ಹಸಿದವರಿಗೆ ಅನ್ನ; ಶ್ರಮಿಕರಿಗೆ ಆಹಾರಧಾನ್ಯ
ಕಾಮಧೇನು ಸಂಸ್ಥೆ ಕಾರ್ಯಕ್ಕೆ ಶ್ಲಾಘನೆ! ಸಮಾಜ ಸೇವೆಯನ್ನು ಯುವಕರು ನಿರಂತರವಾಗಿ ಕೈಗೊಳ್ಳಲಿ
Team Udayavani, May 31, 2021, 7:03 PM IST
ಬಾಗಲಕೋಟೆ: ಪ್ರತಿಯೊಬ್ಬರು ಸೇವಾ ಕಾರ್ಯದಲ್ಲಿ ತೊಡಗಿದಾಗ ಮಾತ್ರ ಮಾನವನ ಜನ್ಮ ಸಾರ್ಥಕವಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೋವಿಡ್ ಸಂಕಷ್ಟದಲ್ಲಿ ಕೂಡ ಸೇವಾಹೀ ಸಂಘಟನೆ ಎಂಬ ಕರೆ ನೀಡಿದ್ದು ಪ್ರತಿಯೊಬ್ಬರು ಕೈಲಾದಷ್ಟು ನೆರವನ್ನು ಕಷ್ಟದಲ್ಲಿರುವವರಿಗೆ ಸ್ಪಂದಿಸಲು ತಿಳಿಸಿದ್ದು, ಅದರಂತೆ ನಾವೆಲ್ಲ ಮಾಡಬೇಕಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕ ಪಿ.ಎಚ್. ಪೂಜಾರ ಹೇಳಿದರು.
ವಿದ್ಯಾಗಿರಿಯ 17ನೇ ಕ್ರಾಸ್‌ದಲ್ಲಿ ಕಾಮಧೇನು ಸಂಸ್ಥೆಯಿಂದ 23 ಸಮಾಜದ ಶ್ರಮಿಕ ವರ್ಗದ 550 ಜನರಿಗೆ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೋವಿಡ್ ಸಂಕಷ್ಟ ಒಂದು ಕಡೆಯಾದರೆ ಇನ್ನೊಂದೆಡೆ ಲಾಕ್‌ಡೌನ್ ಇರುವ ಕಾರಣ ಆಸ್ಪತ್ರೆಗಳಿಗೆ ಬರುವ ಸೋಂಕಿತರು, ಸಂಬಂಧಿಕರಿಗೆ ಊಟದ ತೊಂದರೆ ಇರುವುದನ್ನು ಮನಗಂಡು ಕಾಮಧೇನು ಸಂಸ್ಥೆಯವರು ನಿತ್ಯ ಮೂರು ಹೊತ್ತಿನ ಊಟವನ್ನು ಉಚಿತವಾಗಿ ನೀಡುತ್ತಿರುವ ಕೆಲಸವನ್ನು ಶ್ಲಾಘಿಸಿದರು.
ಕಮತಗಿ ಹೊಳೆಹುಚ್ಚೇಶ್ವರ ಮಠದ ಹುಚ್ಚೇಶ್ವರ ಸ್ವಾಮೀಜಿ ಮಾತನಾಡಿ, ಕೊರೊನಾ ಹೆಮ್ಮಾರಿ ಜನರನ್ನು ಹಿಂಡಿ ಹಿಪ್ಪಿ ಮಾಡುತ್ತಿದೆ. ಜನ ಬಹಳಷ್ಟು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಕಾಮಧೇನು ಸಂಸ್ಥೆಯವರು ಹಸಿದವರಿಗೆ ಊಟ ನೀಡುತ್ತಿರುವ ಕಾರ್ಯ ಮೆಚ್ಚುವಂತದ್ದು. ಯುವಕರು ಸಮಾಜ ಸೇವೆಯನ್ನು ನಿರಂತರವಾಗಿ ಮಾಡಬೇಕು ಎಂದು ಹೇಳಿದರು.
ಕಾಮಧೇನು ಸಂಸ್ಥೆಯ ವಿಜಯ ಸುಲಾಖೆ ಮಾತನಾಡಿ, ಕಳೆದ 23 ದಿನಗಳಿಂದ ನಿರಂತರ ಮೂರು ಹೊತ್ತಿನ ಊಟ ನೀಡಲಾಗುತ್ತಿದ್ದು, ಇದುವರೆಗೆ ಸುಮಾರು 18 ಸಾವಿರ ಆಹಾರದ ಪೊಟ್ಟಣ ನೀಡಲಾಗಿದೆ. ನಮ್ಮ ಸಂಸ್ಥೆಯಿಂದ ಮಾಡುತ್ತಿರುವ ಕೆಲಸಕ್ಕೆ ಹಲವರು ನೆರವು ನೀಡುತ್ತಿದ್ದಾರೆ ಎಂದು ಹೇಳಿದರು.
ಕಲಾದಗಿಯ ಹಿರೇಮಠದ ಗಂಗಾಧರ ಶ್ರೀ, ಮಲ್ಲಿಕಾರ್ಜುನ ಚರಂತಿಮಠ, ಡಾ.ಬಡದೇಸಾಯಿ, ಬಸವರಾಜ ಕಟಗೇರಿ, ಶಿವು ಮೇಲಾ°ಡ, ಅಶೋಕ ಮುತ್ತಿನಮಠ, ರವಿ ಕುಮಟಗಿ, ಸಂತೋಷ ಹೊಕ್ರಾಣಿ, ಸಭಾಸ, ಪ್ರಸನ್ ಸಿಂಧೆ, ಮಹೇಶ ಅಂಗಡಿ, ಆನಂದ ಜಿಗಜಿನ್ನಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.