 ರಂದು ಸಂಜೆ ಶ್ರೀನಗರ ವಿಮಾನ ನಿಲ್ದಾಣಕ್ಕೆ ಮರಳಿ ಬಂದಿದ್ದರು. ‌ ಮಳೆ ಮತ್ತು ಭೂಕುಸಿತ ಹಿನ್ನೆಲೆಯಲ್ಲಿ ಸಾವಿರಾರು ಪ್ರಯಾಣಿಕರು ದರ್ಶನ ಇಲ್ಲದೇ, ಇನ್ನು ಸಾವಿರಾರು ಜನರು ದರ್ಶನ ಪಡೆದು ಏಕಕಾಲಕ್ಕೆ ಶ್ರೀನಗರಕ್ಕೆ ವಾಪಸ ಆದ ಕಾರಣ ಸಕಾಲದಲ್ಲಿ ವಿಮಾನ ಟಿಕೆಟ್ ಸಿಗದೇ ಜುಲೈ 11 ರಿಂದ 14 ರ ಮಧ್ಯಾಹ್ನದವರೆಗೂ ಶ್ರೀನಗರದಲ್ಲಿದ್ದು, 14 ರಂದು ಮಧ್ಯಾಹ್ನ ಶ್ರೀನಗರದಿಂದ ವಿಮಾನ ಮೂಲಕ ಮುಂಬೈಗೆ ಬಂದು, ಮುಂಬೈನಿಂದ ಬಸ್ ಮೂಲಕ ಮಹಾಲಿಂಗಪುರಕ್ಕೆ ಬಂದೆವು.

ಭಗವಂತನ ಕೃಪೆಯಿಂದ ಯಾವುದೇ ತೊಂದರೆ ಇಲ್ಲದೇ ಅಮರನಾಥ ಯಾತ್ರೆ ಮುಗಿಸಿ ತಾಯ್ನಾಡಿಗೆ ಬಂದಿದ್ದೇವೆ ಎಂದು ಯಾತ್ರೀಕರು ತಮ್ಮ ಯಾತ್ರಾ ಅನುಭವ ಹಂಚಿಕೊಂಡರು. ಮಹಾದೇವ ಹುಣಶ್ಯಾಳ, ಅಶೋಕ ಬಾಣಕಾರ, ಸುನೀಲ ಜಮಖಂಡಿ, ಶ್ರೀಶೈಲ ಕಿರಗಟಗಿ, ವಿನೋದ ಚಮಕೇರಿ, ಪ್ರಕಾಶ ಬಾಡನವರ, ಚಂದು ಕಾಗಿ, ಬಸವರಾಜ ಹುಲ್ಯಾಳ, ಮಹಾಲಿಂಗ ಹಾವನಳ್ಳಿ ಸೇರಿದಂತೆ ಹಲವರು ಇದ್ದರು.

ಟಾಪ್ ನ್ಯೂಸ್

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mudhol: ಆರ್‌ಎಸ್‌ಎಸ್‌ನಿಂದ ದೇಶಕ್ಕೆ ಕಂಟಕ: ಆರ್‌.ಬಿ.ತಿಮ್ಮಾಪುರ

Mudhol: ಆರ್‌ಎಸ್‌ಎಸ್‌ನಿಂದ ದೇಶಕ್ಕೆ ಕಂಟಕ: ಆರ್‌.ಬಿ.ತಿಮ್ಮಾಪುರ

Farmers

Farmers; ರೈತನ ಬೆಳೆ ಕಾಯುಲು ಸಿನಿ ತಾರೆಯರು; ಉತ್ತಮ ಬೆಳೆಗೆ ರೈತನ ಹೊಸ ಪ್ರಯೋಗ

Bagalkote: ಆನ್‌ಲೈನ್‌ ಮಾಯಾಜಾಲ; ಹಣ ಮಂಗಮಾಯ; ವಾರದಲ್ಲಿ ಮೂವರಿಗೆ 93 ಲಕ್ಷ ರೂ.ವಂಚನೆ

Bagalkote: ಆನ್‌ಲೈನ್‌ ಮಾಯಾಜಾಲ; ಹಣ ಮಂಗಮಾಯ; ವಾರದಲ್ಲಿ ಮೂವರಿಗೆ 93 ಲಕ್ಷ ರೂ.ವಂಚನೆ

ರಾಜ್ಯದಲ್ಲಿ ತಾಲಿಬಾನ್ ಆಡಳಿತ: ಹಿಂದೂ ವಿರೋಧಿ ಸರ್ಕಾರಕ್ಕೆ ಹಿಂದೂ ಮುಖಂಡನಿಂದ ಧಿಕ್ಕಾರ

ರಾಜ್ಯದಲ್ಲಿ ತಾಲಿಬಾನ್ ಆಡಳಿತ: ಹಿಂದೂ ವಿರೋಧಿ ಸರ್ಕಾರಕ್ಕೆ ಹಿಂದೂ ಮುಖಂಡನಿಂದ ಧಿಕ್ಕಾರ

ಬಾಗಲಕೋಟೆ: ಇಂದಿರಾಗಾಂಧಿ ವಸತಿ ಶಾಲೆಗಿಲ್ಲ ಉದ್ಘಾಟನೆ ಭಾಗ್ಯ!

ಬಾಗಲಕೋಟೆ: ಇಂದಿರಾಗಾಂಧಿ ವಸತಿ ಶಾಲೆಗಿಲ್ಲ ಉದ್ಘಾಟನೆ ಭಾಗ್ಯ!

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

yogi-3

Pakistan ಕ್ಯಾನ್ಸರ್‌, ಅದರ ಹುಟ್ಟಿಗೆ ಕಾಂಗ್ರೆಸ್‌ ಕಾರಣ: ಯೋಗಿ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

kangana-2

Emergency; ಭಿಂದ್ರನ್‌ವಾಲೆ ಸಾಧುವಲ್ಲ, ಭಯೋತ್ಪಾದಕ: ಸಂಸದೆ ಕಂಗನಾ

Suside-Boy

Health Problem: ಮಲಗಿದ್ದ ವೇಳೆ ಮೃತಪಟ್ಟ ವ್ಯಕ್ತಿ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.