ಅಮೀನಗಡ: ಗೆಳೆಯರ ಬಳಗದಿಂದ ಪಕ್ಷಿಗಳಿಗೆ ಆಹಾರ-ನೀರು
Team Udayavani, Mar 12, 2024, 11:17 AM IST
ಉದಯವಾಣಿ ಸಮಾಚಾರ
ಅಮೀನಗಡ: ಪಕ್ಷಿಗಳಿಗೆ ಆಹಾರ, ನೀರು ಪೂರೈಸುವ ಮೂಲಕ ಗೆಳೆಯರ ಬಳಗ ಮಾನವೀಯತೆ ಮೆರೆದಿದೆ. ಹೌದು. ತಾಪಮಾನ ದಿನೇ ದಿನೆ ಹೆಚ್ಚಾಗುತ್ತಿದ್ದು, ಬಿಸಿಲಿನ ಬೇಗೆಯಿಂದ ಪಕ್ಷಿಗಳು ತತ್ತರಿಸುತ್ತಿವೆ. ಇದನ್ನು ಮನಗೊಂಡ ಪಟ್ಟಣದ ಗೆಳೆಯರ ಬಳಗ ಸ್ವಯಂ ಪ್ರೇರಣೆಯಿಂದ ಪಟ್ಟಣದ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಹಾದಿ ಬಸವೇಶ್ವರ ದೇವಸ್ಥಾನದಿಂದ, ಸಾಯಿ ಶಾಲೆಯವರೆಗೆ 100ಕ್ಕೂ ಹೆಚ್ಚು ಗಿಡಗಳಲ್ಲಿ ಪಕ್ಷಿಗಳಿಗೆ ಆಹಾರ, ನೀರು ಪೂರೈಸುವ ಕಾರ್ಯ ಮಾಡುತ್ತಿದೆ. ಗೆಳೆಯರ ಬಳಗದ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಪಟ್ಟಣದ ಗೆಳೆಯರ ಬಳಗ ಸೇರಿಕೊಂಡು ಸ್ಥಳಿಯ ಅಂಗಡಿಗಳಿಗೆ ಭೇಟಿ ನೀಡಿ, ಬಳಕೆಗೆ ಬಾರದ ಬಾಟಲ್‌ಗಳನ್ನು ಸಂಗ್ರಹಿಸಿ ಅವುಗಳನ್ನು ಎರಡು ತುಂಡುಗಳಾಗಿ ಮಾಡಿ, ತಮ್ಮ ತಮ್ಮ ಮನೆಗಳಿಂದ ಅಕ್ಕಿ ಮತ್ತು ಜೋಳವನ್ನು ತಂದು ಎರಡನ್ನು ಕೂಡಿಸಿ ಅವುಗಳನ್ನು ಸಂಗ್ರಹಿಸಿ, ಒಂದು ಭಾಗದಲ್ಲಿ ಅಕ್ಕಿ ಮತ್ತು ಜೋಳ, ಮತ್ತೊಂದು ಭಾಗದಲ್ಲಿ ನೀರನ್ನು ಹಾಕಿ, ತಂತಿಯ ಮೂಲಕ ಗಿಡಗಳಿಗೆ ಕಟ್ಟುತ್ತಿದ್ದಾರೆ.
ಪಟ್ಟಣದ ಯುವಕರಾದ ನವೀನ ಪಲ್ಲಕ್ಕಿ, ಬಾಲು ಬಿ, ಹುಲ್ಲಪ್ಪ ಭಜಂತ್ರಿ, ಮುತ್ತು ನರಿ, ಸಂಗು ಬೇನಾಳ, ಮುತ್ತು ಬಿ., ಸಚಿನ
ಶಿವಮೂರ್ತಿಮಠ, ಬಸು ಗೌಡರ ಅವರನ್ನು ಒಳಗೊಂಡ ಗೆಳೆಯರ ಬಳಗ, ಪಕ್ಷಿಗಳ ಆಕ್ರಂದನ ಹಾಗೂ ವನ್ಯ ಜೀವಿಗಳ ನೋವಿಗೆ
ಸ್ಪಂದಿಸುತ್ತಿದೆ. ಎರಡು ದಿನಕೊಮ್ಮೆ ಗಿಡಗಳಿಗೆ ಕಟ್ಟಿರುವ ಬಾಟಲ್‌ಗಳಿಗೆ ಅಕ್ಕಿ, ಜೋಳ ಹಾಗೂ ನೀರನ್ನು ಹಾಕುವ ಯೋಜನೆ ಮಾಡಿ, ಪಕ್ಷಿಗಳ ದಾಹ ಇಂಗಿಸುವ ಮಾನವೀಯ ಕಾರ್ಯ ಮಾಡುತ್ತಿದ್ದಾರೆ.
ಯುವಕರ ಕಾರ್ಯ ಮಾದರಿ: ಆಧುನಿಕ ತಂತ್ರಜ್ಞಾನದ ಕಾಲಮಾನದಲ್ಲಿ ಪಕ್ಷಿಗಳ ಸಂಕುಲ ಅಳಿವಿನಂಚಿನಲ್ಲಿದೆ. ಪಕ್ಷಿಗಳ
ಸಂಕುಲ ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಯುವಕರ ನಡೆ ಇತರರಿಗೆ ಮಾದರಿಯಾಗಿದೆ. ಇದೇ ರೀತಿಯ ಹವ್ಯಾಸವನ್ನು ಎಲ್ಲರೂ ಬೆಳೆಸಿಕೊಂಡರೆ ಪಕ್ಷಿ ಸಂಕುಲ ರಕ್ಷಿಸಬಹುದು ಎಂದು ಗೆಳೆಯರ ಬಳಗದ ಕಾರ್ಯಕ್ಕೆ ಪ್ರಜ್ಞಾವಂತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
*ಎಚ್.ಎಚ್.ಬೇಪಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.