ಅಸಮರ್ಪಕ ಬರ ಕಾಮಗಾರಿಗೆ ಗರಂ
•ಆಡಳಿತ ನಡೆಸಲು ಅರ್ಹರಲ್ಲ: ಕಾರಜೋಳ ಆಕ್ರೋಶ•ಗುಳೆ ತಡೆಗೆ ಅಧಿಕಾರಿಗಳಿಗೆ ತಾಕೀತು
Team Udayavani, Jun 8, 2019, 9:45 AM IST
ಬಾದಾಮಿ: ಪಟ್ಟಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಯಿತು.
ಬಾದಾಮಿ: ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಬರ ಅಧ್ಯಯನ ಕೈಗೊಂಡ ನಂತರ ಪಟ್ಟಣದಲ್ಲಿ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಬರ ಕಾಮಗಾರಿಗಳ ಕುರಿತು ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಬರಗಾಲ ಕಾಮಗಾರಿಗೆ ಹಾಗೂ ಜನರು ಗುಳೆ ಹೋಗದಿರಲು ಯಾವೆಲ್ಲಾ ಕಾಮಗಾರಿಗಳನ್ನು ಹಮ್ಮಿಕೊಂಡಿದ್ದೀರಿ? ಎಂದು ತಾಪಂ ಇ.ಒ ಭೀಮಪ್ಪ ಲಾಳಿ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅವರು, ಕಬ್ಬಲಗೇರಿಯಲ್ಲಿ 380 ಜನರಿಗೆ ಕೆರೆ ಹೂಳೆತ್ತುವ ಕೆಲಸ ನೀಡಲಾಗಿದೆ. ಆಡಗಲ್ನಲ್ಲಿಯೂ ಕೆಲಸ ನೀಡಲಾಗಿದೆ. ಒಬ್ಬರಿಗೆ ಪ್ರತಿದಿನ 249 ರೂ.ಗಳನ್ನು ನೀಡಲಾಗುತ್ತಿದೆ ಎಂದರು.
ಮಧ್ಯ ಪ್ರವೇಶಿಸಿದ ಮುಧೋಳ ಶಾಸಕ ಗೋವಿಂದ ಕಾರಜೋಳ, ತಾಲೂಕಿನಿಂದ ಯಾವ ಗ್ರಾಮದ ಎಷ್ಟು ಜನರು ಗುಳೆ ಹೋಗಿದ್ದಾರೆ ಎಂದು ಪ್ರಶ್ನಿಸಿದರು. ಆಗ ಅಧಿಕಾರಿ ಸಮರ್ಪಕ ಉತ್ತರ ನೀಡದಿದ್ದರಿಂದ ಕೋಪಗೊಂಡ ಕಾರಜೋಳ, ಜಿಲ್ಲೆಯಲ್ಲಿ 5,16,027 ಜನ, ತಾಲೂಕಿನಲ್ಲಿ 92,700 ಜನ ಗುಳೆ ಹೋಗಿದ್ದಾರೆ. ನೀವು ಜನರಿಗೆ ಕೇವಲ ಒಂದು ವಾರ ಕೆಲಸ ನೀಡಿ ಅವರೆಲ್ಲರೂ ಗುಳೆ ಹೋಗುವಂತೆ ಮಾಡಿದ್ದೀರಿ. ಬರ ನಿರ್ವಹಣೆಯಲ್ಲಿ ನೀವು ಸಂಪೂರ್ಣ ವಿಫಲರಾಗಿದ್ದು, ನೀವು ಆಡಳಿತ ನಡೆಸಲು ಅರ್ಹರಲ್ಲ ಎಂದು ಕಿಡಿಕಾರಿದರು.
ತಾಲೂಕಿನಲ್ಲಿ ಗೋ ಶಾಲೆ ಪ್ರಾರಂಭಿಸಿದ್ದೀರಾ?, ಮೇವು ಬ್ಯಾಂಕ್ ಸ್ಥಾಪಿಸಿದ್ದೀರಾ? ತಾಲೂಕಿನಲ್ಲಿ ಜಾನುವಾರುಗಳು ಎಷ್ಟಿವೆ ಎಂದು ಬಿಎಸ್‌ವೈ ಪ್ರಶ್ನೆಗಳ ಸುರಿಮಳೆ ಸುರಿಸಿದರು. ಈ ಪ್ರಶ್ನೆಗಳಿಗೆ ತಬ್ಬಿಬ್ಟಾದ ತಹಶೀಲ್ದಾರ್ ಉತ್ತರಿಸಲು ತಡವರಿಸುತ್ತ, ಗೋಶಾಲೆ ಪ್ರಾರಂಭಿಸಿಲ್ಲ. ಆದರೆ ಜಾನುವಾರುಗಳಿಗೆ 10 ಟನ್ ಮೇವನ್ನು 50*50 ರಂತೆ ಹರ್ಷ ಕಂಪನಿಯಿಂದ ಖರೀದಿಸಲಾಗಿದೆ ಎಂದರು.
ಶೀಘ್ರದಲ್ಲಿ ಜಿಪಂ ವ್ಯಾಪ್ತಿಯಲ್ಲಿ ಮೇವು ಬ್ಯಾಂಕ್ ಸ್ಥಾಪಿಸಿ, ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ, ಜನರಿಗೆ ಉದ್ಯೋಗ ಕಲ್ಪಿಸಿ, ಗುಳೆ ಹೋಗುವುದನ್ನು ತಪ್ಪಿಸಬೇಕು. ಗೋ ಶಾಲೆಗಳನ್ನು ತೆರೆದು ಜನರಿಗೆ ಅನುಕೂಲ ಕಲ್ಪಿಸಿ ಎಂದು ಉಪ ವಿಭಾಗಾಧಿಕಾರಿಗಳಿಗೆ ಯಡಿಯೂರಪ್ಪ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಸಂಸದ ಪಿ. ಸಿಗದ್ದಿಗೌಡ್ರ, ಶಾಸಕರಾದ ಗೋವಿಂದ ಕಾರಜೋಳ, ಮುರಗೇಶ ನಿರಾಣಿ, ಲಕ್ಷ್ತ್ರಣ ಸವದಿ, ವಿಪ ಸದಸ್ಯ ಹನಮಂತ ನಿರಾಣಿ, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ತಾ.ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ, ಮಹಾಂತೇಶ ಮಮದಾಪುರ, ನಾಗರಾಜ ಕಾಚಟ್ಟಿ, ಅಣ್ಣಪ್ಪ ಹೊಸಮನಿ, ನಿಂಗಪ್ಪ ಹೊಸಮನಿ, ಮುತ್ತು ಉಳ್ಳಾಗಡ್ಡಿ, ಬಸವರಾಜ್ ಪಾಟೀಲ, ಭೀಮನಗೌಡ ಪಾಟೀಲ, ಉಪವಿಭಾಗಾಧಿಕಾರಿ ಜೆ.ಶಾಂತಾ, ತಹಶೀಲ್ದಾರ್ ಸುಹಾಸ ಇಂಗಳೆ, ಸಿ.ಎಸ್. ಅಂಗಡಿ ಹಾಗೂ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ
ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ
ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ
MUST WATCH
ಹೊಸ ಸೇರ್ಪಡೆ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.