42 ಎಕರೆಯಲ್ಲಿ ತಲೆ ಎತ್ತಲಿದೆ “ವೃಕ್ಷೋದ್ಯಾನ’; | 2 ಕೋಟಿ ರೂ. ಅನುದಾನ ಬಿಡುಗಡೆ
ಈ ಪ್ರದೇಶವನ್ನು ಜಿಲ್ಲೆಯಲ್ಲಿಯೇ ಅತೀ ಸುಂದರ ವೃಕ್ಷೋದ್ಯಾನವನ್ನಾಗಿ ಮಾಡಲಾಗುವುದು.
Team Udayavani, Jul 27, 2022, 6:32 PM IST
ರಬಕವಿ-ಬನಹಟ್ಟಿ: ಜಮಖಂಡಿಯ ಪ್ರಾದೇಶಿಕ ಅರಣ್ಯ ಇಲಾಖೆ ಆಶ್ರಯದಲ್ಲಿ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ಡೆಂಪೋ ಡೈರಿ ಮುಂಭಾಗದಲ್ಲಿರುವ ಅಂದಾಜು 42 ಎಕರೆ ಭೂ ಪ್ರದೇಶದಲ್ಲಿ “ವೃಕ್ಷೋದ್ಯಾನ’ ತಲೆ ಎತ್ತಲಿದೆ. ಸಾರ್ವಜನಿಕರ-ಮಕ್ಕಳ ಅನುಕೂಲಕ್ಕಾಗಿ ಕಳೆದ
ತಿಂಗಳು ವೃಕ್ಷೋದ್ಯಾನಕ್ಕೆ ಚಾಲನೆ ನೀಡಲಾಗಿತ್ತು.
ಈ ಕಾಮಗಾರಿಗೆ ಈಗಾಗಲೇ 2ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದ್ದು, 25ಲಕ್ಷ ರೂ. ವೆಚ್ಚದ ಮೊದಲ ಹಂತದ ಕಾಮಗಾರಿ ಶರವೇಗದಲ್ಲಿ ಆರಂಭಿಸಲಾಗಿದೆ. ತಾಲೂಕಿನ ಜನರಲ್ಲಿ ಸಂತಸವನ್ನುಂಟು ಮಾಡಿದೆ.
ಅರಣ್ಯ ಇಲಾಖೆ ಜಾಗೆಯಲ್ಲಿ ಮೊದಲ ಹಂತದಲ್ಲಿ 2600ಕ್ಕೂ ಅಧಿಕ ಗಿಡಗಳನ್ನು ನೆಡಲಾಗಿದೆ. ವಾಯು ವಿಹಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಿಸಿ ರಸ್ತೆ ನಿರ್ಮಾಣ, ಮಕ್ಕಳಿಗಾಗಿ ಆಡುವ ಸಲಕರಣೆಗಳು ಜತೆಗೆ ಇಲ್ಲಿರುವ ಬಾಂದಾರ ಅಭಿವೃದ್ಧಿಗೊಳಿಸಿ ಅಲ್ಲಿ ದೋಣಿ ವಿಹಾರಕ್ಕೂ ಅವಕಾಶ ನೀಡುವ ಯೋಜನೆ ಕೂಡಾ ಅತಿ ಶೀಘ್ರ ಆರಂಭಿಸಲಾಗುತ್ತಿದೆ. ಇಲ್ಲಿ ನೆಟ್ಟ ಗಿಡಗಳಿಗೆ ನೀರೊದಗಿಸುವಂತೆ ವ್ಯವಸ್ಥೆ ಮಾಡಲಾಗಿದ್ದು, ಈ ವೃಕ್ಷೋದ್ಯಾನವನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು. ಅದೇ ರೀತಿ ಬನಹಟ್ಟಿಯ ಕೆಎಚ್ ಡಿಸಿ ರಸ್ತೆಯಲ್ಲಿರುವ ನಾಲ್ಕು ಅರಣ್ಯ ಪ್ರದೇಶದಲ್ಲೂ ಅರಣ್ಯೀಕರಣಗೊಳಿಸಿ ಅಲ್ಲಿಯೂ ಮಕ್ಕಳಿಗೆ
ಅನುಕೂಲವಾಗುವ ನಿಟ್ಟಿನಲ್ಲಿ ಅಭಿವೃದ್ಧಿಗೊಳಿಸುವ ಯೋಜನೆ ಇದರಲ್ಲಿ ಅಳವಡಿಸಲಾಗಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.
ಈ ಪ್ರದೇಶವನ್ನು ಜಿಲ್ಲೆಯಲ್ಲಿಯೇ ಅತೀ ಸುಂದರ ವೃಕ್ಷೋದ್ಯಾನವನ್ನಾಗಿ ಮಾಡಲಾಗುವುದು. ಮಕ್ಕಳು ವಯೋವೃದ್ಧರು ಇಲ್ಲಿ ಸುತ್ತಾಡಿದರೆ ಮನಸ್ಸಿಗೆ ಮುದ ನೀಡುವಂತಾಗಬೇಕು. ಹಾಗೆ ಈ ಪ್ರದೇಶ ಅಭಿವೃದ್ಧಿ ಪಡಿಸಲಾಗುತ್ತಿದೆ ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ವಿಜಯಕುಮಾರ ಕಾಳಪ್ಪನವರ ಹಾಗೂ ತೇರದಾಳ ವಲಯ ಅರಣ್ಯ ಅಧಿಕಾರಿ ಮಲ್ಲು ನಾವಿ.
ಗಿಡ ಮರಗಳನ್ನು ರಕ್ಷಿಸುವುದರ ಜತೆಗೆ ಸುಂದರ ಪರಿಸರ ನಿರ್ಮಿಸುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮಗಳು ಅಗತ್ಯವಾಗಿವೆ. ಮುಂದಿನ ಪೀಳಿಗೆಯ ಅರೋಗ್ಯದ ಹಿತದೃಷ್ಟಿಯಿಂದ ನಾವೆಲ್ಲರೂ ಗಿಡಮರಗಳನ್ನು ಬೆಳೆಸಿದರೆ ಅದೇ ಅವರಿಗೆ ಕೊಡುವ ಕೊಡುಗೆ.
*ಸಿದ್ದು ಸವದಿ,
ಶಾಸಕರು ತೇರದಾಳ ಮತಕ್ಷೇತ್ರ.
ಈ ಪ್ರದೇಶದಲ್ಲಿ ಈಗಾಗಲೇ 10 ಸಾವಿರಕ್ಕೂ ಅಧಿಕ ಬೇವಿನ ಮರಗಳನ್ನು ನೆಟ್ಟಿದ್ದು, ಅವೆಲ್ಲ ಈಗ ಆಳೆತ್ತರಕ್ಕೆ ಬೆಳೆದು ನಿಂತಿವೆ. ಸಾರ್ವಜನಿಕರು ಈ ಜಾಗೆಯನ್ನು ಒತ್ತುವರಿ ಮಾಡಬಾರದು. ಮತ್ತು ಅರಣ್ಯದಲ್ಲಿರುವ ಗಿಡಮರಗಳಿಗೆ ಹಾನಿ ಮಾಡಬಾರದು.
*ವಾಸಿಂ ತೇನಗಿ, ಸಹಾಯಕ ಅರಣ್ಯ
ಸಂರಕ್ಷಣಾಧಿಕಾರಿ ಜಮಖಂಡಿ
*ಕಿರಣ ಶ್ರೀಶೈಲ ಆಳಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Afro-Asia Cup: 2 ದಶಕಗಳ ಬಳಿಕ ಆಫ್ರೋ -ಏಷ್ಯಾ ಕಪ್?
Jharkhand; ಇಂಡಿಯಾ ಒಕ್ಕೂಟದ “ಸಪ್ತ ಗ್ಯಾರಂಟಿ’!: ಮಹಿಳೆಯರಿಗೆ ಮಾಸಿಕ 2,500 ರೂ.
T-Shirt: ಫ್ಲಿಪ್‌ಕಾರ್ಟ್, ಮೀಶೋದಲ್ಲಿ ಲಾರೆನ್ಸ್ ಬಿಷ್ಣೋಯ್ ಟೀಶರ್ಟ್ ಮಾರಾಟ: ಆಕ್ರೋಶ
Daily Horoscope; ಇಷ್ಟಾರ್ಥ ಸಿದ್ಧಿಯ ದಿನ..ಉದ್ಯೋಗ ಸ್ಥಾನದಲ್ಲಿ ಸದ್ಯಕ್ಕೆ ನಿಶ್ಚಿಂತೆ
Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.